ಸಾರಾಂಶ
ನವೆಂಬರ್ ತಿಂಗಳಲ್ಲಿ ನಡೆಯಲಿರುವ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯ ಹಿನ್ನೆಲೆಯಲ್ಲಿ, ಜಿಲ್ಲಾ ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಕರ್ತರಾದ ಜ್ಞಾನದೀಪ ರಾಜೇಶ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ. ಎಚ್. ವೇಣುಕುಮಾರ್ ಅವರು ಆದೇಶದ ಪ್ರತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವೇಣುಕುಮಾರ್ ಅವರು, ಈ ಬಾರಿ ನಡೆಯಲಿರುವ ಸಂಘದ ಚುನಾವಣೆ ಸಂಪೂರ್ಣ ನಿಷ್ಪಕ್ಷಪಾತವಾಗಿ, ಯಾವುದೇ ಬಾಹ್ಯ ಪ್ರಭಾವ ಅಥವಾ ಒತ್ತಡಗಳಿಲ್ಲದೇ, ಶಿಸ್ತಿನಿಂದ ಸಾಗುವಂತೆ ವಿನಂತಿಸುತ್ತೇನೆ ಎಂದು ಹೇಳಿದರು.
ಹಾಸನ: ನವೆಂಬರ್ ತಿಂಗಳಲ್ಲಿ ನಡೆಯಲಿರುವ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯ ಹಿನ್ನೆಲೆಯಲ್ಲಿ, ಜಿಲ್ಲಾ ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಕರ್ತರಾದ ಜ್ಞಾನದೀಪ ರಾಜೇಶ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ. ಎಚ್. ವೇಣುಕುಮಾರ್ ಅವರು ಆದೇಶದ ಪ್ರತಿ ನೀಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ಎಚ್. ವೇಣುಕುಮಾರ್ ಅವರು ಈ ಕುರಿತು ಅಧಿಕೃತ ಪ್ರಕಟಣೆ ನೀಡಿ, ರಾಜ್ಯ ಚುನಾವಣಾಧಿಕಾರಿಯಾದ ರವಿಕುಮಾರ್ ಅವರ ಆದೇಶದ ಪ್ರತಿಯನ್ನು ರಾಜೇಶ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೇಣುಕುಮಾರ್ ಅವರು, ಈ ಬಾರಿ ನಡೆಯಲಿರುವ ಸಂಘದ ಚುನಾವಣೆ ಸಂಪೂರ್ಣ ನಿಷ್ಪಕ್ಷಪಾತವಾಗಿ, ಯಾವುದೇ ಬಾಹ್ಯ ಪ್ರಭಾವ ಅಥವಾ ಒತ್ತಡಗಳಿಲ್ಲದೇ, ಶಿಸ್ತಿನಿಂದ ಸಾಗುವಂತೆ ವಿನಂತಿಸುತ್ತೇನೆ ಎಂದು ಹೇಳಿದರು. ರಾಜ್ಯ ಚುನಾವಣಾಧಿಕಾರಿ ರವಿಕುಮಾರ್ ಅವರ ನಿರ್ದೇಶನದಂತೆ, ಹಿರಿಯ ಪತ್ರಕರ್ತ ಬಿ.ಜೆ. ರಾಜಗೋಪಾಲ್ ಅವರ ಶಿಫಾರಸ್ಸಿನ ಮೇರೆಗೆ ರಾಜೇಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಹಾಗೂ ಹಾಸನದ ವಿವಿಧ ಪತ್ರಕರ್ತರು ಉಪಸ್ಥಿತರಿದ್ದರು.