ಹಿಂದುಳಿದ, ದಲಿತ ಸಮುದಾಯದ ಮಠಾಧೀಶರಿಂದ ರಾಜಣ್ಣ ಭೇಟಿ

| Published : Sep 01 2025, 01:03 AM IST

ಸಾರಾಂಶ

ಹೈಕಮಾಂಡ್ ಪುನಃ ರಾಜಣ್ಣರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಇಲ್ಲದಿದ್ದರೆ ದಲಿತ ಮತ್ತು ಹಿಂದುಳಿದ ಮತಗಳು ಕಾಂಗ್ರೆಸ್‌ನಿಂದ ಚದುರಿ ಹೋಗಲಿದೆ.

ಕನ್ನಡಪ್ರಭ ವಾರ್ತೆ ತುಮಕೂರುಮಾಜಿ ಸಚಿವ ಕೆ.ಎನ್. ರಾಜಣ್ಣರ ಬೆಂಬಲಕ್ಕೆ ದಲಿತ, ಹಿಂದುಳಿದ ಸಮುದಾಯದ ಮಠಾಧೀಶರು ನಿಂತಿದ್ದು, ಭಾನುವಾರ ಅವರ ಒಕ್ಕೂಟ ತುಮಕೂರಿನ ಕ್ಯಾತಸಂದ್ರದಲ್ಲಿರುವ ರಾಜಣ್ಣರ ಮನೆಗೆ ಭೇಟಿ ಕೊಟ್ಟು ಬೆಂಬಲ ಸೂಚಿಸಿದೆ. ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಶ್ರೀ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ, ಕನಕ ಗುರುಪೀಠದ ಈಶ್ವರಾನಂದ ಶ್ರೀ, ವಾಲ್ಮೀಕಿ ಸಮುದಾಯದ ಪ್ರಸನ್ನಾನಂದ ಶ್ರೀ ಸೇರಿದಂತೆ 15ಕ್ಕೂ ಹೆಚ್ಚು ಸ್ವಾಮಿಗಳು ಭೇಟಿಮಾಡಿ ರಾಜಣ್ಣರ ಜೊತೆ ಮಾತುಕತೆ ನಡೆಸಿದರು.ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮಿಗಳ ಒಕ್ಕೂಟ, ಕಾಂಗ್ರೆಸ್ ಹೈ ಕಮಾಂಡ್ ಹಿಂದುಳಿದ ನಾಯಕ ರಾಜಣ್ಣರಿಗೆ ಮೋಸ ಮಾಡಿದೆ. ಸಣ್ಣ ತಪ್ಪಿಗೆ ದೊಡ್ಡ ಶಿಕ್ಷೆ ಕೊಟ್ಟಿದೆ. ರಾಜಣ್ಣರಿಗೆ ಸಮಯವಕಾಶ ಕೊಡಬೇಕಿತ್ತು ಎಂದು ಹೈ ಕಮಾಂಡ್ ವಿರುದ್ಧ ಬೇಸರ ವ್ಯಕ್ತಪಡಿದ್ದಾರೆ.ಹೈಕಮಾಂಡ್ ಪುನಃ ರಾಜಣ್ಣರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಇಲ್ಲದಿದ್ದರೆ ದಲಿತ ಮತ್ತು ಹಿಂದುಳಿದ ಮತಗಳು ಕಾಂಗ್ರೆಸ್‌ನಿಂದ ಚದುರಿ ಹೋಗಲಿದೆ. ಅಲ್ಲದೇ ತಮ್ಮ ನಿಯೋಗ ಕಾಂಗ್ರೆಸ್ ಹೈಕಮಾಂಡ್‌ ಗೆ ಭೇಟಿಮಾಡಿ ರಾಜಣ್ಣಗೆ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯ ಮಾಡುತ್ತೇವೆ ಎಂದಿದ್ದಾರೆ.

