ಘನತೆಯ ಬದುಕಿಗೆ ಅಡ್ಡಿಯಾದರೆ ಧ್ವನಿ ಎತ್ತಿ

| Published : Apr 20 2025, 01:52 AM IST

ಸಾರಾಂಶ

ಭರಮಸಾಗರ ಸಮೀಪದ ಕಾಲ್ಕೆರೆಯಲ್ಲಿ ನಡೆದ ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಪರಿವರ್ತನಾ ಸಭೆಯಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.‌ಮಂಜುನಾಥ್‌ ಮಾತನಾಡಿದರು.

ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟದ ಪರಿವರ್ತನೆ ಸಭೆಯಲ್ಲಿ ಡಾ.ಗಿರೀಶ್ ಹೇಳಿಕೆ ಕನ್ನಡಪ್ರಭ ವಾರ್ತೆ ಸಿರಿಗೆರೆ

ಘನತೆಯೊಂದಿಗೆ ಬದುಕುವುದು ಎಲ್ಲರ ಹಕ್ಕು. ಅದಕ್ಕೆ ಅಡ್ಡಿ ಬಂದಲ್ಲಿ ಧ್ವನಿ ಎತ್ತಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್‌ ಹೇಳಿದರು.

ಭರಮಸಾಗರದ ಕಾಲ್ಕೆರೆ ಸಮೀಪ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಕಾಲ್ಕೆರೆಯ ಗುಲಾಬಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನದ ಕಾರ್ಯಕ್ರಮದಡಿಯಲ್ಲಿ ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟದ ಪರಿವರ್ತನೆ ಸಭೆ ಅವರು ಉದ್ದೇಶಿಸಿ ಮಾತನಾಡಿದರು.

ಎಲ್ಲಾ ಗ್ರಾಮಗಳಲ್ಲಿಯೂ ಸ್ತ್ರೀ ಶಕ್ತಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮ ಪಂಚಾಯತಿಗಳಲ್ಲಿ ಶ್ರೀ ಗುಲಾಬಿ ಗ್ರಾಪಂ ಮಟ್ಟದ ಒಕ್ಕೂಟಗಳ ಕಾರ್ಯನಿರ್ವಹಿಸುತ್ತಿವೆ. ಆದರೂ ಸಹ ಸಾಮಾಜಿಕ ಪರಿವರ್ತನೆ ಹೊಂದಿರುವ ಪ್ರಮಾಣ ಅತಿ ಕಡಿಮೆ ಇದೆ. ಮಹಿಳಾ ದೌರ್ಜನ್ಯ, ಬಾಲ್ಯವಿವಾಹ, ಲಿಂಗ ತಾರತಮ್ಯ, ಅಪೌಷ್ಟಿಕತೆ, ಮಕ್ಕಳ ಹಕ್ಕುಗಳ ಉಲ್ಲಂಘನೆ, ಬಾಲ ಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಕಡಿಮೆಯಾಗಿ ಗುಣಾತ್ಮಕ ಜೀವನ ಶೈಲಿ ನಿಮ್ಮದಾಗುವ ನಿಟ್ಟಿನಲ್ಲಿ ಒಕ್ಕೂಟವು ಕೆಲಸ ಮಾಡಬೇಕು ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಅಪ್ರಾಪ್ತ ಮಕ್ಕಳ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಎಲ್ಲರೂ ಜಾಗೃತರಾಗಬೇಕು. ಜೊತೆಗೆ ಸುರಕ್ಷಿತ ಮಾತೃತ್ವ ಅಭಿಯಾನದ ಮಹತ್ವವನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಪುರುಷರ ಸಹಭಾಗಿತ್ವ ಬರಬೇಕಾದರೆ ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟ ಕುಟುಂಬ ಕಲ್ಯಾಣಕ್ಕೆ ಪರಿವರ್ತನೆ ಮಾಡಿ ಎಂದರು. ಪರಿವರ್ತನಾ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ನಿರ್ಮಲ, ಕಾರ್ಯದರ್ಶಿ ಗಿರಿಜಮ್ಮ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಶ್ರೀ ನಿವಾಸ್, ಸದಸ್ಯರಾದ ಸುಜಾತ ಆರೋಗ್ಯ ಇಲಾಖೆಯ ಆಂಜನೇಯ ಪ್ರವೀಣಕುಮಾರ್, ರಜಿಯಾಬೇಗಂ, ವಿನಯ್ ಸಿಂದ್ಯಾ ಆಶಾ ಕಾರ್ಯಕರ್ತೆ ಶಾರದಮ್ಮ ಅಂಗನವಾಡಿ ಶಿಕ್ಷಕರಾದ ಸಾಕಮ್ಮ ಹನುಮಕ್ಕ ಎಲ್ಲಾ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.