ಅಡಕೆ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದ ಮಳೆ

| Published : Jul 25 2024, 01:28 AM IST / Updated: Jul 25 2024, 01:29 AM IST

ಸಾರಾಂಶ

ಕೊಪ್ಪ: ಬೆಲೆ ಏರಿಳಿಕೆ, ವಿದೇಶದಿಂದ ಬರುವ ಅಡಕೆ ಆಮದಿನ ಸಂಕಷ್ಟದೊಂದಿಗೆ ಪ್ರಕೃತಿ ವಿಕೋಪದ ಹಳದಿ ಎಲೆ ರೋಗ, ಎಲೆಚುಕ್ಕಿ ರೋಗ, ಮುಂತಾದ ರೋಗಗಳಿಂದ ಕಂಗೆಟ್ಟ ಅಡಕೆ ಬೆಳೆಗಾರರು ಮತ್ತೊಂದು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕೊಪ್ಪ: ಬೆಲೆ ಏರಿಳಿಕೆ, ವಿದೇಶದಿಂದ ಬರುವ ಅಡಕೆ ಆಮದಿನ ಸಂಕಷ್ಟದೊಂದಿಗೆ ಪ್ರಕೃತಿ ವಿಕೋಪದ ಹಳದಿ ಎಲೆ ರೋಗ, ಎಲೆಚುಕ್ಕಿ ರೋಗ, ಮುಂತಾದ ರೋಗಗಳಿಂದ ಕಂಗೆಟ್ಟ ಅಡಕೆ ಬೆಳೆಗಾರರು ಮತ್ತೊಂದು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಲೆನಾಡು ಭಾಗದಲ್ಲಿ ಅತಿಯಾಗಿ ಸುರಿಯುತ್ತಿರುವ ಮಳೆಯಿಂದ ಅಡಕೆಗೆ ಔಷಧಿ ಸಿಂಪಡಿಸಲು ಆಗದೆ, ಮತ್ತೊಂದೆಡೆ ಕಾರ್ಮಿಕರ ಕೊರತೆ ಎದುರಾಗಿರುವ ಬೆನ್ನಲ್ಲೇ ಅಡಕೆ ಮರಗಳ ನಿರ್ವಹಣೆಗೆ ತೆಗೆದಿದ್ದಂತಹ ಕಾಲುವೆ (ಕಲ್ಲು) ಯಲ್ಲಿ ನೀರು ತುಂಬಿದ್ದು ಅಡಕೆ ತೋಟಗಳು ಕಂಪದ ಗದ್ದೆಯಂತೆ ಕಾಲು ಉಗಿಯುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಬೆಳೆಯ ಬೇಕಾದ ಅಡಕೆ ಕಾಯಿಗಳು ಎಡೆಬಿಡದ ಮಳೆಯಿಂದಾಗಿ ಚಿಗುರಿನಲ್ಲಿಯೇ ಉದುರಿ ಬೀಳುತ್ತಿದೆ. ಹೆಚ್ಚು ಪ್ರಮಾಣದ ಚಿಗುರು ಕಾಯಿಗಳು ಉದುರುತ್ತಿರುವುದರಿಂದ ಈ ವರ್ಷ ಅಡಕೆ ಬೆಳೆ ಸಂಪೂರ್ಣ ಕೈಕಚ್ಚಲಿದೆ. ಇದೇ ರೀತಿ ಮಳೆ ಮುಂದುವರಿದಲ್ಲಿ ತೋಟಗಳು ಕೊಳೆ ರೋಗಕ್ಕೆ ತುತ್ತಾಗಿ ಹಲವು ತೋಟಗಳೇ ನಾಶವಾಗುವ ಭೀತಿ ಎದುರಾಗಿದೆ ಎಂದು ಮಲೆನಾಡು ಭಾಗದ ಅನೇಕ ಕೃಷಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.