ಸಾರಾಂಶ
ಮಳೆ ಬರುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆಯ ವರದಿಯಂತೆ ಹಾಸನ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಭಾನುವಾರ ಬೆಳಗಿನಿಂದಲೇ ಮಳೆ ಸುರಿಯಲಾರಂಭಿಸಿ ಚಿಕ್ಕಪುಟ್ಟ ವ್ಯಾಪಾರ ಮಾಡುವವರು ಸಮಸ್ಯೆ ಎದುರಿಸಬೇಕಾಯಿತು. ಮಳೆ ಬೆಳಗಿನಿಂದಲೆ ನಿರಂತರವಾಗಿ ಬರುತ್ತಿದ್ದರೂ ಆಗಾಗ ಸಲ್ಪ ಬಿಡುವು ನೀಡಿ ಮತ್ತೆ ಮತ್ತೆ ಮಳೆ ರಭಸದಿಂದ ಸುರಿಯುತ್ತಿತ್ತು. ಹಾಸನ ಜಿಲ್ಲೆಯ ಅನೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳಿಗೆ ಶಾಲೆ ರಜೆ ಇರುವುದರಿಂದ ಅಷ್ಟೊಂದು ತೊಂದರೆ ಆಗಲಿಲ್ಲ. ಅನೇಕ ಕೆರೆ ಕಟ್ಟೆಗಳು ತುಂಬಿರುವ ಕಾರಣ ರೈತರ ಮೊಗದಲ್ಲಿ ಮಂದಹಾಸ ಕಾಣಿಸಿತು.
ಕನ್ನಡಪ್ರಭ ವಾರ್ತೆ ಹಾಸನ
ಮಳೆ ಬರುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆಯ ವರದಿಯಂತೆ ಹಾಸನ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಭಾನುವಾರ ಬೆಳಗಿನಿಂದಲೇ ಮಳೆ ಸುರಿಯಲಾರಂಭಿಸಿ ಚಿಕ್ಕಪುಟ್ಟ ವ್ಯಾಪಾರ ಮಾಡುವವರು ಸಮಸ್ಯೆ ಎದುರಿಸಬೇಕಾಯಿತು.ಮಳೆ ಬೆಳಗಿನಿಂದಲೆ ನಿರಂತರವಾಗಿ ಬರುತ್ತಿದ್ದರೂ ಆಗಾಗ ಸಲ್ಪ ಬಿಡುವು ನೀಡಿ ಮತ್ತೆ ಮತ್ತೆ ಮಳೆ ರಭಸದಿಂದ ಸುರಿಯುತ್ತಿತ್ತು. ಹಾಸನ ಜಿಲ್ಲೆಯ ಅನೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳಿಗೆ ಶಾಲೆ ರಜೆ ಇರುವುದರಿಂದ ಅಷ್ಟೊಂದು ತೊಂದರೆ ಆಗಲಿಲ್ಲ. ಅನೇಕ ಕೆರೆ ಕಟ್ಟೆಗಳು ತುಂಬಿರುವ ಕಾರಣ ರೈತರ ಮೊಗದಲ್ಲಿ ಮಂದಹಾಸ ಕಾಣಿಸಿತು.
ಜಿಲ್ಲೆಯ ಹಲವೆಡೆ ಮಳೆಗೆ ರಸ್ತೆಗಳು ಹಾಳಾಗಿದ್ದು, ಸಾಕಷ್ಟು ಡಾಂಬರ್ ರಸ್ತೆಗಳು ಕೂಡ ಗುಣಮಟ್ಟದ ಕೊರತೆಯಿಂದಾಗಿ ಹಾಳಾಗಿವೆ. ವಿಶೇಷವಾಗಿ ಮಲೆನಾಡು ಭಾಗದಲ್ಲಿ ರಸ್ತೆಗಳ ಸ್ಥಿತಿ ಅಧೋಗತಿಯಾಗಿದೆ.