ಪಡುವಳಲು ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ರಾಜು

| Published : Jul 17 2024, 12:54 AM IST

ಸಾರಾಂಶ

ಪಡುವಳಲು ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಪಿ ಸಿ ರಾಜು ಅವಿರೋಧವಾಗಿ ಆಯ್ಕೆಯಾದರು.ನಮ್ಮ ಊರಿನ ಹಾಲಿನ ಡೈರಿ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕರು ಹಾಗೂ ಗ್ರಾಮಸ್ಥರ ಸಲಹೆ ಸಹಕಾರವನ್ನು ತೆಗೆದುಕೊಂಡು ನೂತನ ಹಾಲಿನ ಡೇರಿಯ ಉಳಿದ ಕಟ್ಟಡದ ಕಾಮಗಾರಿ ಪೂರ್ಣಗೊಳಿಸುವುದರ ಬಗ್ಗೆ ಹಾಲಿನ ಡೇರಿಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಪಡುವಳಲು ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಪಿ ಸಿ ರಾಜು ಅವಿರೋಧವಾಗಿ ಆಯ್ಕೆಯಾದರು. ತಾಲೂಕಿನ ಪಡುವಳಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಪಿ ಟಿ ಶಿವಣ್ಣನವರ ಅವಧಿ ಮುಗಿದ್ದಿದು ಅವರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಸಂಘದ 11 ಜನ ನಿರ್ದೇಶಕರುಗಳಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಪಿ ಸಿ ರಾಜು ಅವರನ್ನು ಚುನಾವಣಾಧಿಕಾರಿಯಾಗಿದ್ದ ಸಾವಿತ್ರಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಲಾಯಿತು.

ನೂತನ ಅಧ್ಯಕ್ಷ ಪಿ ಸಿ ರಾಜು ಮಾತನಾಡಿ, ನನ್ನನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರು ಹಾಗೂ ಗ್ರಾಮಸ್ಥರಿಗೆ ಗ್ರಾಮ ಪಂಚಾಯತಿ ಸದಸ್ಯರಿಗೆ ಅಭಿನಂದನೆ ತಿಳಿಸುತ್ತೇನೆ. ನಮ್ಮ ಊರಿನ ಹಾಲಿನ ಡೈರಿ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕರು ಹಾಗೂ ಗ್ರಾಮಸ್ಥರ ಸಲಹೆ ಸಹಕಾರವನ್ನು ತೆಗೆದುಕೊಂಡು ನೂತನ ಹಾಲಿನ ಡೇರಿಯ ಉಳಿದ ಕಟ್ಟಡದ ಕಾಮಗಾರಿ ಪೂರ್ಣಗೊಳಿಸುವುದರ ಬಗ್ಗೆ ಹಾಲಿನ ಡೇರಿಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.

ನಿರ್ದೇಶಕರಾದ ಚಂದ್ರೇಗೌಡ, ಮಹೇಶ್,ನಾಗೇಶ್, ಹಾಲಪ್ಪಯ್ಯ,ಶಾಂತಣ್ಣ, ಯತೀಶ್,ರುದ್ರೇಶ್, ದೊರೆಸ್ವಾಮಿ, ತೀರ್ಥ ಬೋಜೇಶ್ ಯಶೋಧ, ಹಾಲಿನ ಡೇರಿಯ ಕಾರ್ಯದರ್ಶಿ ದಿಲೀಪ್, ಗ್ರಾ.ಪಂ. ಸದಸ್ಯ ಉದಯ್ ಕುಮಾರ್, ಮಾಜಿ ಸದಸ್ಯ ಹರೀಶ್ ಮಾಜಿ ನಿರ್ದೇಶಕರಾದ ರಾಜೇಗೌಡ, ನಿಂಗರಾಜು ಹಾಗೂ ಗ್ರಾಮಸ್ಥರು ಹಾಜರಿದ್ದರು.