ಸಾರಾಂಶ
ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಮಳೆ ಸುರಿಯುತ್ತಿದ್ದು ಹಳ್ಳಗಳು ನೀರಿನ ರಭಸದಿಂದ ತುಂಬಿ ಹರಿಯುತ್ತಿವೆ. ಚಿಕೇನಕೊಪ್ಪ ಗ್ರಾಮದ ಬಳಿ ಮುಖ್ಯ ರಸ್ತೆಯ ಹಳ್ಳಕ್ಕೆ ಬ್ರೀಡ್ಜ್ಂ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಜನರ ಸಂಚಾರಕ್ಕೆ ಅನುಕೂಲ ಆಗಲೆಂದು ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿತ್ತು.
ಕುಕನೂರು:
ತಾಲೂಕಿನ ಚಿಕೇನಕೊಪ್ಪ ಗ್ರಾಮದ ಬಳಿ ನೂತನ ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುತ್ತಿದ್ದು, ಸಂಚಾರಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಮೇಲ್ಸೆತುವೆ ಮಳೆ ಅಬ್ಬರಕ್ಕೆ ಕೊಚ್ಚಿ ಹೋಗಿದೆ.ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಮಳೆ ಸುರಿಯುತ್ತಿದ್ದು ಹಳ್ಳಗಳು ನೀರಿನ ರಭಸದಿಂದ ತುಂಬಿ ಹರಿಯುತ್ತಿವೆ. ಚಿಕೇನಕೊಪ್ಪ ಗ್ರಾಮದ ಬಳಿ ಮುಖ್ಯ ರಸ್ತೆಯ ಹಳ್ಳಕ್ಕೆ ಬ್ರೀಡ್ಜ್ಂ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಜನರ ಸಂಚಾರಕ್ಕೆ ಅನುಕೂಲ ಆಗಲೆಂದು ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಹಳ್ಳದ ನೀರಿನ ಹರಿವು ಹೆಚ್ಚಾದ ಕಾರಣ ತಾತ್ಕಾಲಿಕ ಮೇಲ್ಸೆತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.
ಸಂಚಾರಕ್ಕೆ ಅನಾನುಕೂಲ:ಭಟಪ್ಪನಹಳ್ಳಿ-ಚಿಕೇನಕೊಪ್ಪ ಸಂಪರ್ಕಿಸುವ ಸೇತುವೆ ಇದ್ದಾಗಿದ್ದು ಕೊಚ್ಚಿ ಹೋದ ಕಾರಣ ಚಿಕೇನಕೊಪ್ಪ ಗ್ರಾಮಸ್ಥರ ಸಂಚಾರಕ್ಕೆ ಅನಾನುಕೂಲವಾಗಿದೆ. ಅಲ್ಲದೆ ಭಟಪ್ಪನಹಳ್ಳಿ, ಚಿಕೇನಕೊಪ್ಪ ಮಾರ್ಗದ ಸಂಚಾರ ಸಂಪರ್ಕ ಕಡಿತವಾಗಿದೆ. ಜನರು ಚಿಕೇನಕೊಪ್ಪ ದ್ಯಾಂಪೂರು ಗ್ರಾಮದ ಮೂಲಕ ಕುಕನೂರು ತಲುಪುತ್ತಿದ್ದಾರೆ. ಚಿಕೇನಕೊಪ್ಪ ಗ್ರಾಮಸ್ಥರು ಸಹ ಸುತ್ತಿಟ್ಟು ದ್ಯಾಂಪೂರು ಗ್ರಾಮದ ಮಾರ್ಗದ ಮೂಲಕ ಗ್ರಾಮಕ್ಕೆ ತೆರಳುತ್ತಿದ್ದಾರೆ. ಸರ್ಕಾರಿ ಬಸ್‌ಗಳು ಭಟಪ್ಪನಹಳ್ಳಿ ಮಾರ್ಗದ ಮೂಲಕ ತೆರಳು ಸಂಪರ್ಕ ಇಲ್ಲವಾಗಿದೆ.