ಸಾರಾಂಶ
ಮಾಗಡಿ: ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಮಾಗಡಿ ಪಟ್ಟಣದ ಎನ್ಇಎಸ್ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆ ಪ್ರವಾಸಿ ಮಂದಿರದ ಬಳಿ ಇರುವ ರಾಜ ಕಾಲುವೆಗೆ ರಸ್ತೆ ಮಣ್ಣು ಕಟ್ಟಿಕೊಂಡು ತೋಟಗಾರಿಕೆ ಇಲಾಖೆಗೆ ಮಳೆ ನೀರು ನುಗ್ಗಿ ಅವಾಂತರ ಉಂಟಾಯಿತು.

ಎನ್ಇಎಸ್ ವೃತ್ತದಿಂದ ಕೆಂಪೇಗೌಡ ವೃತ್ತದವರೆಗೂ ರಸ್ತೆಯ ಅಗಲೀಕರಣದಿಂದ ಪ್ರವಾಸಿ ಮಂದಿರದ ಬಳಿ ದೊಡ್ಡ ಮೋರಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ರಾಜಕಾಲುವೆಗೆ ಮಣ್ಣು ಕುಸಿದ್ದು ತೋಟಗಾರಿಕೆ ಇಲಾಖೆಯ ಕಾಂಪೌಂಡ್ ಬಳಿ ಇದ್ದ ವಿದ್ಯುತ್ ಕಂಬ ಮುರಿದುಬಿದ್ದು ಕಾಂಪೌಂಡ್ ಕುಸಿದು ತೋಟಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆ ಕಚೇರಿ ಆವರಣಕ್ಕೆ ಮಳೆ ನೀರುನುಗ್ಗಿ ಕೆರೆಯಂತಾಗಿ ನೌಕರರಿಗೆ ತೀವ್ರ ತೊಂದರೆ ಉಂಟು ಮಾಡಿತು.ತೋಟಗಾರಿಕೆ ಮತ್ತು ಅರಣ್ಯ ಇಲಾಖೆಗೆ ನೀರು ನುಗ್ಗಿದರೂ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದು ನೀರು ಹೊರ ಹಾಕಲು ಹರಸಾಹಸ ಪಡುತ್ತಿದ್ದರು. ಮಂಗಳವಾರ ಕೂಡ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು ಮತ್ತೆ ಮಳೆ ಬಂದರೆ ಇದೇ ಸಮಸ್ಯೆ ಉಂಟಾಗಲಿದೆ ಎಂದು ನೌಕರರು ತಿಳಿಸಿದ್ದಾರೆ.