ಇಂದು ರಾಜಮುಡಿ ತೆಪ್ಪೋತ್ಸವ, ಕಲ್ಯಾಣಿಗೆ ದೀಪಾಲಂಕಾರ

| Published : Apr 11 2025, 12:31 AM IST

ಇಂದು ರಾಜಮುಡಿ ತೆಪ್ಪೋತ್ಸವ, ಕಲ್ಯಾಣಿಗೆ ದೀಪಾಲಂಕಾರ
Share this Article
  • FB
  • TW
  • Linkdin
  • Email

ಸಾರಾಂಶ

ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಏ.11ರಂದು ರಾತ್ರಿ ರಾಜಮುಡಿ ತೆಪ್ಪೋತ್ಸವಕ್ಕೆ ಕಲ್ಯಾಣಿ ಸಜ್ಜುಗೊಂಡಿದೆ. ಕಲ್ಯಾಣಿಯ ಇಡೀ ಸಮುಚ್ಚಯಕ್ಕೆ, ತೆಪೊಪಮಂಟಪಕ್ಕೆ ವಿಶೇಷ ಪುಷ್ಪಾಲಂಕಾರ, ದೀಪಾಲಂಕಾರ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಏ.11ರಂದು ರಾತ್ರಿ ರಾಜಮುಡಿ ತೆಪ್ಪೋತ್ಸವಕ್ಕೆ ಕಲ್ಯಾಣಿ ಸಜ್ಜುಗೊಂಡಿದೆ.

ಕಲ್ಯಾಣಿಯ ಇಡೀ ಸಮುಚ್ಚಯಕ್ಕೆ, ತೆಪೊಪಮಂಟಪಕ್ಕೆ ವಿಶೇಷ ಪುಷ್ಪಾಲಂಕಾರ, ದೀಪಾಲಂಕಾರ ಮಾಡಲಾಗುತ್ತಿದೆ.

ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹಕಾರದಲ್ಲಿ ತೆಪ್ಪೊತ್ಸವವನ್ನು ವಿಭಿನ್ನ ರೀತಿಯಲ್ಲಿ ನಡೆಸಲು ಕಾರ್ಯಕ್ರಮಗಳನ್ನು ರೂಪಿಸಿದ ಪರಿಣಾಮ ತೆಪ್ಪೊತ್ಸವದ ಮೂರೂ ಸುತ್ತಿನ ವೇಳೆಯೂ ವೈಷ್ಣವ ಸಂಪ್ರದಾಯ ಹಾಗೂ ಭಕ್ತಿಸಿಂಚನ ನೀಡುವ ಮ್ಯಾಂಡಲಿನ್, ಕರ್ನಾಟಕ ಸಂಗೀತ ಹಾಡುಗಾರಿಕೆ, ಭರತನಾಟ್ಯ, ಚಂಡೆ ಮತ್ತು ನಾದಸ್ವರ ವಾದನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಅತ್ಯತ್ತಮ ಗುಣಮಟ್ಟದ ದ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಕಲ್ಯಾಣಿಯ ಬಳಿ ಸ್ಕೈಶಾಟ್ಸ್ ಪಟಾಕಿಗಳನ್ನು ಸಿಡಸಲು ಸಹ ಯೋಜಿಸಲಾಗಿದೆ. ತೆಪ್ಪೋತ್ಸವ ರಾತ್ರಿ 7 ರಿಂದ ಆರಂಭವಾಗಲಿದೆ. ರಾಜಮುಡಿ ಧರಸಿದ ಚೆಲುವನಾರಾಯಣಸ್ವಾಮಿ ಮುದ್ದು ಚೆಲುವನ್ನು ಕಲ್ಯಾಣಿಯ ನಾಲ್ಕೂಕಡೆ ಬೃಹತ್ ಎಲ್.ಇ.ಡಿ ಪರದೆಗಳನ್ನು ಅಳವಡಿಸಿ ಬಿತ್ತರಮಾಡುವ ಮೂಲಕ ಭಕ್ತರಿಗೆ ಭಗವಂತನ ದಿವ್ಯದರ್ಶನ ಮಾಡಿಸಲು ಆಯೋಜಿಸಲಾಗಿದೆ.

ಚೆಲುವನಾರಾಯಣಸ್ವಾಮಿಗೆ ಗಜೇಂದ್ರ ಮೋಕ್ಷ ಉತ್ಸವ

ಮೇಲುಕೋಟೆ:

ವೈರಮುಡಿ ಬ್ರಹ್ಮೋತ್ಸವದ 6ನೇ ತಿರುನಾಳ್ ನಿಮಿತ್ತ ಬುಧವಾರ ಶ್ರೀಚೆಲುವನಾರಾಯಣಸ್ವಾಮಿಗೆ ಗಜೇಂದ್ರ ಮೋಕ್ಷ ಉತ್ಸವ ವೈಭವದಿಂದ ಜರುಗಿತು.

ಪಂಚಕಲ್ಯಾಣಿಯ ಗಜೇಂದ್ರಮಂಟಪದಲ್ಲಿ ರಾಜಮುಡಿ ಸಮೇತನಾಗಿ ಗಜೇಂದ್ರಮೋಕ್ಷ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ವಿದ್ವಾನ್ ಎಂ.ಎನ್.ಪಿ ರತ್ನಂ ತಂಡದ ಸ್ಯಾಕ್ಸಪೂನ್ ವಾದನದೊಂದಿಗೆ ಪ್ರಮುಖ ಬೀದಿಯಲ್ಲಿ ಗಜೇಂದ್ರಮೋಕ್ಷ ಉತ್ಸವ ನೆರವೇರಿತು.

ರಾತ್ರಿ ದೇವಾಲಯದ ಒಳಾಂಗಣದಲ್ಲಿ ಆನೆ ವಸಂತ ಹಾಗೂ ದೇವಾಲಯದ ರಾಜಬೀದಿಯಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಕುದುರೆವಾಹನ, ಆನೆವಾಹನ ಉತ್ಸವ ಹಾಗೂ ವಿಶೇಷ ಪಡಿಯೇತ್ತ ವೈಭವದಿಂದ ನಡೆಯಿತು.