ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸುವಂತಾಗಬೇಕು

| Published : Nov 05 2024, 12:30 AM IST / Updated: Nov 05 2024, 12:31 AM IST

ಸಾರಾಂಶ

ಕನ್ನಡ ನಾಡು-ನುಡಿಯ ಶ್ರೀಮಂತಿಕೆಯನ್ನು ಸಾರುವ ನಾಡಗೀತೆಯನ್ನು ವಿದ್ಯಾರ್ಥಿಗಳು ರಾಗಬದ್ಧವಾಗಿ ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.

ಕನನಡಪ್ರಭ ವಾರ್ತೆ ಮೈಸೂರುಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸುವಂತಾಗಬೇಕು ಎಂದು ವಿಜಯವಿಠಲ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಹೇಳಿದರು.ನಗರದ ಸರಸ್ವತಿಪುರಂನಲ್ಲಿರುವ ವಿಜಯವಿಠ್ಠಲ ವಿದ್ಯಾಶಾಲೆಯಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜ ಮತ್ತು ನಾಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಕನ್ನಡ ನಾಡು-ನುಡಿಯ ಶ್ರೀಮಂತಿಕೆಯನ್ನು ಸಾರುವ ನಾಡಗೀತೆಯನ್ನು ವಿದ್ಯಾರ್ಥಿಗಳು ರಾಗಬದ್ಧವಾಗಿ ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.ಕನ್ನಡ ನಾಡನ್ನು ಆಳ್ವಿಕೆ ಮಾಡಿದ ರಾಜಮನೆತನಗಳ ಬಗ್ಗೆ ಹಾಗೂ ಕರ್ನಾಟಕ ಎಂದು ಹೆಸರು ಬರಲು ಕಾರಣವೇನು ಮತ್ತು ಮಹಾನ್ ಕನ್ನಡ ಕವಿಗಳು ರಚಿಸಿರುವ ಕನ್ನಡ ನಾಡು ನುಡಿಯ ಶ್ರೀಮಂತಿಕೆಯ ಮಹತ್ವ ಸಾರುವ ಪದ್ಯದ ಸಾರಗಳನ್ನು ತಿಳಿಸಿದರು. ಸ್ವಾತಂತ್ರ್ಯ ಹೋರಾಟದ ನಂತರ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸುವ ಮೂಲಕ ಕರ್ನಾಟಕ ರಾಜ್ಯ ಹೇಗೆ ಉಗಮವಾಯಿತು, ಅದಕ್ಕಾಗಿ ಹೋರಾಡಿ ಮಡಿದ ಮಹನೀಯರ ತ್ಯಾಗವನ್ನು ನೆನಪಿಸಿದರು.ವಿಜಯವಿಠ್ಠಲ ವಿದ್ಯಾಶಾಲೆಯ ಪ್ರಾಂಶುಪಾಲೆ ಎಸ್.ಎ. ವೀಣಾ, ಶಾಲೆಯ ಎಲ್ಲ ವಿಭಾಗದ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಇದ್ದರು.