ರಾಜೀವ್‌ ಗಾಂಧಿ, ಅರಸು ಶ್ರಮ ಅಪಾರ

| Published : Aug 21 2025, 01:00 AM IST

ಸಾರಾಂಶ

ಮಾಜಿ ಪ್ರಧಾನಿ ರಾಜೀವ್‍ ಗಾಂಧಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ಅಪಾರ ನಂಬಿಕೆ ಇತ್ತು. ಸಮಾಜದ ಎಲ್ಲ ವರ್ಗದವರು ಎಲ್ಲದರಲ್ಲೂ ಭಾಗಿ ಆಗಬೇಕು ಎಂದು ಬಯಸಿದ್ದರು. ಈ ಹಿನ್ನಲೆ ಸಂವಿಧಾನ 73-74 ತಿದ್ದುಪಡಿ ಮಾಡಿ ಮಹಿಳೆಯರಿಗೆ ಸ್ಥಳೀಯಮಟ್ಟದ ಚುನಾವಣೆಗಳಲ್ಲಿ ಪ್ರಾತಿನಿಧ್ಯ ಇರಲೆಂದು ಮೀಸಲಾತಿ ಕಲ್ಪಿಸಿದರು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿದ್ದಾರೆ.

- ಮಾಜಿ ಪ್ರಧಾನಿ, ಮಾಜಿ ಸಿಎಂ ಜನ್ಮದಿನಾಚರಣೆಯಲ್ಲಿ ದಿನೇಶ್‌ ಶೆಟ್ಟಿ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಜಿ ಪ್ರಧಾನಿ ರಾಜೀವ್‍ ಗಾಂಧಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ಅಪಾರ ನಂಬಿಕೆ ಇತ್ತು. ಸಮಾಜದ ಎಲ್ಲ ವರ್ಗದವರು ಎಲ್ಲದರಲ್ಲೂ ಭಾಗಿ ಆಗಬೇಕು ಎಂದು ಬಯಸಿದ್ದರು. ಈ ಹಿನ್ನಲೆ ಸಂವಿಧಾನ 73-74 ತಿದ್ದುಪಡಿ ಮಾಡಿ ಮಹಿಳೆಯರಿಗೆ ಸ್ಥಳೀಯಮಟ್ಟದ ಚುನಾವಣೆಗಳಲ್ಲಿ ಪ್ರಾತಿನಿಧ್ಯ ಇರಲೆಂದು ಮೀಸಲಾತಿ ಕಲ್ಪಿಸಿದರು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬುಧವಾರ ನಡೆದ ಮಾಜಿ ಪ್ರಧಾನಮಂತ್ರಿ ದಿ। ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ। ದೇವರಾಜ ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರಿಗೆ ಶೇ.33ರಷ್ಟು, ಹಿಂದುಳಿದವರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಿದರು. ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಶೇ.50ರಷ್ಟು ಮಹಿಳೆಯರಿಗೆ ಅವಕಾಶ ಸಿಕ್ಕಿದ್ದರೆ ಅದಕ್ಕೆ ರಾಜೀವ್‍ ಗಾಂಧಿ ಕಾರಣ. ಬಿಜೆಪಿ ಆಗಲಿ ಯಾವುದೇ ಪಕ್ಷದವರು ಈ ಸೌಲಭ್ಯ ಜಾರಿಗೆ ತರಲಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಡಿ.ಬಸವರಾಜ್ ಮಾತನಾಡಿ, ರಾಜೀವ್ ಗಾಂಧಿ ದೂರದೃಷ್ಟಿ ಇಟ್ಟುಕೊಂಡು 21ನೇ ಶತಮಾನಕ್ಕೆ ಕಾಲಿಡುವುದಕ್ಕೆ ಸಿದ್ಧತೆಯನ್ನು ಪ್ರಮಾಣಿಕವಾಗಿ ಪ್ರಯತ್ನ ಮಾಡಿದರು. ಯುವಶಕ್ತಿ ಮೇಲೆ ಬಹಳಷ್ಟು ನಂಬಿಕೆ ಇಟ್ಟವರು. ದೇಶದ ಚುನಾವಣೆಯಲ್ಲಿ ಯುವಕರು ಭಾಗವಹಿಸಬೇಕು ಎಂದು 18 ವಯಸ್ಸಿನವರಿಗೆ ಮತದಾನಕ್ಕೆ ಅವಕಾಶ ಕೊಟ್ಟರು. ಲೋಕಸಭೆ ಚುನಾವಣೆಯಲ್ಲಿಯು ಯುವಕರು ಭಾಗಿವಹಿಸುವಂತೆ ಮಾಡಿದರು ಎಂದರು.

ಬಡವರ ಬಂಧು ಅರಸು:

ಅದೇ ರೀತಿ ದೇವರಾಜ ಅರಸು ಸಹ ರೈತರು, ಬಡವರಿಗಾಗಿ ಶ್ರಮಿಸಿದರು. 1972 ರಿಂದ 1980 ರವರೆಗೆ ಮುಖ್ಯಮಂತ್ರಿ ಆಗಿದ್ದರು. ಹುಣಸೂರು ಕ್ಷೇತ್ರ ಪ್ರತಿನಿಧಿಸಿದ್ದರು. ಸಾಮಾಜಿಕ ನ್ಯಾಯದ ಪರವಾಗಿ ಇದ್ದ ಅರಸು ಅಧಿಕಾರದಲ್ಲಿದ್ದಾಗಿ ಬಡವರಿಗೆ ನ್ಯಾಯ ಕೊಡಿಸಲು ಪ್ರಯತ್ನ ಮಾಡಿದರು. ಮಲ ಹೊರುವ ಪದ್ಧತಿ ನಿಲ್ಲಿಸುವ ಮೂಲಕ ಜೀತಪದ್ಧತಿಗೆ ಮಂಗಳ ಹಾಡಿದವರು. ಅದಕ್ಕಾಗಿ ನಾವು ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತೇವೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ್ ಮಾತನಾಡಿ, ದಾವಣಗೆರೆಯಲ್ಲಿ ದೇವರಾಜಜ ಅರಸು ನೆನಪಿಗಾಗಿ ಬಡಾವಣೆ ನಿರ್ಮಿಸಲಾಗಿದೆ. ಈ ಬಡಾವಣೆಯಲ್ಲಿರುವ ರೈಲ್ವೆ ಮೇಲ್ಸೇತುವೆಗೆ ದೇವರಾಜ ಅರಸು ಅವರ ಹೆಸರನ್ನು ನಾಮಕರಣ ಮಾಡುವಂತೆ ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಲಹೆ ನೀಡಿದರು.

ಈ ವೇಳೆ ಮಹಿಳಾ ಕಾಂಗ್ರೆಸ್‍ನ ಸುಧಾ, ಸಲ್ಮಾಬಾನು, ರಮೇಶ್ ಟಿ., ಮುಜಾಹಿದ್, ಮಹಾನಗರ ಪಾಲಿಕೆ ಮಾಜಿ ಉಪ ಮಹಾಪೌರ ಸೋಗಿ ಶಾಂತಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಉಮಾ ತೋಟಪ್ಪ, ಅನ್ನಪೂರ್ಣಮ್ಮ, ವನಜಾಕ್ಷಿ, ಎಚ್.ಜಯಣ್ಣ, ಎಲ್.ಡಿ.ಗೋಣೆಪ್ಪ, ಹನುಮಂತರಾಜ್ (ಪಾಪಣ್ಣಿ), ಘನಿ ತಾಹೀರ್, ಆಲೂರು ಶಿವಕುಮಾರ್, ರಘು ಜಾಧವ್, ಅಕ್ಬರ್, ದೇವರಹಟ್ಟಿ ಸಮೀವುಲ್ಲಾ, ವಿನಾಯಕ, ಮುಜಾಹಿದ್, ಮಂಜುನಾಥ್, ಶ್ರೀನಿವಾಸ್, ನಾಗರಾಜ್ ಗೌಡ, ಯುವರಾಜ್ ಮತ್ತಿತರರಿದ್ದರು.

- - -

-20ಕೆಡಿವಿಜಿ37: ದಾವಣಗೆರೆ ಜಿಲ್ಲಾ ಕಾಂಗ್ರೆಸ್‌ನಿಂದ ದಿ। ರಾಜೀವ್ ಗಾಂಧಿ ಮತ್ತು ದಿ। ದೇವರಾಜ ಅರಸು ಜನ್ಮದಿನವನ್ನು ಆಚರಿಸಲಾಯಿತು.