ಮಾಜಿ ಸಚಿವ ರಾಜಣ್ಣ ಮಾತನಾಡಿ, ನನಗೆ ಸ್ವಾರ್ಥಕ್ಕಾಗಿ ಮಂತ್ರಿಗಿರಿ ಬೇಕಿಲ್ಲ, ಬಡ ಜನರ ಸೇವೆ ಮಾಡಲು ಮಂತ್ರಿಸ್ಥಾನ ಬೇಕೆಂದು ಅಭಿಮಾನಿಗಳು ಬಯಸಿದ್ದಾರೆ. ಸ್ವಾಮೀಜಿಗಳು ನನ್ನ ಮೇಲಿನ ಅಭಿಮಾನದಿಂದ ಬಂದು ನನ್ನ ಪರ ನಿಂತಿದ್ದಾರೆ. ಅವರೆಲ್ಲರಿಗೂ ಸಾಷ್ಟಾಂಗ ನಮಸ್ಕಾರಗಳು. ಸ್ವಾಮೀಜಿಗಳು ಹೈ ಕಮಾಂಡ್ ಬಳಿ ಹೋಗೋದು ಬಿಡೋದು ಅವರಿಗೆ ಬಿಟ್ಟ ವಿಚಾರ ಎಂದು ಪ್ರತಿಕ್ರಿಯಿಸಿದ್ದಾರೆ.ಇತ್ತೀಚೆಗೆ ನಡೆದ ಜಿಲ್ಲಾ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದಂತಹ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. 4ರಂದು ಬ್ಯಾಂಕ್‌ನ ಅಧ್ಯಕ್ಷರ ಆಯ್ಕೆ ಇದೆ. ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ನಾನು ದೆಹಲಿಗೆ ಸಂಪುಟಕ್ಕೆ ಸೇರಿಸಿ ಅಂತಾ ಹೋಗಿದ್ನಾ ಎಂದು ಪ್ರಶ್ನಿಸಿದ ಅವರು ನನಗೆನೂ ಮಂತ್ರಿ ಸ್ಥಾನದ ಅಗತ್ಯತೆ ಏನು ಇಲ್ಲಾ. ಯಾರು ರಾಜ್ಯದಲ್ಲಿ ಧ್ವನಿ ಇಲ್ಲದ ಸಮಾಜಕ್ಕೆ ಸಹಾಯ ಮಾಡಲು ಅಧಿಕಾರ ಬೇಕು ಎಂದರು.

ಮತಗಳವು ಹೇಳಿಕೆ ಹೊರತುಪಡಿಸಿ ಬೇರೆ ಕಾರಣ ಇದೆಯಾ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೂ ಅದೇ ಅನಿಸುತ್ತೇ‌. ಹನಿಟ್ರ್ಯಾಪ್ ಬಗ್ಗೆ ಹೇಳಿದ್ದೇ, ಡಿಸಿಎಂ ಬಗ್ಗೆ ಹೇಳಿದ್ದೇ, ಇದೆಲ್ಲಾ ಕಾರಣ ಅನಿಸುತ್ತೆ ಎಂದರು. ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ, ಬೇರೆ ಪಕ್ಷ ಸೇರೆ ಅಗತ್ಯ ಇಲ್ಲ ಎಂದರು.ಕನಕ ಗುರುಪೀಠದ ಈಶ್ವರಾನಂದಪುರಿ ಮಾತನಾಡಿ, ಹಿಂದುಳಿದ ಹಾಗೂ ದಲಿತ ಮಾಠಾಧೀಶರ ನಿಯೋಗ, ಸದ್ಯದಲ್ಲೇ ಕಾಂಗ್ರೆಸ್ ರಾಷ್ಟೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಇಲ್ಲಿ ಆಗಿರುವ ವಿಚಾರವನ್ನು ಅವರ ಗಮನಕ್ಕೆ ತರಬೇಕು ಅನ್ನುವಂತಹದ್ದು, ನಮ್ಮೆಲ್ಲ ಸ್ವಾಮೀಜಿಗಳ ಅಭಿಪ್ರಾಯವಾಗಿದೆ, ಆದಷ್ಟು ಬೇಗ ನಾವು ಅದಕ್ಕೆ ಸಿದ್ಧತೆ ಮಾಡಿಕೊಳ್ಳುವುದಾಗಿ ತಿಳಿಸಿದರು.

