ಮಳೆ: ಮರ ಬಿದ್ದು ಆಟೋ ಜಖಂ

| Published : May 07 2025, 12:54 AM IST

ಸಾರಾಂಶ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿರುವ ನಡುವೆ ಬಲವಾಗಿ ಬೀಸಿದ ಗಾಳಿಗೆ ಮರವೊಂದು ಆಟೋ ಮೇಲೆ ಬಿದ್ದ ಪರಿಣಾಮ ಆಟೋ ಸಂಪೂರ್ಣವಾಗಿ ಜಖಂ ಆಗಿರುವ ಘಟನೆ ತರೀಕೆರೆ ತಾಲೂಕಿನ ಕಲ್ಲತ್ತಗಿರಿ ದೇವಾಲಯದ ಬಳಿ ನಡೆದಿದೆ.

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿರುವ ನಡುವೆ ಬಲವಾಗಿ ಬೀಸಿದ ಗಾಳಿಗೆ ಮರವೊಂದು ಆಟೋ ಮೇಲೆ ಬಿದ್ದ ಪರಿಣಾಮ ಆಟೋ ಸಂಪೂರ್ಣವಾಗಿ ಜಖಂ ಆಗಿರುವ ಘಟನೆ ತರೀಕೆರೆ ತಾಲೂಕಿನ ಕಲ್ಲತ್ತಗಿರಿ ದೇವಾಲಯದ ಬಳಿ ನಡೆದಿದೆ.

ತರೀಕೆರೆ ತಾಲೂಕಿನ ಗೇರುಮರಡಿಯ ಆಟೋ ಚಾಲಕ ಮಳೆ ಬರುವ ವೇಳೆಯಲ್ಲಿ ಮರದಡಿ ಆಟೋ ನಿಲ್ಲಿಸಿ ನಿಂತಿದ್ದರು. ಈ ವೇಳೆಯಲ್ಲಿ ಬಲವಾಗಿ ಬೀಸಿದ ಗಾಳಿಗೆ ಮರ ಆಟೋ ಮೇಲೆ ಬಿದ್ದಿದೆ. ಬೃಹತ್‌ ಮರದಡಿ ಸಿಲುಕಿದ ಆಟೋ ಸಂಪೂರ್ಣವಾಗಿ ಜಖಂ ಆಗಿದೆ. ಚಾಲಕನ ಕೈಗೂ ಪೆಟ್ಟಾಗಿದೆ.

ಈ ಘಟನೆ ನಡೆಯುವ ಸ್ವಲ್ಪ ಸಮಯದ ಮೊದಲು ದಾವಣಗೆರೆಗೆ ಸೇರಿರುವ ಪ್ರವಾಸಿಗರ ಕಾರೊಂದು ಇದೇ ಮಾರ್ಗದಲ್ಲಿ ಮುಂದೆ ಸಾಗಿದೆ. ಈ ಮಾರ್ಗದಲ್ಲಿ ಪ್ರತಿದಿನ ಪ್ರವಾಸಿಗರು ಕಲ್ಲತ್ತಗಿರಿ, ಕೆಮ್ಮಣ್ಣಗುಂಡಿಗೆ ತೆರಳುತ್ತಿರುತ್ತಾರೆ. ಜಿಲ್ಲೆಯಲ್ಲಿ ಮಂಗಳವಾರ ಬಿಡುವು ನೀಡಿತ್ತು.

6 ಕೆಸಿಕೆಎಂ 4ತರೀಕೆರೆ ತಾಲೂಕಿನ ಕಲ್ಲತ್ತಗಿರಿ ಬಳಿ ಮರವೊಂದು ಬಿದ್ದು ಆಟೋ ಜಖಂ ಆಗಿರುವುದು.