ಕಳೆದ ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದು. ಅಂದಿನಿಂದ ಇಂದಿನವರೆಗೂ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ. ಎಂಎಲ್‌ಸಿ ಆರ್‌.ರಾಜೇಂದ್ರ ಹಾಗೂ ಅವರ ಬೆಂಬಲಿಗರು ಕ್ಷೇತ್ರದಲ್ಲಿ ನನ್ನ ವಿರುದ್ಧ ಒಂದಲ್ಲಾ ಒಂದು ರೀತಿ ದ್ವೇಷದ ರಾಜಕಾಣ ಮಾಡುತ್ತಿದ್ದಾರೆ ಎಂದು ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಕಳೆದ ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದು. ಅಂದಿನಿಂದ ಇಂದಿನವರೆಗೂ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ. ಎಂಎಲ್‌ಸಿ ಆರ್‌.ರಾಜೇಂದ್ರ ಹಾಗೂ ಅವರ ಬೆಂಬಲಿಗರು ಕ್ಷೇತ್ರದಲ್ಲಿ ನನ್ನ ವಿರುದ್ಧ ಒಂದಲ್ಲಾ ಒಂದು ರೀತಿ ದ್ವೇಷದ ರಾಜಕಾಣ ಮಾಡುತ್ತಿದ್ದಾರೆ ಎಂದು ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಆರೋಪಿಸಿದರು.

ಶನಿವಾರ ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿನ್ನುದ್ದೇಶಿಸಿ ಮಾತನಾಡಿದ ಅವರು. ನನ್ನ ಎಲ್ಲ ಆಸ್ತಿ ಇರುವುದು ಕೊಂಡವಾಡಿ ಗ್ರಾಮದಲ್ಲಿ ಆದರೆ ಅದನ್ನು ಸಹ ತಹಸೀಲ್ದಾರ್‌ಗೆ ಹೇಳಿ ವಾಸ ಸ್ಥಳ ಧೃಢೀಕರಣ ಪತ್ರ ರದ್ದು ಪಡಿಸಿ ತೊಂದರೆ ಕೊಟ್ಟರು. ತುಮುಲ್ ಚುನಾವಣೆಗೆ ವೇಳೆ ಸಹಕಾರ ಸಂಘದ ಉಪ ನಿಬಂಧಕರ ಆದೇಶದ ಮೇರೆಗೆ ನನ್ನನ್ನು ಅನರ್ಹ ಪಟ್ಟಿಗೆ ಸೇರಿಸಿದರು. ನಮ್ಮ ನಿರ್ದೇಶಕರಿಗೂ ತೊಂದರೆ ಕೊಟ್ಟರು ಇದನ್ನೆಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿ ಅರ್ಹ ಮತದಾರರ ಪಟ್ಟಿಗೆ ನನ್ನ ಹೆಸರು ಸೇರಿಸಿದ್ದೇನೆ.ಸಹಾಯಕ ನಿಬಂಧಕರಿಲ್ಲದಿದ್ದರೂ ಆಡಳಿತಾಧಿಕಾರಿ ನೇಮಿಸಲಾಗಿದೆ ಎಂದರು.

