ಮಂಡ್ಯ ಜಿಲ್ಲೆಯ ೨೧ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

| Published : Nov 01 2024, 12:18 AM IST

ಸಾರಾಂಶ

ನವೆಂಬರ್ ೧ ರಂದು ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುವ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು .

ಕನ್ನಡಪ್ರಭ ವಾರ್ತೆ ಮಂಡ್ಯ

ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಬೇಲೂರು ಸೋಮಶೇಖರ್, ಡಾ.ಪಿ.ಸುಮಾರಾಣಿ, ಬಸವರಾಜ ಹೆಗ್ಗಡೆ ಸೇರಿದಂತೆ ವಿವಿಧ ಕ್ಷೇತ್ರದ ೨೧ ಸಾಧಕರಿಗೆ ೨೦೨೪ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲಾಡಳಿತ ಆಯ್ಕೆ ಮಾಡಿದೆ.

ಚಂದ್ರವನ ಆಶ್ರಮದ ಪೀಠಾಧ್ಯಕ್ಷ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ (ಶಿಕ್ಷಣ- ಆರೋಗ್ಯ ಸೇವೆ), ಬೇಲೂರು ಸೋಮಶೇಖರ್ (ಸಹಕಾರ ಕ್ಷೇತ್ರ), ಡಾ.ಪಿ.ಸುಮಾರಾಣಿ ಶಂಭು (ಸಾಹಿತ್ಯ), ಬಸವರಾಜ ಹೆಗ್ಗಡೆ, ರಜನೀಶ್‌ ಪಾಟೀಲ್ (ಮಾಧ್ಯಮ), ಕೃಷ್ಣೇಗೌಡ, ಕೆ.ಆರ್‌.ರಮೇಶ್, ಕೆ.ಜೆ.ಜ್ಞಾನೇಶ್ (ರಂಗಭೂಮಿ), ಪಾಪಯ್ಯ, ನಾಗರಾಜಯ್ಯ (ಸಂಘಟನೆ), ರಾಜಯೋಗಿನಿ ಬಿ.ಕೆ.ಶಾರದಾ (ಅಂತಾರಾಷ್ಟ್ರೀಯ ಶಾಂತಿ ಮತ್ತು ಮಾನವತೆ), ಸೈಯ್ಯದ್ ಘನಿ ಖಾನ್ (ಪ್ರಗತಿಪರ ಕೃಷಿ), ವೈ.ಥಾಮಸ್ ಬೆಂಜಮಿನ್, ಬಿ.ಎಂ.ಪ್ರಕಾಶ್ (ಸಮಾಜ ಸೇವೆ), ಜಗದೀಶ್ (ವೀರಗಾಸೆ- ಸಾಂಸ್ಕೃತಿಕ), ಡಾ.ಎಚ್.ಎಂ.ನಾಗೇಶ್ (ಸಾಹಿತ್ಯ - ಶಿಕ್ಷಣ), ಎಚ್.ಎಂ.ಬಸವರಾಜು (ಯುವಜನ ಸೇವೆ), ಪದ್ಮಶ್ರೀನಿವಾಸ್ (ಸಂಕೀರ್ಣ), ಬಿ.ಡಿ.ಪುರಷೋತ್ತಮ (ಸಹಕಾರ- ಸಂಘ ಕ್ಷೇತ್ರ), ಕೂಡಲಕುಪ್ಪೆ ಸೋಮಶೇಖರ್ (ಅರುಣೋದಯ ಕಲಾತಂಡ), ಕ್ಷೀರಸಾಗರ ಮಿತ್ರಕೂಟ, ಕಾಳಮ್ಮನ ನಾಗೇಶ್ (ಕೀಲಾರ) ಇವರನ್ನು ೨೦೨೪ನೇ ಸಾಲಿನ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನವೆಂಬರ್ ೧ ರಂದು ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುವ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಪುರಸ್ಕೃತರು ಸಕಾಲಕ್ಕೆ ಆಗಮಿಸಿ ಪ್ರಶಸ್ತಿ ಸ್ವೀಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.