ಸಾರಾಂಶ
ಕೆ.ಎಂ.ದೊಡ್ಡಿ: ಸಮೀಪದ ಮುಟ್ಟನಹಳ್ಳಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಇ. ರಾಜಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಹಿಂದಿನ ಅಧ್ಯಕ್ಷ ಚಿಕ್ಕನಾಥೇಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಂ.ಇ.ರಾಜಕುಮಾರ್ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ಸಿ.ಎ.ಸುಧಾಕರ್ ಘೋಷಿಸಿದರು. ನೂತನ ಅಧ್ಯಕ್ಷ ಎಂ.ಇ.ರಾಜಕುಮಾರ್ ಮಾತನಾಡಿ, ಸಹಕಾರ ಸಂಘಗಳು ರೈತರಿಗೆ ವರದಾನವಾಗಬೇಕು. ಆ ನಿಟ್ಟಿನಲ್ಲಿ ಸಂಘದ ಅಭಿವೃದ್ಧಿಗೆ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದಸ್ಯರ ಜತೆಗೂಡಿ ಮಾದರಿ ಸಂಘ ಮಾಡಲು ಪಣತೊಡುತ್ತೇನೆ ಎಂದು ಭರವಸೆ ನೀಡಿದರು. ತಾಪಂ ಮಾಜಿ ಸದಸ್ಯ ಭರತೇಶ್, ಸಂಘದ ಉಪಾಧ್ಯಕ್ಷೆ ಎನ್. ಮಂಜುಳಾ, ನಿರ್ದೇಶಕರಾದ ಎಂ.ಇ. ಮಹೇಂದ್ರ, ಎಂ.ಟಿ. ಅಶೋಕ್, ಎಂ.ಎಚ್.ಪುಟ್ಟಸ್ವಾಮಿ, ಕಲ್ಪನಾ, ವೆಂಕಟಯ್ಯ, ಗೋಪಾಲ್, ಟಿ. ವೆಂಕಟೇಶ್, ಪ್ರಜ್ವಲ್, ಸಿಇಒ ಉಮೇಶ್, ಮುಖಂಡರಾದ ಪುರುಷೋತ್ತಮ್, ಮಂಚೇಗೌಡ, ಗಂಗಾಧರ್, ಪ್ರಕಾಶ್ ಸೇರಿದಂತೆ ಮತ್ತಿತರಿದ್ದರು.