ಸಾರಾಂಶ
ದೇಶದಲ್ಲಿ ಸರ್ಕಾರದ ಆರ್ಥಿಕ ವಹಿವಾಟಿನ ಚೆಕ್‌ಗೆ ಸಹಿ ಮಾಡುವ ಅಧಿಕಾರವನ್ನು ಗ್ರಾಪಂ ಅಧ್ಯಕ್ಷರಿಗೆ ಮಾತ್ರ ನೀಡಲಾಗಿದೆ. ಗ್ರಾಪಂ ಸದಸ್ಯರು ಹೆಚ್ಚು ಗಂಭೀರವಾಗಿ ಸಭೆ ನಡೆಸಬೇಕು. ಗ್ರಾಮಾಭಿವೃದ್ಧಿಯಲ್ಲಿ ತೊಡಗಬೇಕು.
ಹಾನಗಲ್ಲ: ಗ್ರಾಮ ಪಂಚಾಯಿತಿಗಳನ್ನು ವಿಧಾನಸೌಧದಷ್ಟೆ ಶಕ್ತಿಯುತವಾಗಿಸಲು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಆಡಳಿತ ವಿಕೇಂದ್ರೀಕರಣ ಮಾಡಿ ಶಕ್ತಿ ತುಂಬಿದರು. ದಿಲ್ಲಿಯಿಂದ ಹಣ ನೇರವಾಗಿ ಹಳ್ಳಿ ತಲುಪುವಂತೆ ಮಾಡಿದರು ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ತಾಲೂಕಿನ ಬೆಳಗಾಲಪೇಟೆ ಗ್ರಾಮದಲ್ಲಿ ₹28 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ರಾಜೀವ್ ಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಸರ್ಕಾರದ ಆರ್ಥಿಕ ವಹಿವಾಟಿನ ಚೆಕ್‌ಗೆ ಸಹಿ ಮಾಡುವ ಅಧಿಕಾರವನ್ನು ಗ್ರಾಪಂ ಅಧ್ಯಕ್ಷರಿಗೆ ಮಾತ್ರ ನೀಡಲಾಗಿದೆ. ಗ್ರಾಪಂ ಸದಸ್ಯರು ಹೆಚ್ಚು ಗಂಭೀರವಾಗಿ ಸಭೆ ನಡೆಸಬೇಕು. ಗ್ರಾಮಾಭಿವೃದ್ಧಿಯಲ್ಲಿ ತೊಡಗಬೇಕು. ಕಾಲಕಾಲಕ್ಕೆ ಆಗುವ ಬದಲಾವಣೆ, ಸರ್ಕಾರದ ಸುತ್ತೋಲೆಗಳನ್ನು ಗಮನಿಸಬೇಕು. ಸ್ವಚ್ಛತೆ, ಬೀದಿದೀಪ ನಿರ್ವಹಣೆ, ಕುಡಿಯುವ ನೀರು ಪೂರೈಕೆಯನ್ನು ತೆರಿಗೆ ಹಣದಲ್ಲಿಯೇ ಮಾಡಬೇಕಿರುವ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ತೆರಿಗೆ ಭರಿಸುವ ನಿಟ್ಟಿನಲ್ಲಿ ಸಮುದಾಯದಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಿದರು.2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೃಷ್ಣ ಬೈರೇಗೌಡ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಿದ್ದ ಸಂದರ್ಭದಲ್ಲಿ ತಾಲೂಕಿನ 10 ಗ್ರಾಪಂ ಕಟ್ಟಡಗಳಿಗೆ ತಲಾ ₹10 ಲಕ್ಷ ಅನುದಾನ ದೊರಕಿಸಲಾಗಿತ್ತು. ಇದರಲ್ಲಿ ಬೆಳಗಾಲಪೇಟೆ ಸಹ ಒಂದಾಗಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಿದ್ದ ಸಂದರ್ಭದಲ್ಲಿ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕಾಳಜಿ ವಹಿಸುವಂತೆ ಕರೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಮಂಜುಳಾ ಬ್ಯಾಲಾಳ, ಉಪಾಧ್ಯಕ್ಷೆ ಅಮಿರಾಬಿ ತಹಶೀಲ್ದಾರ್, ಸದಸ್ಯರಾದ ಶಿವಶಂಕ್ರಯ್ಯ ಹಿರೇಮಠ, ಮಕ್ಬೂಲ್ ಮಿಠಾಯಿಗಾರ, ಪ್ರಶಾಂತ ಕಾಡಪ್ಪನವರ, ಮೆಹಬೂಬ ಹುದ್ದಾರ, ವಿಜಯ ಉರಣಕರ, ಖ್ವಾಜಾಮೊಹಿದ್ದೀನ್ ಹರವಿ, ಶಕೀಲಾಬಾನು ಎಲಿಗಾರ, ಜಯಲಕ್ಷ್ಮಿ ಹರಿಜನ, ರೇಷ್ಮಾ ತಳವಾರ, ನೇತ್ರಾ ಪೋಪಳೆ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ತಾಪಂ ಕೆಡಿಪಿ ಸದಸ್ಯ ಪ್ರಕಾಶ ಈಳಿಗೇರ, ಕೃಷ್ಣ ಉರಣಕರ, ಸೋಮಣ್ಣ ಗಾಣಗೇರ, ಜಾಫರ್ ತಹಶೀಲ್ದಾರ್, ಉದಯ ಉರಣಕರ, ಗದಿಗಯ್ಯ ಹಿರೇಮಠ, ಅಜಮತ್ ಬಾವಾಖಾನವರ, ಪಾಂಡು ಪೋಪಳೆ, ಟಾಕನಗೌಡ ಪಾಟೀಲ, ಮಂಜು ಗೊರಣ್ಣನವರ, ಪುಟ್ಟಪ್ಪ ನರೇಗಲ್, ಈರಣ್ಣ ಬೈಲವಾಳ, ಆದರ್ಶ ಶೆಟ್ಟಿ, ತಾಪಂ ಇಒ ಪರಶುರಾಮ ಪೂಜಾರ ಇದ್ದರು.