ಮೂಡಲಕೊಪ್ಪಲು ಡೈರಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ರಾಜೇಗೌಡ, ಸಾಕಮ್ಮ ಆಯ್ಕೆ

| Published : May 16 2025, 01:53 AM IST

ಮೂಡಲಕೊಪ್ಪಲು ಡೈರಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ರಾಜೇಗೌಡ, ಸಾಕಮ್ಮ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಲು ಉತ್ಪಾದಕರ ಸಹಕಾರ ಸಂಘಗಳು ಗ್ರಾಮೀಣ ಪ್ರದೇಶ ಜನರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿವೆ. ಅಲ್ಲಿಗೆ ಆಯ್ಕೆಯಾಗುವ ನಿರ್ದೇಶಕರು, ಅಧ್ಯಕ್ಷ, ಉಪಾಧ್ಯಕ್ಷರು ಎಲ್ಲರೂ ಜತೆಗೂಡಿ ರಾಜಕೀಯ ಹೊರತುಪಡಿಸಿ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಮೂಡಲಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಎಂ.ಎಸ್.ರಾಜೇಗೌಡ, ಸಾಕಮ್ಮ ಅವರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಗುರುವಾರ ಅಭಿನಂದಿಸಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಅಭಿನಂದಿಸಿ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳು ಗ್ರಾಮೀಣ ಪ್ರದೇಶ ಜನರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿವೆ. ಅಲ್ಲಿಗೆ ಆಯ್ಕೆಯಾಗುವ ನಿರ್ದೇಶಕರು, ಅಧ್ಯಕ್ಷ, ಉಪಾಧ್ಯಕ್ಷರು ಎಲ್ಲರೂ ಜತೆಗೂಡಿ ರಾಜಕೀಯ ಹೊರತುಪಡಿಸಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಈ ವೇಳೆ ನಿರ್ದೇಶಕರಾದ ಕೆಂಪಮ್ಮ, ಶಶಿಕುಮಾರ್, ಪಾಂಡುರಂಗ, ಎಂ.ಎಸ್.ಶಿವಣ್ಣ, ಕುಮಾರ್, ಮಂಜುನಾಥ್, ಚಿಕ್ಕತಮ್ಮೇಗೌಡ, ಕೆಂಪೇಗೌಡ, ಕಾರ್ಯದರ್ಶಿ ಎಂ.ಎಸ್.ರಮೇಶ್‌ಗೌಡ, ಮುಖಂಡರಾದ ಎಂ.ಸಿ.ಅಭಿಷೇಕ್, ಬೆಟ್ಟೇಗೌಡ, ಎಂ.ಎಸ್.ಬಾಲು, ಎಂ.ಆರ್.ರವಿಕುಮಾರ್, ಕೆ.ಚಿಕ್ಕತಮ್ಮೇಗೌಡ, ಎಂ.ಎನ್.ಪಾಪಣ್ಣ, ಕಿರಣ್‌ರಾಜ್, ಸಿಬ್ಬಂದಿ ಬೆಟ್ಟಸ್ವಾಮಿ, ಕೆಂಪೇಗೌಡ ಸೇರಿದಂತೆ ಹಲವರು ಹಾಜರಿದ್ದರು.

ಸಬ್ಬನಕುಪ್ಪೆಯಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

ಶ್ರೀರಂಗಪಟ್ಟಣ: ತಾಲೂಕಿನ ಸಬ್ಬನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ನಡೆಯಿತು.

ಶಿಕ್ಷಣ ಇಲಾಖೆ ಹಾಗೂ ಸಬ್ಬನಕುಪ್ಪೆ ಗ್ರಾಪಂನಿಂದ ನಡೆದ ಶಿಬಿರದಲ್ಲಿ ಮಕ್ಕಳಿಗಾಗಿ ರಂಗೋಲಿ ಮತ್ತು ಚಿತ್ರಕಲಾ ಸ್ಪರ್ಧೆ ನಡೆಯಿತು.

ಸಂಪನ್ಮೂಲ ವ್ಯಕ್ತಿ, ಶಿಕ್ಷಕ ಕೊತ್ತತ್ತಿ ರಾಜು ಮಕ್ಕಳಿಗೆ ಅಭಿನಯ ಗೀತೆ, ಕಥೆ ಇನ್ನಿತರ ಶೈಕ್ಷಣಿಕ ಮತ್ತು ಮನರಂಜನಾ ಚಟುವಟಿಕೆ ನಡೆಸಿಕೊಟ್ಟರು. ಡಯಟ್‌ನ ಉಪನ್ಯಾಸಕ ಸಿದ್ದರಾಜುಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಮಾಡಿಸಿ, ಶೈಕ್ಷಣಿಕ ಮಾರ್ಗದರ್ಶನ ನೀಡಿದರು.

ಶಿಬಿರದಲ್ಲಿ ಎಂ.ಶೆಟ್ಟಳ್ಳಿಯ ಪ್ರೌಢಶಾಲಾ ಶಿಕ್ಷಕರಾದ ನಾಗೇಂದ್ರ, ಮುಖ್ಯ ಶಿಕ್ಷಕ ಕೋನಾ ಪುರುಷೋತ್ತಮ, ಗ್ರಾಪಂ ಕಾರ್ಯದರ್ಶಿ ತಮ್ಮಣ್ಣ, ಗ್ರಂಥಪಾಲಕ ಮಂಜುನಾಥ್ ಸೇರಿದಂತೆ ಇತರರು ಇದ್ದರು.