ಕಳೆದ ಒಂದು ವಾರದಿಂದ ವಿಪರೀತ ಬಿಸಿಲು ಹಾಗೂ ಧಗೆಯಿಂದ ಬೆವತು ಹೋಗಿದ್ದ ನಾಪೋಕ್ಲು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಗುರುವಾರ ಮಧ್ಯಾಹ್ನ ಸುರಿದ ಮಳೆ ತಂಪೆರೆದಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಳೆದ ಒಂದು ವಾರದಿಂದ ವಿಪರೀತ ಬಿಸಿಲು ಹಾಗೂ ಧಗೆಯಿಂದ ಬೆವತು ಹೋಗಿದ್ದ ನಾಪೋಕ್ಲು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಗುರುವಾರ ಮಧ್ಯಾಹ್ನ ಸುರಿದ ಮಳೆ ತಂಪೆರೆದಿದೆ.ಗುರುವಾರ ಬೆಳಗ್ಗೆಯಿಂದಲೇ ವಾತಾವರಣದಲ್ಲಿ ಧಗೆ ಕಾಣಿಸಿಕೊಂಡಿತ್ತು. ಆದರೆ, ಮಧ್ಯಾಹ್ನ ದಿಢೀರ್ ಭಾನಂಗಳದಲ್ಲಿ ಮೋಡಗಳು ಆವರಿಸಿ ಬಿರುಸಿನ ಮಳೆ ಆರಂಭವಾಯಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹರಿಯಿತು.
ಹವಾಮಾನದ ಈ ಹಠಾತ್ ಬದಲಾವಣೆಯಿಂದಾಗಿ ತೀವ್ರ ಶಾಖದಿಂದ ಕಂಗಾಲಾಗಿದ್ದ ಸಾರ್ವಜನಿಕರು ಹಾಗೂ ರೈತರು ನಿಟ್ಟುಸಿರು ಬಿಡುವಂತಾಗಿದೆ.