ನಮ್ಮ ತಾಲೂಕಿನಲ್ಲಿ ಕಾನೂನು ಮತ್ತು ಸಂವಿಧಾನಕ್ಕೆ ಬೆಲೆ ಇಲ್ಲವೇ ? ಎಂದು ಪ್ರಶ್ನಿಸಿದ ಕೊಂಡವಾಡಿ ಚಂದ್ರಶೇಖರ್‌. ಶಾಸಕ ರಾಜಣ್ಣ .ಆರ್.ರಾಜೇಂದ್ರ ಮತ್ತು ಬೆಂಬಲಿಗರು ನಿರಂತರವಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಇದೂ ಯಾವ ನ್ಯಾಯ? ಕಳೆದ 2023ರ ಆಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಲು ಅರ್ಜಿ ಸಲ್ಲಿಸಿದ್ದು ತಪ್ಪೇ? ಅಂದಿನಿಂದ ಇಂದಿನವರೆಗೂ ದ್ವೇಷ ನಡೆಯುತ್ತಲೇ ಇದೆ ಎಂದರು. ಬಂದ್ರೇಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ತುಮುಲ್‌ ನಿರ್ದೇಶಕ ನಾಗೇಶಬಾಬು ಅನರ್ಹ ಪಟ್ಟಿಯಲ್ಲಿದ್ದು. ಇವರು ನನ್ನ ವಿರುದ್ಧ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಹಕಾರ ಸಂಘಗಳ ಆದೇಶಗಳು ಸಂಘಕ್ಕೆ ಬರುವುದಿಲ್ಲ. ಎಆರ್ಕ ಚೇರಿ ವ್ಯಾಪ್ತಿಗೆ ಬುರುತ್ತದೆ. ಇದನ್ನು ಸಂಘಗಳಿಗೆ ತಿಳಿಸುವುದು ಎಆರ್ ಸಿಬ್ಬಂದಿಯ ಜವಾಬ್ದಾರಿ. ಆದರೆ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ. ದಾಖಲೆಗಳನ್ನು ತಿದ್ದಿ ನೀಡುವ ಜಯಾಮಾನ ನನ್ನದಲ್ಲ.ಆಡಳಿತಾಧಿಕಾರಿ ಕಚೇರಿಯಲ್ಲಿ ಕೂತು ನಾವು ಕೊಂಡವಾಡಿ ಸಂಘದ ಚಾರ್ಜ್ ತೆಗೆದು ಕೊಂಡಿದ್ದೇವೆಂದು ಆದೇಶ ಹೊರಡಿಸಿದ್ದಾರೆ.ನಮ್ಮ ಮೇಲೆ ಇಲ್ಲಸಲ್ಲದ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಾರೆಂಬ ಹಿನ್ನಲೆಯಲ್ಲಿ ನಾನು ಎಆರ್ ಕಚೇರಿ ಕಡೆ ಹೋಗಿರಲಿಲ್ಲ. ಆದರೆ ರೈತರು ಮನವಿ ಮಾಡಿದ ಹಿನ್ನಲೆಯಲ್ಲಿ ಎಆರ್ ನ ಭೇಟಿ ಮಾಡಿ ರೈತರಿಗೆ ಬಟವಾಡೆ ನೀಡುವಂತೆ ಮನವಿ ಮಾಡಿದೆ. ನಾವೇನೂ ಸರ್ಕಾರದ ಹಣ ಕೇಳಲಿಲ್ಲ. ಉತ್ಪಾದಕರ ಹಣ ಕೇಳಿದ್ದೆವು. ಆದರೂ ತಾಂತ್ರಿಕ ಕಾರಣ ನೆಪವೊಡ್ಡಿ ಬಟವಾಡೆ ಹಣ ನೀಡಲಿಲ್ಲ. ರೈತರಿಗೆ ಹಣ ಬಿಡುಗಡೆ ಮಾಡಿ ಎಂದು ಗೊಗೆರದರೂ ಅಧಿಕಾರಿಗಳು ದಿನ ಕಳೆದರು. ಲೋಕಾಯುಕ್ತರಿಗೆ ದೂರು ಸಲ್ಲಿಸಿದಾಗ ಲೋಕಾಯುಕ್ತ ಅಧಿಕಾರಿಗಳು ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ಈ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಕೈ ತೊಳೆದು ಕೊಂಡರು. ರೈತರ ಹಿತಾಸಕ್ತಿ ಕಾಪಾಡುವ ಹಿತ ದೃಷ್ಠಿಯಿಂದ ರೈತರಿಗೆ ಹಣ ಕೊಡಲು ಕೊನೆಗೂ ನ್ಯಾಯಾಲಯ ಆದೇಶಿಸಿತು. ಇದನ್ನು ಅರಿತು ಮಾತನಾಡಬೇಕಿತ್ತು ಎಂದು ಕಿಡಿಕಾರಿದರು.

ಕೆಎಂಎಫ್‌ ನಿರ್ದೇಶಕ ಮೈದನಹಳ್ಳಿ ಕಾಂತರಾಜು ಅವರನ್ನು 2025ರ ಜು.7ರಂದು ಸರ್ಕಾರ ಸ್ಥಾನದಿಂದ ತೆಗೆದು ಹಾಕಿದೆ. ಆದರೂ ನಾನು ನಿರ್ದೇಶಕನೆಂದು ಹೇಳಿಕೊಂಡು ಎಲ್ಲ ಕಡೆ ಹೇಳುತ್ತಾರೆ. ಸಭೆ ಸಮಾರಂಭಗಳಲ್ಲಿ ಗೌರವಯುತವಾಗಿ ಮಾತನಾಡಬೇಕು. ಈತ ಅಕ್ರಮ ಮರಳು ಮಾರಾಟ ಮಾಡಿ ಮೇವಿನ ಹಣ ತಿಂದು ಜೀವನ ಮಾಡುವವರಿಂದ ನಾನು ಪಾಠ ಕಲಿಯಬೇಕಿಲ್ಲವೆಂದು ಕಾಂತರಾಜು ವಿರುದ್ಧ ಹರಿಹಾಯ್ದರು.

ಮುಂದಿನ ವಿಧಾನ ಸಭಾ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಶಾಸಕ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು ಮಧುಗಿರಿ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂದು ಕೊಂಡವಾಡಿ ಚಂದ್ರಶೇಖರ್ ಇಂಗಿತ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು. ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಎಸ್‌.ಡಿ.ಕೃಷ್ಣಪ್ಪ, ಪುರಸಭಾ ಸದಸ್ಯ ಎಂ.ಆರ್‌.ಜಗನ್ನಾಥ್, ಮುಖಂಡರಾದ ಸಿದ್ದಣ್ಣ, ಆರ್‌.ಎ.ನಾರಾಯಣ್‌, ನಾಗಭೂಷಣ್, ಡಿವಿಹಳ್ಲಿ ತಿಮ್ಮಣ್ಣ, ಕುಮಾರ್, ವಿರೇಂದ್ರ, ಕಾಂತರಾಜು ಇತರರಿದ್ದರು.