ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಜಿಲ್ಲಾ ಸಂಘದಿಂದ ಸನ್ಮಾನ

| Published : Nov 11 2024, 11:45 PM IST

ಸಾರಾಂಶ

ತಾವಾಗಿಯೇ ಅರ್ಜಿ ಹಾಕಿಕೊಂಡು ಪಡೆಯುವ ಪ್ರಶಸ್ತಿಗಿಂತ ತಾನಾಗೆ ಪ್ರೀತಿಯಿಂದ ಹುಡುಕಿಕೊಂಡು ಬರುವ ಪ್ರಶಸ್ತಿಯಿಂದ ಸಿಗುವ ಹರ್ಷ ಮನಸ್ಸಿಗೆ ಸಂತೋಷ ಕೊಡುತ್ತದೆ. ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿಪಡೆದವರಿಗೆ ಜಿಲ್ಲಾ ಪತ್ರಕರ್ತರ ಸಂಘವು ಇಂತಹ ಅಭಿನಂದನೆ ಏರ್ಪಡಿಸಿರುವುದು ಶ್ಲಾಘನೀಯವಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹಾಸನ

ತಾವಾಗಿಯೇ ಅರ್ಜಿ ಹಾಕಿಕೊಂಡು ಪಡೆಯುವ ಪ್ರಶಸ್ತಿಗಿಂತ ತಾನಾಗೆ ಪ್ರೀತಿಯಿಂದ ಹುಡುಕಿಕೊಂಡು ಬರುವ ಪ್ರಶಸ್ತಿಯಿಂದ ಸಿಗುವ ಹರ್ಷ ಮನಸ್ಸಿಗೆ ಸಂತೋಷ ಕೊಡುತ್ತದೆ. ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿಪಡೆದವರಿಗೆ ಜಿಲ್ಲಾ ಪತ್ರಕರ್ತರ ಸಂಘವು ಇಂತಹ ಅಭಿನಂದನೆ ಏರ್ಪಡಿಸಿರುವುದು ಶ್ಲಾಘನೀಯವಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಾಲು ಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್ ಪ್ರಶಸ್ತಿಗೆ ಭಾಜನರಾದ ರವಿ ನಾಕಲಗೂಡು, ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ಸಾಹಿತ್ಯ ಶ್ರೀ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದ ಚಲಂ ಹಾಡ್ಲಹಳ್ಳಿ ಹಾಗೂ ನವೆಂಬರ್ ೧ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಭಾಜನರಾದ ಎಸ್.ಡಿ. ರಂಗಸ್ವಾಮಿ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶ್ತಿ ಪಡೆದ ಪಿ.ಎ. ಶ್ರೀನಿವಾಸ್ ಅವರನ್ನು ಜಿಲ್ಲಾ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಿ ನಂತರ ಮಾತನಾಡಿದ ಅವರು, ಬಾಗೂರು ಚಳುವಳಿಯ ಹೋರಾಟದ ನೆನಪನ್ನು ಮೊದಲು ನೆನಪಿಸಿಕೊಂಡರು.