ರಾಜಣ್ಣರನ್ನು ಭೇಟಿಯಾಗಿ ಮಾತನಾಡಿದ್ದೇವೆ ಎಂದ ಶ್ರೀಗಳು ಅವರು ಏನು ಹೇಳಿಲ್ಲ, ನಾವು ಮಾಧ್ಯಮದಲ್ಲಿ ನೋಡಿ ತಿಳಿದು ಕೊಂಡದ್ದು. ರಾಜಣ್ಣ ಅವರ ಅಭಿಪ್ರಾಯವು ಹಾಗೆ ಇದೆ, ರಾಜ್ಯದಲ್ಲಿ ಹಿಂದುಳಿದ, ದಲಿತ ನಾಯಕನನ್ನು ರಾಜಕೀಯ ವಾಗಿ ತುಳಿಯುವ ಪ್ರಯತ್ನ ಆಗುತ್ತಿದೆ ಎಂದರು. ಒಬ್ಬ ಹಿಂದುಳಿದ ಹಾಗೂ ದಲಿತ ಸಮಾಜದ ಮುಖಂಡನನ್ನು ಒಂದು ಸಣ್ಣ ವಿಚಾರಕ್ಕೆ, ಸಚಿವ ಸಂಪುಟದಿಂದ ಕೈ ಬಿಟ್ಟಿದ್ದಾರೆ. ಆ ದೃಷ್ಟಿಯಲ್ಲಿ ಪಕ್ಷದ ಗಮನಕ್ಕೆ ತರಬೇಕಾಗಿರುವತಹದ್ದು, ಇದು ಒಂದು ಸಾಮಾಜಿಕ ಕಳಕಳಿ ಎಂದ ಶ್ರೀಗಳು ರಾಜಣ್ಣ ರಾಜಕೀಯದಲ್ಲಿ ಇರಬೇಕು ಅಲ್ಲದೇ ಈ ಸಮುದಾಯದಲ್ಲಿ ಅವರು ಇನ್ನೂ ಕೆಲಸ ಮಾಡಬೇಕಾಗಿದೆ. ಈ ಎಲ್ಲಾ ವಿಚಾರ ಗಳನ್ನು ಇಟ್ಟುಕೊಂಡು ನಾವೆಲ್ಲ ಮಠಾಧೀಶರು ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದರು.ಅವರಿಗೆ ಒಂದು ಅವಕಾಶವನ್ನು ಕೊಡಬಹುದಿತ್ತು. ಅವರಿಗೆ ಆಗಿರುವ ನೋವನ್ನು ಸರಿಪಡಿಸಬೇಕಿದೆ ಎಂದ ಶ್ರೀಗಳು ರಾಜಣ್ಣ ಅವರು ವಾಲ್ಮೀಕಿ ಸಮಾಜಕ್ಕೆ ಅಷ್ಟೇ ಅಲ್ಲಾ ಎಲ್ಲಾ ಹಿಂದುಳಿದ ಸಮಾಜಕ್ಕೆ ಸೇವೆ ಮಾಡಿದ್ದಾರೆ. ಎಲ್ಲರೂ ಸೇರಿ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಲು ಕೈಜೋಡಿಸಬೇಕಿದೆ. ಎಂದರು.

ಕ್ಯಾಪ್ಶನ್.......ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಮನೆಗೆ ದಲಿತ, ಹಿಂದುಳಿದ ಮಠಾಧೀಶರ ಒಕ್ಕೂಟ ಭೇಟಿಯಾಗಿ ಮಾತುಕತೆ ನಡೆಸಿತು.