ಸಾರಾಂಶ
ಪಾಲಿಕೆ ಸದಸ್ಯರಾಗಿ ರೈತ, ಕಾರ್ಮಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅನುಭವವುಳ್ಳ ರಾಜಣ್ಣ ಕೊರವಿ ವಿಧಾನಪರಿಷತ್ ಸದಸ್ಯರಾಗಲು ಅರ್ಹರಿದ್ದಾರೆ ಎಂದು ಕುಂದಗೋಳ ಕಲ್ಯಾಣಪುರ ಮಠದ ಬಸವಣ್ಣಜ್ಜನವರು ಹೇಳಿದರು
ಹುಬ್ಬಳ್ಳಿ: ಎರಡು ದಶಕಗಳ ಕಾಲ ಪಾಲಿಕೆ ಸದಸ್ಯರಾಗಿ ರೈತ, ಕಾರ್ಮಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅನುಭವವುಳ್ಳ ರಾಜಣ್ಣ ಕೊರವಿ ವಿಧಾನಪರಿಷತ್ ಸದಸ್ಯರಾಗಲು ಅರ್ಹರಿದ್ದಾರೆ ಎಂದು ಕುಂದಗೋಳ ಕಲ್ಯಾಣಪುರ ಮಠದ ಬಸವಣ್ಣಜ್ಜನವರು ಹೇಳಿದರು.
ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ಕರ್ನಾಟಕ ವಿಧಾನಪರಿಷತ್ತಿನ ಪಶ್ಚಿಮ ಪದವೀಧರ ಮತಕ್ಷೇತ್ರಗಳಲ್ಲಿ ಮತಗಳ ನೋಂದಣಿ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಸ್ನೇಹಿತರ ಸಮಾಲೋಚನ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹಿರಿಯರ ಚಿಂತಕ ಚಾವಡಿಯಂತಹ ಈ ಪರಿಷತ್‌ಗೆ ಆಯ್ಕೆಯಾಗುವವರು ಅನುಭವಿಗಳು, ರಾಜಕೀಯ ಇಚ್ಛಾಶಕ್ತಿಯುಳ್ಳ, ಸಮಗ್ರ ಅಭಿವೃದ್ಧಿಗೆ ಯುವ ಪದವೀಧರರನ್ನು ತೊಡಗಿಸಿಕೊಂಡು ಹೋಗುವಂತಹವರು ಜವಾಬ್ದಾರಿ, ಸಾಮಾಜಿಕ ಕಳಕಳಿಯುಳ್ಳವರು ಬೇಕು. ಅಂತಹ ಎಲ್ಲ ಸಾಮರ್ಥ್ಯ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಅವರಿಗಿದೆ ಎಂದರು.ಪ್ರೊ. ಕೆ.ಎಸ್. ಕೌಜಲಗಿ, ಶ್ರೀ ಸಿದ್ಧಾರೂಢ ಮಠದ ಅಧ್ಯಕ್ಷ ಚೆನ್ನವೀರಪ್ಪ ಮುಂಗರವಾಡಿ, ಸಿದ್ದಣ್ಣ ಮೊಗಲಿಶೆಟ್ಟರ, ಮಾತನಾಡಿ, ರಾಜಣ್ಣ ಕೊರವಿ ಅವರು ರಾಜಕೀಯ ಜೀವನದಲ್ಲಿ ಕೈಗೊಂಡ ಹೋರಾಟಗಳ ಕುರಿತು ಮಾಹಿತಿ ನೀಡಿದರು.
ಈ ವೇಳೆ ಪಶ್ಚಿಮ ಪದವೀಧರ ಮತಕ್ಷೇತ್ರದಲ್ಲಿ ನೂತನವಾಗಿ ಮತನೋಂದಣಿ ಫಾರ್ಮ್-18 ತುಂಬುವ ಕುರಿತು ವೆಂಕಟೇಶ ಜಾಧವ ಮಾಹಿತಿ ನೀಡಿದರು.ಸಭೆಯಲ್ಲಿ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಚನ್ನು ಪಾಟೀಲ್, ಪ್ರೊ. ನಾಗಯ್ಯ, ಜಿ.ವಿ. ಒಳಸಂಗ, ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ, ಕಲಕೋಟಿ, ಎಸ್.ಎಂ. ತೊಗರಸಿ, ಬಸವರಾಜ ಹೆಬ್ಬಳ್ಳಿ ಇದ್ದರು. ಎನ್.ಜಿ. ನಾಯ್ಕರ್ ಪ್ರಾರ್ಥಿಸಿದರು. ಡಾ. ವಿಶ್ವನಾಥ ಕೊರವಿ ಸ್ವಾಗತಿಸಿದರು. ಪ್ರೊ. ಜಗದೀಶ ದ್ಯಾವಪ್ಪನವರ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))