ದಸರಾ ಉತ್ಸವಕ್ಕೆ ಮಾಜಿ ಸಚಿವ ರಾಜೂಗೌಡ ಚಾಲನೆ

| Published : Oct 16 2023, 01:45 AM IST

ದಸರಾ ಉತ್ಸವಕ್ಕೆ ಮಾಜಿ ಸಚಿವ ರಾಜೂಗೌಡ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯ ಮತ್ತು ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಗರದ ವೇಣುಗೋಪಾಲಸ್ವಾಮಿ ಆವರಣದಲ್ಲಿ ನಾಡಹಬ್ಬ ಉತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸ್ತಬ್ಧಚಿತ್ರ ಮೆರವಣಿಗೆಗೆ ಮಾಜಿ ಸಚಿವ ರಾಜೂಗೌಡ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಸುರಪುರ ಕನ್ನಡ ಸಾಹಿತ್ಯ ಮತ್ತು ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಗರದ ವೇಣುಗೋಪಾಲಸ್ವಾಮಿ ಆವರಣದಲ್ಲಿ ನಾಡಹಬ್ಬ ಉತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸ್ತಬ್ಧಚಿತ್ರ ಮೆರವಣಿಗೆಗೆ ಮಾಜಿ ಸಚಿವ ರಾಜೂಗೌಡ ಚಾಲನೆ ನೀಡಿದರು. ಮಾಜಿ ಸಚಿವರು ನಾಡದೇವಿ ಭಾವಚಿತ್ರವಿರುವ ಟ್ಯಾಕ್ಟರ್‌ ಚಲಾಯಿಸಿ ಜನರಲ್ಲಿ ಉತ್ಸಾಹ ತುಂಬಿದರು. ಮಕ್ಕಳನ್ನು ಮಾತನಾಡಿಸುತ್ತಾ ಭಾವಚಿತ್ರ ತೆಗೆಸಿಕೊಂಡು ಉರಿಬಿಸಿಲಿನಲ್ಲೂ ಹುರಿದುಂಬಿಸಿದರು. ಸ್ತಬ್ಧ ಚಿತ್ರ ಮೆರವಣಿಗೆ ಹೆಜ್ಜೆ ಹಾಕಿದರು. ಇನ್ನು ಕೆಲವು ಕನ್ನಡ ಸಾಹಿತ್ಯ ಸಂಘದ ಮುಖಂಡರು ವಿದ್ಯಾರ್ಥಿಗಳ ಲೇಜಿಮ್ ಮತ್ತು ಹಲಗೆ ಸದ್ದಿಗೆ ಹೆಜ್ಜೆ ನೋಡುಗರನ್ನು ಬೆರಗಾಗುವಂತೆ ಮಾಡಿದರು. ಟ್ರ‍್ಯಾಕ್ಟರ್‌ಗಳ ಅಂದಚೆಂದವಾಗಿ ಸ್ತಬ್ಧಚಿತ್ರಗಳನ್ನು ಸಿದ್ಧತೆ ಮಾಡಿದ್ದರು. ಆನಂದ ವಿದ್ಯಾಲಯದಿಂದ ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕ ಅವರ ಭಾವಚಿತ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಾಲೋಕಳಿಯ ಮಲ್ಲಗಂಬ, ಜಾಗೃತಿ ಸಮಾಜ ಸೇವಾ ಸಂಸ್ಥೆಯಿಂದ ಬಾಹ್ಯಾಕಾಶ ಸ್ತಬ್ಧಚಿತ್ರ, ರಾಣಿ ಜಾನಕಿ ದೇವಿ ಪ್ರೌಢಶಾಲೆಯಿಂದ ಬಾಲಕೃಷ್ಣ ಸ್ತಬ್ಧಚಿತ್ರ, ಸರ್ವೋದಯ ಶಿಕ್ಷಣ ಸಂಸ್ಥೆಯಿಂದ ಮುರುಡೇಶ್ವರದಲ್ಲಿರುವ ಈಶ್ವರನ ಸ್ತಬ್ಧ ಚಿತ್ರ ರಸ್ತೆಯ ಇಕ್ಕೆಲುಗಳಲ್ಲಿ ನಿಂತಿದ್ದ ಪ್ರೇಕ್ಷಕರ ಕಣ್ಮನ ಸೆಳೆಯಿತು. ನಗರದ ವೇಣುಗೋಪಾಲ ಸ್ವಾಮಿ ರಸ್ತೆ ಮಾರ್ಗವಾಗಿ ದರಬಾರ ರಸ್ತೆ, ಗಾಂಧೀಜಿ ವೃತ್ತದಿಂದ ಗರುಡಾದ್ರಿ ಕಲಾಮಂದಿರ ತಲುಪಿತು. ಸರ್ವೋದಯ ಶಿಕ್ಷಣ ಸಂಸ್ಥೆಯಿಂದ ಮುರುಡೇಶ್ವರದಲ್ಲಿರುವ ಈಶ್ವರನ ಸ್ತಬ್ಧ ಚಿತ್ರವು ಈಶ್ವರನೇ ಧರೆಗಿಳಿದು ಬಂದAತೆ ಭಾಸವಾಗುತ್ತಿತ್ತು. ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ರಾಜಾ ಮುಕುಂದ ನಾಯಕ, ಗೌರವಾಧ್ಯಕ್ಷ ರಾಜಾ ಪಾಮ ನಾಯಕ, ಟಿಹೆಚ್‌ಒ ಡಾ. ಆರ್.ವಿ. ನಾಯಕ, ಕಿಶೋರಚಂದ್ ಜೈನ್, ಬಿ.ಎಂ. ಹಳ್ಳಿಕೋಟಿ, ಪ್ರಕಾಶ ಸಜ್ಜನ್, ಪ್ರಕಾಶ ಗುತ್ತೇದಾರ, ರಾಘವೇಂದ್ರ ಬಾಡಿಹಾಳ, ಸೋಮನಾಥ ಡೊಣ್ಣಿಗೇರಿ, ಶ್ರೀನಿವಾಸ ಜಾಲವಾದಿ, ಶಂಕರನಾಯಕ, ಬಸವರಾಜ ಜಮದ್ರಖಾನಿ, ಬಸವರಾಜ ದೇಶಮುಖ್, ಮಹೇಶ ಜಹಾಗೀರದಾರ, ಹಣಮಂತ್ರಾಯ ದೊರೆ, ಸಂಪತ್‌ಕುಮಾರ ಇತರರಿದ್ದರು. --------- 15ವೈಡಿಆರ್9 ಸುರಪುರ ನಗರದ ವೇಣುಗೋಪಾಲ ಸ್ವಾಮಿ ಆವರಣದಲ್ಲಿ ನಾಡಹಬ್ಬ ಉತ್ಸವ ನಿಮಿತ್ತ ಕನ್ನಡ ಸಾಹಿತ್ಯ ಸಂಘದ ಸ್ತಬ್ಧ ಚಿತ್ರ ಮೆರವಣಿಗೆಗೆ ಮಾಜಿ ಸಚಿವ ನರಸಿಂಹನಾಯಕ ರಾಜೂಗೌಡ ಚಾಲನೆ ನೀಡಿದರು.