ಸಾರಾಂಶ
ನರಸಿಂಹರಾಜಪುರ: ತಾಲೂಕಿನಲ್ಲಿ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಸುರಿದ ಭಾರೀ ಗಾಳಿ, ಮಳೆಯಿಂದ ಹರಾವರಿ ಗ್ರಾಮದ ಜೋಗಿಮಕ್ಕಿಯ ಕಮಲ ಶೆಟ್ಟಿ ಎಂಬುವರ ಮನೆ ಮೇಲೆ ಮರ ಬಿದ್ದು ಹೆಂಚುಗಳು ಪುಡಿಯಾಗಿದೆ.
ನರಸಿಂಹರಾಜಪುರ: ತಾಲೂಕಿನಲ್ಲಿ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಸುರಿದ ಭಾರೀ ಗಾಳಿ, ಮಳೆಯಿಂದ ಹರಾವರಿ ಗ್ರಾಮದ ಜೋಗಿಮಕ್ಕಿಯ ಕಮಲ ಶೆಟ್ಟಿ ಎಂಬುವರ ಮನೆ ಮೇಲೆ ಮರ ಬಿದ್ದು ಹೆಂಚುಗಳು ಪುಡಿಯಾಗಿದೆ.
ಮೇಗರಮಕ್ಕಿ ಗ್ರಾಮದ ಕೆಚ್ಚೆಬ್ಬಿಯ ಅರುಣ ಎಂಬುವರ ಮನೆ ಗೋಡೆ ಉರುಳಿ ಬಿದ್ದಿದೆ. ಯಾವುದೇ ಪ್ರಾಣ ಹಾನಿ ಆಗಿಲ್ಲ. ಅಳೇಹಳ್ಳಿ ಗ್ರಾಮದ ಹೆನ್ನಂಗಿಯ ಅಣ್ಣಯ್ಯ ಗೌಡ ಎಂಬುವರ ಎಮ್ಮೆ ಮೇಯಲು ಕಾಡಿಗೆ ಹೋದ ಸಮಯದಲ್ಲಿ ಎಮ್ಮೆ ಮೇಲೆ ಮರ ಉರುಳಿ ಎಮ್ಮೆ ಮೃತಪಟ್ಟಿದೆ.ಶನಿವಾರ ಬೆಳಿಗ್ಗೆಯಿಂದ ಪ್ರಾರಂಭವಾದ ಮಳೆ ಬಿಟ್ಟೂ , ಸುರಿಯುತ್ತಿದೆ. ಭಾನುವಾರ ಆಗಾಗ್ಗೆ ಗಾಳಿಯೊಂದಿಗೆ ಮಳೆ ಸುರಿದಿದೆ. ಗಾಳಿಯಿಂದ ಮರದೆ ಗೆಲ್ಲುಗಳು ವಿದ್ಯುತ್ ತಂತಿ ಮೇಲೆ ಬೀಳುತ್ತಿದ್ದು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ.