ಕಾಂಗ್ರೆಸ್‌ಗೆ ರೈತ ಸಂಘ ಬೆಂಬಲ, ಅಭ್ಯರ್ಥಿಗೆ ಆನೆ ಬಲ: ಸಚಿವ

| Published : Apr 29 2024, 01:36 AM IST

ಸಾರಾಂಶ

ದೇಶದ ಬೆನ್ನೆಲುಬು ರೈತರು ದಾವಣಗೆರೆ ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲು ಬಾಗಿರುವುದು ಸಂತಸದ ಸಂಗತಿ, ರೈತ ಸಂಘದವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವುದು ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿಗೆ ಆನೆ ಬಲ ಬಂದಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದ ಬೆನ್ನೆಲುಬು ರೈತರು ದಾವಣಗೆರೆ ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲು ಬಾಗಿರುವುದು ಸಂತಸದ ಸಂಗತಿ, ರೈತ ಸಂಘದವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವುದು ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿಗೆ ಆನೆ ಬಲ ಬಂದಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.

ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದರು. ತದನಂತರ ಮಾತನಾಡಿದ ಸಚಿವರು, ನಮಗೆ ಎಲ್ಲೆ ಹೋದರು ರೈತ ಸಂಘದವರು ಪರಿಚಿತರಾಗಿರುವರು. ಆನಗೋಡು ಗ್ರಾಮದಲ್ಲಿ ರೈತರ ಹುತಾತ್ಮ ಭವನ ಮಾಡಬೇಕು, ರೈತರ ಸಮುದಾಯ ಭವನ ನಿರ್ಮಿಸಬೇಕು, ಕೈಗೆಟುಕುವ ದರದಲ್ಲಿ ಕೃಷಿ ಸಾಮಾಗ್ರಿಗಳು ಸಿಗಬೇಕು ಎಂಬ ಹಲವು ಬೇಡಿಕೆಗಳಿಗೆ ಅವುಗಳನ್ನು ಹಂತ ಹಂತವಾಗಿ ಸರಿಪಡಿಸಲಾಗುವುದು ಎಂದರು.

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೊಡ್ಡ ಪ್ರಮಾಣದ ರೈತರಿಗೆ ಉಪಯೋಗಿ ಆಗಿದೆಯೆ ಹೊರತು ಸಣ್ಣ ಹಾಗೂ ಬಡ ರೈತರಿಗೆ ಉಪಯೋಗವಾಗಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ರೈತನ ಮಗಳು, ರೈತರ ಕಷ್ಟಗಳನ್ನು ಕಣ್ಣಾರೆ ಕಂಡವರು. ರೈತರ ಪ್ರತಿ ಹೋರಾಟದಲ್ಲಿ ನಾವುಗಳು ನಿಮ್ಮ ಜತೆ ಇರುತ್ತೇವೆ ಎಂದ ಅವರು, ಮೇ.4ರಂದು ಜಿಲ್ಲೆಗೆ ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದಾರೆ. ತಾವುಗಳೆಲ್ಲ ಕುಟುಂಬ ಸಮೇತರಾಗಿ ಹಸ್ತದ ಗುರುತಿಗೆ ಮತ ನೀಡಿ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನಗೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಚುನಾವಣಾ ಖರ್ಚಿಗಾಗಿ ಯಲದಲ್ಲಿ ಬಡ ರೈತ ಕಾಳೇಶ್ ಎಸ್.ಎಸ್.ಮಲ್ಲಿಕಾರ್ಜುನ್‌ಗೆ 20 ಸಾವಿರ ರು. ದೇಣಿಗೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಜಿಲ್ಲಾ ಕಾರ್ಯದರ್ಶಿ ಚಿನ್ನಸಮುದ್ರ ಶೇಖರನಾಯ್ಕ್, ಜಿಲ್ಲಾ ಸಂಚಾಲಕ ಟಿ.ಆರ್.ಗಿರಿಯಾಪುರ ಲಕ್ಷ್ಮಣ, ಚನ್ನಗಿರಿ ತಾ. ಅಧ್ಯಕ್ಷ ಯಲ್ಲೋದಹಳ್ಳಿ ಕಾಳೇಶ್, ಹೊನ್ನಾಳಿ ಹಾಗೂ ನ್ಯಾಮತಿ ತಾ. ಅಧ್ಯಕ್ಷ ಮಾಸಡಿ ಬರಮಪ್ಪ, ದಾವಣಗೆರೆ ತಾ. ಅಧ್ಯಕ್ಷ ಮಂಡಲೂರು ವಿಶ್ವನಾಥ್, ಜಿಲ್ಲೆಯ ವಿವಿಧ ಭಾಗದ ಮುಖಂಡರಾದ ಕರೆಕಟ್ಟೆ ಕಲಿಂವುಲ್ಲಾ, ಬೆಡಗನೂರು ಚಿದಾನಂದಪ್ಪ, ನಿರಂಜನಗೌಡ, ರಾಜು ಕಂಬಳಿ, ಬೊಮ್ಮನಹಳ್ಳಿ ಬಂಕೆ ಜಯಣ್ಣೆ, ದಾಗಿನಕಟ್ಟೆಯ ಶಾಂತರಾಜ್, ಸುರೇಶ್, ಹರಳಿಪುರ ಧರ್ಮಾಗೌಡರು, ಮಲ್ಲಶೆಟ್ಟಿಹಳ್ಳಿ ಕರಿಬಸಪ್ಪ, ಶ್ರೀನಿವಾಸ್, ಯಲ್ಲೋದಹಳ್ಳಿ ಶಶಿಕುಮಾರ್, ಕಣಿವೆ ಬಿಳಚಿ ಅಣ್ಣಪ್ಪ, ಕಂಚಿಗನಾಳ್ ಮನು, ಕಡೂರು ರವಿ, ಹೊದಿಗೆರೆರವಿ ಇತರರು ಇದ್ದರು.