ಜಾಗೃತಿ ಮೂಡಿಸಿ ಮತದಾನ ಪ್ರಮಾಣ ಹೆಚ್ಚಿಸಿ: ಯಶವಂತಕುಮಾರ

| Published : Apr 05 2024, 01:00 AM IST

ಜಾಗೃತಿ ಮೂಡಿಸಿ ಮತದಾನ ಪ್ರಮಾಣ ಹೆಚ್ಚಿಸಿ: ಯಶವಂತಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರ ಕಡ್ಡಾಯ ಮತ ಚಲಾವಣೆ ಮಾಡಬೇಕಿದ್ದು, ಈ ಕುರಿತು ಇತರರಿಗೂ ಅರಿವು ಮೂಡಿಸಿ. ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಬೇಕು ಎಂದು ತಾಲೂಕು ಸ್ವೀಪ್‌ ಸಮಿತಿ ಅಧ್ಯಕ್ಷರು ಹಾಗೂ ತಾಪಂ ಇಒ ಯಶವಂತಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರ ಕಡ್ಡಾಯ ಮತ ಚಲಾವಣೆ ಮಾಡಬೇಕಿದ್ದು, ಈ ಕುರಿತು ಇತರರಿಗೂ ಅರಿವು ಮೂಡಿಸಿ. ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಬೇಕು ಎಂದು ತಾಲೂಕು ಸ್ವೀಪ್‌ ಸಮಿತಿ ಅಧ್ಯಕ್ಷರು ಹಾಗೂ ತಾಪಂ ಇಒ ಯಶವಂತಕುಮಾರ ಹೇಳಿದರು.

ಪಟ್ಟಣದ ತಾಪಂ ಆವರಣದಲ್ಲಿ ಮತದಾರರಿಗೆ ಮತದಾನದ ಜಾಗೃತಿ ಮೂಡಿಸಲು ಸವದತ್ತಿ ತಾಲೂಕು ಸ್ವೀಪ್ ಸಮಿತಿ ಹಮ್ಮಿಕೊಂಡಿದ್ದ ಬೈಕ್ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕು ಸ್ವೀಪ್‌ ಸಮಿತಿ, ಗ್ರಾಮ ಪಂಚಾಯತಿ ಮತ್ತು ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ವಿನೂತನವಾಗಿ ಸ್ವೀಪ್ (ಐಇಸಿ) ಚಟುವಟಿಕೆ ಹಮ್ಮಿಕೊಳ್ಳುತ್ತಿದ್ದು, ಜನರಲ್ಲಿ ಮತದಾನದ ಜಾಗೃತಿಗೋಸ್ಕರ ಬೈಕ್ ರ್‍ಯಾಲಿ ಆಯೋಜಿಸಲಾಗಿದೆ ಎಂದರು.

ನನ್ನ ಮತ ಮಾರಾಟಕಿಲ್ಲ, ಮತದಾನ ಮಾಡಿದವನೇ ಮಹಾಶೂರ, ಓಟ ಮಾಡಿದವನೆ ಹೀರೋ, ಮತದಾನದಿಂದ ವಂಚಿತರಾಗಬೇಡಿ, ನಮ್ಮ ಮತ ನಮ್ಮ ಹಕ್ಕು, ಆಮಿಷಕ್ಕೆ ಮರುಳಾಗದಿರಿ ಯೋಚಿಸಿ ಮತ ಚಲಾಯಿಸಿ, ವಿವಿಧ ಮತಜಾಗೃತಿ ಘೋಷಣೆ ಕೂಗುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಡಾ.ಅನಿಲ ಮರಲಿಂಗಣ್ಣವರ, ತಾಪಂ ಸಹಾಯಕ ನಿರ್ದೇಶಕರು(ಪಂ.ರಾ), ತಾಪಂ ವ್ಯವಸ್ಥಾಪಕರು, ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ತಾಪಂ ತಾಂತ್ರಿಕ ಸಂಯೋಜಕರು, ತಾಪಂ ಎಂಐಎಸ್‌ ಸಂಯೋಜಕರು, ತಾಪಂ ಐಇಸಿ ಸಂಯೋಜಕರು, ಬಿಎಫ್‌ಟಿ, ಗ್ರಾಪಂ ಮತ್ತು ತಾಪಂ ಸಿಬ್ಬಂದಿ ಭಾಗವಹಿಸಿದ್ದರು.