6ನೇ ದಿನಕ್ಕೆ ರೈತ ಸಂಘದ ಧರಣಿ ಅಂತ್ಯ

| Published : Feb 12 2025, 12:32 AM IST

ಸಾರಾಂಶ

ಕೊಳ್ಳೇಗಾಲದ ತಾಪಂ ಮುಂಭಾಗ ನಡೆಯುತ್ತಿದ್ದ 6ನೇ ದಿನದ ಧರಣಿ ಸ್ಥಳಕ್ಕೆ ಜಿಪಂ ಕಾರ್ಯದರ್ಶಿ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಪರಿಣಾಮ ಧರಣಿಯನ್ನು ಕೈಬಿಡಲಾಯಿತು.

ಕೊಳ್ಳೇಗಾಲ: ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ವಿವಿಧ ಸಂಘಟನೆಗಳ ಧನಗೆರೆ ಪಿಡಿ ಹಾಗೂ ಇಒ ವರ್ತನೆ ಖಂಡಿಸಿ ನಡೆಸುತ್ತಿರುವ ಧರಣಿ ಮಂಗಳವಾರ 6ನೇ ದಿನಕ್ಕೆ ಕಾಲಿಟ್ಟಿದ್ದು ಈ ವೇಳೆ ಜಿಪಂನ ಉಪಕಾರ್ಯದರ್ಶಿ ಲಕ್ಷ್ಮಿ ಪ್ರತಿಭಟನಾಕಾರರ ಅಹವಾಲು ಆಲಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದ ಹಿನ್ನೆಲೆ ಧರಣಿ ಅಂತ್ಯಗೊಳಿಸಲಾಯಿತು.ಇ-ಸ್ವತ್ತು ನೀಡುವ ವಿಚಾರದಲ್ಲಿ ಲೋಕಾಯುಕ್ತ ಕಚೇರಿಗೆ ಸುಳ್ಳು ಮಾಹಿತಿ ನೀಡಿರುವ ಧನಗೆರೆ ಗ್ರಾಪಂ ಪಿಡಿಒ, ತಾಲೂಕು ಇಒಗಳ ವಿರುದ್ಧ ಹಾಗೂ ಟಗರಪುರ ಪಂಚಾಯಿತಿಯಿಂದ ಗೋಪಿನಾಥಂ ವರೆಗೂ ವಿಲೇಜ್ ಸೈಟ್ (ಗ್ರಾಮ ಠಾಣೆ) ಹಕ್ಕು ಪತ್ರ ನೀಡಿ ಇ-ಸ್ವತ್ತು ನೀಡುವ ಬಗ್ಗೆ ಅನಿರ್ದಿಷ್ಟಾವಧಿ ಧರಣಿ ಕೈಗೊಂಡ ಪ್ರತಿಭಟನಾಕಾರರನ್ನು ಇಂದು ಪಂಚಾಯತಿ ಆವರಣದಲ್ಲಿ ಜಿಪಂ ಉಪಕಾರ್ಯದರ್ಶಿ ಲಕ್ಷ್ಮೀ ಭೇಟಿ ನೀಡಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು.

ಈ ವೇಳೆ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ರಾಮಕೃಷ್ಣ, ತೇರಂಬಳ್ಳಿ ಮಹದೇವಪ್ಪ, ಮುಳ್ಳೂರು ಷಣ್ಮುಖಸ್ವಾಮಿ, ಮೂರ್ತಿ, ಲಕ್ಷಣಮೂರ್ತಿ, ರೇಚಣ್ಣಸ್ವಾಮಿ, ರಾಮಕೃಷ್ಣ, ರಾಜಣ್ಣ ಮೋಳೆ, ಜಾಗೇರಿ ಸಂಪತ್ತು, ಗೌರಮ್ಮ, ವಿರಭದ್ರಸ್ವಾಮಿ, ಕರವೇ(ಪ್ರವೀಣ್ ಶೆಟ್ಟಿ) ಅಧ್ಯಕ್ಷ ಅಯಾಜ್ ಕನ್ನಡಿಗ, ಸತ್ಯರಾಜು, ನವೀನ್, ಭಾಗ್ಯಲಕ್ಷ್ಮೀ, ನವೀನ್, ಇದ್ರೀಸ್, ನಿಶಾರ್ ಅಹಮದ್, ರಾಣಿ ಇದ್ದರು.