ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲಾ ಪಂಚಾಯತಿ ರಸ್ತೆಯಲ್ಲಿರುವ ನಗರದ ಮಹಾತ್ಮ ಗಾಂಧೀಜಿ ಭವನದಲ್ಲಿ ರಾಜ್ಯೋತ್ಸವ ನಿಮಿತ್ತ ಜಿಲ್ಲಾ ಕಸಾಪ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪ್ರದಾನ ಸಮಾರಂಭ ನ.1 ರಂದು ಜರುಗಲಿದೆ. ಪ್ರಶಸ್ತಿಗೆ ಆಯ್ಕೆಯಾದ ಡಾ.ಚಂದ್ರಕಾಂತ ಬಂಡೆಪ್ಪ(ಶಿಕ್ಷಣ) ವಿಜಯಪುರ, ಶಶಿಕಲಾ ಇಜೇರಿ (ಸಮಾಜ ಸೇವೆ) ವಿಜಯಪುರ, ರಾಜೇಶ್ವರಿ ಜುಗತಿ (ಶಿಕ್ಷಣ) ವಿಜಯಪುರ, ಅಶೋಕ ಹಾರಿವಾಳ (ಕನ್ನಡ ಸೇವೆ) ಬಸವನಬಾಗೇವಾಡಿ, ಎಸ್.ಎಂ.ನೆರಬೆಂಚಿ (ಸಂಕೀರ್ಣ) ಮುದ್ದೇಬಿಹಾಳ, ಶಬ್ಬೀರ್ ನದಾಫ (ಚಿತ್ರಕಲೆ) ವಿಜಯಪುರ. ಶಿವಲೀಲಾ ಮುರಾಳ (ಜಾನಪದ ) ತಾಳಿಕೋಟೆ, ಧರೂ ಖಿಲಾರಿ (ವಿಜ್ಞಾನ) ಮುಳವಾಡ, ತಿಪ್ಪಣ್ಣ ದಳವಾಯಿ (ಶಿಕ್ಷಣ) ಕೊಲ್ಹಾರ, ಸೈಫನಸಾಬ್ ಮುಜಾವರ (ನಾಟಿ ವೈದ್ಯ) ಬಸವನಬಾಗೇವಾಡಿ, ಮುತ್ತು ಸಂಕಣ್ಣನವರ (ರಂಗಭೂಮಿ) ಬಬಲೇಶ್ವರ ಕಸಾಪದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಪತ್ರಿಕೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.ರಾಜ್ಯೋತ್ಸವ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನ.01 ರಂದು ಬೆಳಗ್ಗೆ 8 ಗಂಟೆಗೆ ಜಿಲ್ಲಾ ಪಂಚಾಯುತಿ ಮಾಜಿ ಅಧ್ಯಕ್ಷೆ ಅಪ್ಸರಾಬೇಗಂ ಚಪ್ಪರಬಂದ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಶಂಕ್ರುಬಾಯಿ ಚಲುವಾದಿ ವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಕೋಶಾಧ್ಯಕ ಅಭಿಷೇಕ ಚಕ್ರವರ್ತಿ, ಅರ್ಜುನ ಶಿರೂರ, ಜಿ.ಎಸ್.ಬಳ್ಳೂರ, ರಾಜೇಶ್ವರಿ ಮೋಪಗಾರ ಹಾಗೂ ಪದಾಧಿಕಾರಿಗಳು ಹಾಗೂ ಸದಸ್ಯರು ಕನ್ನಡದ ಅಭಿಮಾನಿಗಳು ಉಪಸ್ಥಿತರಿರುವರು. 9 ಗಂಟೆಗೆ ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಮಧ್ಯಾಹ್ನ 3 ಗಂಟೆಗ ರಾಜ್ಯೋತ್ಸವ ಕುರಿತು ಸಮಾರಂಭ ಮಹಾತ್ಮ ಗಾಂಧೀಜಿ ಭವನದಲ್ಲಿ ಜರುಗಲಿದೆ. ಉದ್ಘಾಟಕರಾಗಿ ಡಾ.ಮಹಾಂತೇಶ ಬಿರಾದಾರ, ಅಧ್ಯಕ್ಷರಾಗಿ ಭಾರತಿ ಪಾಟೀಲ, ಉಪನ್ಯಾಸಕರಾಗಿ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿಲ್ಪಾ ಭಸ್ಮೆ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಹೇಶ ಕ್ಯಾತನ, ಶಿವರಾಜ ಬಿರಾದಾರ, ಕಮಲಾ ಮುರಾಳ, ರಾಜೇಶ್ವರಿ ಮೋಪಗಾರ, ದಾಕ್ಷಾಯಿಣಿ ಹುಡೇದ, ಡಾ.ಸುರೇಖಾ ರಾಠೋಡ ಆಗಮಿಸಲಿದ್ದಾರೆ. ಉಪನ್ಯಾಸ ಕಾರ್ಯಕ್ರಮ ನಂತರ ರಾಜ್ಯೋತ್ಸವ ಕುರಿತು ಕವಿಗೋಷ್ಠಿ ಕಾರ್ಯಕ್ರಮ ಜರುಗುವುದು. ಇಪ್ಪತ್ತು ಜನ ಕವಿಗಳು ಕವನ ವಾಚನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))