ಚಾಮರಾನಗರದಲ್ಲಿ ದುಗ್ಗಟ್ಟಿ ವೀರಭದ್ರಪ್ಪಗೆ ರಾಜೇಂದ್ರಶ್ರೀ ಸೇವಾ ಪ್ರಶಸ್ತಿ

| Published : Dec 12 2024, 12:30 AM IST

ಚಾಮರಾನಗರದಲ್ಲಿ ದುಗ್ಗಟ್ಟಿ ವೀರಭದ್ರಪ್ಪಗೆ ರಾಜೇಂದ್ರಶ್ರೀ ಸೇವಾ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಶರಣ ಸಾಹಿತ್ಯ ಪರಿಷತ್ತು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಸಹಯೋಗದಲ್ಲಿ ಕೆ.ಸಿ.ಶಿವಪ್ಪ ದತ್ತಿ ಕಾರ್ಯಕ್ರಮ ಹಾಗೂ ರಾಜೇಂದ್ರ ಶ್ರೀ ಸೇವಾ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಡಿ.೨೪ರ ಮಂಗಳವಾರ ಸುತ್ತೂರು ಶ್ರೀಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಶಿವಲಿಗೇಂದ್ರ ಸ್ವಾಮೀಜಿ ಹೇಳಿದರು. ಚಾಮರಾಜನಗರದಲ್ಲಿ ಜಿಲ್ಲಾ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಶರಣ ಸಾಹಿತ್ಯ ಪರಿಷತ್ತು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಸಹಯೋಗದಲ್ಲಿ ಕೆ.ಸಿ.ಶಿವಪ್ಪ ದತ್ತಿ ಕಾರ್ಯಕ್ರಮ ಹಾಗೂ ರಾಜೇಂದ್ರ ಶ್ರೀ ಸೇವಾ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಡಿ.೨೪ರ ಮಂಗಳವಾರ ಸುತ್ತೂರು ಶ್ರೀಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಪಡಗೂರು ಮಠಾಧ್ಯಕ್ಷ ಶ್ರೀಶಿವಲಿಗೇಂದ್ರ ಸ್ವಾಮೀಜಿ ತಿಳಿಸಿದರು. ನಗರದ ಮಹಾಮನೆಯಲ್ಲಿ ಕೆ.ಸಿ.ಶಿವಪ್ಪ ದತ್ತಿ ಕಾರ್ಯಕ್ರಮ ಹಾಗೂ ರಾಜೇಂದ್ರಶ್ರೀ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕುರಿತು ಹಾಗೂ ಜಿಲ್ಲಾ ಕಾರ್ಯಕಾರಣಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ವರ್ಷದಂತೆ ಈ ಬಾರಿಯು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಕೆ.ಸಿ. ಶಿವಪ್ಪ ದತ್ತಿ ಕಾರ್ಯಕ್ರಮ ಹಾಗೂ ರಾಜೇಂದ್ರಶ್ರೀಗಳ ಸೇವಾ ಪ್ರಶಸ್ತಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಡಿ.೨೪ರ ಮಂಗಳವಾರ ನಗರದ ಡಾ.ರಾಜಕುಮಾರ್ ಕಲಾಮಂದಿರದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಸಾಯಂಕಾಲ ೪.೩೦ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಈ ವರ್ಷದ ರಾಜೇಂದ್ರ ಶ್ರೀಗಳ ಸೇವಾ ಪ್ರಶಸ್ತಿಗೆ ಸಮಾಜ ಸೇವಕ ಯಳಂದೂರು ತಾಲೂಕಿನ ದುಗ್ಗಟ್ಟಿ ವೀರಭದ್ರಪ್ಪ ಅವರು ಭಾಜನರಾಗಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ೧೨೫ ಕ್ಕೆ ೧೨೫ ಅಂಕ ಗಳಿಸಿರುವ ಸಿಂಡನಪುರದ ಗ್ರಾಮದ ವಿದ್ಯಾರ್ಥಿನಿ ಮಹೇಶ್ವರಿ ಅವರಿಗೆ ಪ್ರತಿಭಾ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಹರಗುರು ಚರಮೂರ್ತಿಗಳು ಹಾಗೂ ಗಣ್ಯರು ಆಗಮಿಸಲಿದ್ದು, ಪರಿಷತ್ತಿನ ಸದಸ್ಯರು ಹಾಗೂ ಪದಾಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಶ್ರೀಗಳು ತಿಳಿಸಿದರು. ಪರಿಷತ್ತಿನ ಜಿಲ್ಲಾ ಅಧ್ಯಕ್ಷ ದುಗ್ಗಟ್ಟಿ ಮಲ್ಲಿಕಾರ್ಜುನಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಕೆ.ರವಿಕುಮಾರ್ ಮಾತನಾಡಿ, ಡಿ.೨೪ ರಂದು ನಡೆಯುವ ಕಾರ್ಯಕ್ರಮದ ರೂಪುರೇಷಗಳು, ಅಂತಿಮ ಸಿದ್ದತೆಯ ಬಗ್ಗೆ ಸಮಾಲೋಚನೆ ಮಾಡಿದರು. ಸುತ್ತೂರು ಶ್ರೀಗಳು ಹಾಗೂ ಸಾಹಿತಿ ಕೆ.ಸಿ.ಶಿವಪ್ಪ ಅವರು ಸಮಾರಂಭಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆ ಆಗಬೇಕು. ಎಲ್ಲ ಪದಾಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಹಂಚಿಕೊಂಡು ಶಿಸ್ತುಬದ್ದವಾಗಿ ಕಾರ್ಯಕ್ರಮ ನಡೆಯುವಂತಾಗಲು ಶ್ರಮಿಸಬೇಕು ಎಂದರು. ಸಭೆ ಆರಂಭವಾಗುತ್ತಿದ್ದಂತೆ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಮಾಜಿ ಶಾಸಕ ಎಸ್.ಜಯಣ್ಣ ಅವರ ಆತ್ಮಕ್ಕೆ ಚಿರಶಾಂತಿ ಕೋರಿ, ಸಂತಾಪ ಸೂಚಿಸಿ, ಒಂದು ನಿಮಿಷ ಮೌನ ಆಚರಣೆ ಮಾಡಲಾಯಿತು. ಸಭೆಯಲ್ಲಿ ಸಂಘದ ಪರಿಷತ್ತಿನ ಕಾರ್ಯದರ್ಶಿ ಬಿ.ಎಸ್.ವಿನಯ್, ನಿಕಟಪೂರ್ವ ಅಧ್ಯಕ್ಷ ಆರ್.ಪುಟ್ಟಮಲ್ಲಪ್ಪ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ವಸಂತಮ್ಮ, ರತ್ನಮ್ಮ ಬಸವರಾಜು, ಅನ್ನಪೂರ್ಣ ಸ್ವಾಮಿ, ತಾಲೂಕು ಅಧ್ಯಕ್ಷ ಚಾ.ನಗರದ ಆರ್.ಎಸ್.ಲಿಂಗರಾಜು, ಯಳಂದೂರು ವೀರಭದ್ರಸ್ವಾಮಿ, ನಗರ ಘಟಕದ ಅಧ್ಯಕ್ಷ ಎಂ.ಸುಂದರ್, ಕೊಳ್ಳೇಗಾಲದ ನಾಗರಾಜು, ಹನೂರು ತಿಮ್ಮರಾಜು, ಗುಂಡ್ಲುಪೇಟೆ ಜ್ಯೋತಿ ಪ್ರಕಾಶ್, ಅನ್ನಪೂರ್ಣ, ಪತ್ರಿಕಾ ಕಾರ್ಯದರ್ಶಿ ಎಂ, ರೇಣುಕೇಶ್ ಮೊದಲಾದವರು ಇದ್ದರು.