ರಾಜ್ಯಸಭೆ ಚುನಾವಣೆ: ಎರಡು ನಾಮಪತ್ರ ತಿರಸ್ಕೃತ

| Published : Feb 17 2024, 01:16 AM IST

ಸಾರಾಂಶ

ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಸಲ್ಲಿಕೆಯಾಗಿರುವ ಏಳು ಅಭ್ಯರ್ಥಿಗಳ ನಾಮಪತ್ರಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳಾದ ಡಾ.ಕೆ.ಪದ್ಮರಾಜನ್ ಹಾಗೂ ಮಲ್ಲಿಕಾರ್ಜುನ ಕೆಂಗನೂರು ಅವರ ನಾಮಪತ್ರಗಳು ತಿರಸ್ಕೃತ ಗೊಂಡಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಸಲ್ಲಿಕೆಯಾಗಿರುವ ಏಳು ಅಭ್ಯರ್ಥಿಗಳ ನಾಮಪತ್ರಗಳ ಪೈಕಿ ಇಬ್ಬರು ಪಕ್ಷೇತರರ ಉಮೇದುವಾರಿಕೆ ತಿರಸ್ಕೃತಗೊಂಡಿವೆ. ಪಕ್ಷೇತರ ಅಭ್ಯರ್ಥಿಗಳಾದ ಡಾ.ಕೆ.ಪದ್ಮರಾಜನ್ ಹಾಗೂ ಮಲ್ಲಿಕಾರ್ಜುನ ಕೆಂಗನೂರು ಅವರ ನಾಮಪತ್ರಗಳು ತಿರಸ್ಕೃತ ಗೊಂಡಿವೆ. ನಾಮಪತ್ರ ಸಲ್ಲಿಕೆ ವೇಳೆ ಸೂಚಕರ ಸಹಿ ಇಲ್ಲದ ಕಾರಣ ಉಮೇದುವಾರಿಕೆ ತಿರಸ್ಕೃತಗೊಂಡಿವೆ.

ಇನ್ನುಳಿದಂತೆ ಬಿಜೆಪಿಯ ನಾರಾಯಣಸಾ.ಕೆ ಭಾಂಡಗೆ, ಕಾಂಗ್ರೆಸ್‌ನ ಅಜಯ್ ಮಕನ್, ಜಿ.ಸಿ. ಚಂದ್ರಶೇಖರ್ ಮತ್ತು ಡಾ. ಸೈಯದ್ ನಾಸಿರ್ ಹುಸೇನ್ ಹಾಗೂಗು ಜೆಡಿಎಸ್‌ನ ಡಿ.ಕುಪೇಂದ್ರ ರೆಡ್ಡಿ ಅವರ ನಾಮಪತ್ರಗಳು ಮಾನ್ಯಗೊಂಡಿದೆ. ಇದೇ ತಿಂಗಳು 20 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ಒಂದು ವೇಳೆ ಯಾರಾದರೂ ನಾಮಪತ್ರ ಹಿಂಪಡೆದರೆ ಮಾತ್ರ ಅವಿರೋಧ ಆಯ್ಕೆ ನಡೆಯಲಿದೆ. ಆದರೆ, ಪಸ್ತುತ ಸನ್ನಿವೇಶದಲ್ಲಿ ಯಾರೂ ಸಹ ನಾಮಪತ್ರ ಹಿಂಪಡೆಯುವ ಸಾಧ್ಯತೆ ಇಲ್ಲ. ಹೀಗಾಗಿ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿದೆ. ಈ ತಿಂಗಳ 27ರಂದು ಚುನಾವಣೆ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ಗಂಟೆವರೆಗೆ ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ106 ರಲ್ಲಿ ಮತದಾನ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ಜರುಗಲಿದೆ.