ಸಾರಾಂಶ
ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದೆ.
ಮಡಿಕೇರಿ :ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದೆ.
ಜಿಲ್ಲೆಯ ಕುಶಾಲನಗರ, ಪೊನ್ನಂಪೇಟೆ, ನಾಲ್ಕೇರಿ, ಶ್ರೀಮಂಗಲ, ಕಾನೂರು, ಹೈಸೊಡ್ಲೂರು, ಕುಟ್ಟಂದಿ, ಮೂರ್ನಾಡು ಮತ್ತಿತರ ಕಡೆಗಳಲ್ಲಿ ಮಳೆಯಾಗಿದೆ.------------------------------------
ಕುಶಾಲನಗರ: ಗಾಳಿ ಸಹಿತ ಮಳೆಕುಶಾಲನಗರ: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ವೇಳೆ ಗಾಳಿ ಸಹಿತ ಮಳೆ ಸುರಿಯಿತು. ದಿಢೀರನೆ ಸುರಿದ ಮಳೆಯಿಂದ ಪಟ್ಟಣ ವ್ಯಾಪ್ತಿಯಲ್ಲಿ ಜನಜೀವನ ಸ್ವಲ್ಪ ಏರುಪೇರು ಗೋಚರಿಸಿತು.ಬಿರು ಬಿಸಿಲಿನ ನಡುವೆ ಬಿದ್ದ ಮಳೆಯಿಂದ ಭೂಮಿ ಅಲ್ಪಸ್ವಲ್ಪ ತಂಪಾದಂತೆ ಕಂಡು ಬಂತು.----------------------------------------
ನಾಳೆಯಿಂದ ಭಗವತಿ ದೇವಸ್ಥಾನದ ವಾರ್ಷಿಕ ಮಹಾಪೂಜೆಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರುಇಲ್ಲಿಗೆ ಸಮೀಪದ ತ್ಯಾಗತ್ತೂರು ಗ್ರಾಮದ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕ ಮಹಾಪೂಜೆ ಮಾ. 24, 25, 26, 27ರಂದು ನಡೆಯಲಿದೆ.ಸೋಮವಾರ ಸಂಜೆ ತಕ್ಕರ ಮನೆಯಿಂದ ಭಂಡಾರ ತರುವುದು. ಶ್ರೀ ದೇವಿ ಬಲಿ ನಂತರ ಮಹಾಪೂಜೆ ನಡೆಯಲಿದೆ. 25 ರಂದು 3 ಗಂಟೆಯಿಂದ ಪಟ್ಟಣಿ, ಎತ್ತುಹೇರು, ಶ್ರೀ ದೇವಿ ಬಲಿ ಅಲಂಕಾರ ಪೂಜೆ ನಡೆಯಲಿದೆ.
26 ರಂದು ಬೆಳಗ್ಗೆ 10.30 ಗಂಟೆಯಿಂದ ತುಲಾಭಾರ ಸೇವೆ, ಮಹಾಪೂಜೆ, ಶ್ರೀ ದೇವಿಯ ಅವಭೃತ ಸ್ನಾನ ನಂತರ ವಿವಿಧ ಪೂಜೆಗಳು ನಡೆಯಲಿದೆ. ಮೂರು ದಿನಗಳ ಕಾಲ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. 27 ರಂದು ಬೆಳಗ್ಗೆ 9 ಗಂಟೆಯಿಂದ ಶುದ್ಧ ಕಳಶ, ಮಹಾಪೂಜೆ, ನಂತರ ಅನ್ನದಾನ ನಡೆಯಲಿದೆ ಎಂದು ತಕ್ಕರು ಆಡಳಿತ ಮಂಡಳಿ ಒಕ್ಕಲು ಸದಸ್ಯರು, ಉತ್ಸವ ಸಮಿತಿ ಸದಸ್ಯರು ತಿಳಿಸಿದ್ದಾರೆ.