ವಿಭಿನ್ನವಾದ ಸಂದರ್ಭದಲ್ಲಿ ಸನ್ಮಾನಿಸುವುತ್ತಿರುವುದು ಉತ್ತಮವಾಗಿದೆ. ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್ ಪ್ರಶಸ್ತಿಗೆ ಭಾಜನರಾದ ರವಿ ನಾಕಲಗೂಡು, ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ಸಾಹಿತ್ಯ ಶ್ರೀ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದ ಚಲಂ ಹಾಡ್ಲಹಳ್ಳಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾದ ಎಸ್.ಡಿ. ರಂಗಸ್ವಾಮಿ, ಪಿ.ಎ. ಶ್ರೀನಿವಾಸ್ ಅವರನ್ನು ಕೂಡ ನೆನಪಿಸಿಕೊಳ್ಳುತ್ತೇವೆ ಎಂದರು. ಕರ್ನಾಟಕ ಸಂಭ್ರಮ ಸುವರ್ಣ ಮಹೋತ್ಸವ ಪ್ರಶಸ್ತಿ ಪಡೆದಿರುವ ಎಚ್.ಬಿ. ಮದನ್ ಗೌಡರಿಗೆ ಒಂದು ಘನತೆಯ ಪ್ರಶಸ್ತಿ ಸಿಕ್ಕಿದೆ. ಇಂತಹ ಪ್ರಶಸ್ತಿಯು ಇನ್ನಷ್ಟು ಜವಬ್ಧಾರಿ ಹೆಚ್ಚಿಸುತ್ತದೆ ಎಂದು ಹೇಳಿದರು. ಸಾಲು ಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್ ಪ್ರಶಸ್ತಿಗೆ ಭಾಜನರಾದ ರವಿ ನಾಕಲಗೂಡು ಮಾತನಾಡಿ, ಪತ್ರಕರ್ತರ ಕ್ಷೇತ್ರದಿಂದ ಪರಿಗಣಿಸಿ ಗ್ರೀನ್ ಅವಾರ್ಡ್‌ಗೆ ಅವಕಾಶ ನನಗೆ ಸಿಕ್ಕಿದೆ. ನನಗೆ ಎಲ್ಲಾ ಗೌರವ ಸಂದಲು, ಹೆಸರು ಬರಲು, ಪತ್ರಕರ್ತರ ಸಂಘವೇ ಕಾರಣ. ಸಂಘ ಬಲಿಷ್ಠವಾಗಿ ಸಂಘಟನೆಯಾದರೆ ಇದರಲ್ಲಿ ದುಡಿದವರಿಗೆ ಗೌರವ ಸಿಗಲಿದೆ ಎಂದರು. ನಮ್ಮ ಸಂಘದಲ್ಲಿ ಮಾಡಿದ್ದು ಅತೀವ ಸಂತಸ ತಂದಿದೆ. ಶಿವಾನಂದ ಅವರು ನೆರೆಯ ರಾಜ್ಯಗಳೂ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದರು. ಚಲಂ ಹಾಡ್ಲಹಳ್ಳಿ ಮಾತನಾಡಿ, ನನಗೆ ಸಾಹಿತ್ಯ ಪ್ರವೃತ್ತಿ, ಸಾಂಘಿಕ ಶಕ್ತಿ ಅನುಭವಿಸಿದಾಗ ಅದರಿಂದ ಸಿಗುವ ಖುಷಿಯೇ ಬೇರೆ, ಮುರಿದು ಕಟ್ಟುವುದು ಕ್ರಿಯಾಶೀಲ ಕೆಲಸ, ಸೂಕ್ಷ್ಮತೆ ಬರುವುದು ಸಾಹಿತ್ಯದಿಂದ ಎಲ್ಲಾ ಪತ್ರಕರ್ತರೂ ಸಾಹಿತ್ಯದ ನಂಟು ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್ ಅವರು ಮಾತನಾಡಿ, ಹಾಸನಾಂಬ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ವಿಳಂಬವಾಯಿತು. ಸುವರ್ಣ ಮಹೋತ್ಸವ ಪ್ರಶಸ್ತಿಗೆ ಬಾಜನರಾಗಿರುವ ಎಚ್.ಬಿ. ಮದನ ಗೌಡರು ಇಂದು ಕಾರ್ಯಕ್ರಮದಲ್ಲಿ ಕಾರಣಾಂತರಗಳಿಂದ ಗೈರಾಗಿದ್ದಾರೆ ಅವರಿಗೆ ಮುಂದಿನ ದಿನಗಳಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಹಿರಿಯರ ಮಾರ್ಗದರ್ಶನದಂತೆ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು ಮುಂದಿನ ದಿನಗಳಲ್ಲಿಯೂ ಸಂಘ ಮತ್ತಷ್ಟು ಸಕ್ರಿಯವಾಗಿ ಮುನ್ನಡೆಯುವ ಆಶಯ ವ್ಯಕ್ತಪಡಿಸಿದರು. ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್‌ ಪ್ರಶಸ್ತಿ ಪುರಸ್ಕೃತ ರವಿನಾಕಲಗೂಡು, ಕನ್ನಡ ಸಾಹಿತ್ಯ ಅಕಾಡೆಮಿ ನೀಡುವ ಸಾಹಿತ್ಯಶ್ರೀ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಚಲಂ ಹಾಡ್ಲಹಳ್ಳಿ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಭಾಜನರಾದ ಎಸ್.ಡಿ ರಂಗಸ್ವಾಮಿ, ಪಿ.ಎ. ಶ್ರೀನಿವಾಸ್ ಅವರನ್ನು ಜಿಲ್ಲಾ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಮೀನಾಕ್ಷಮ್ಮ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಶೇಷಾದ್ರಿ, ಲೀಲಾವತಿ, ಕೆ.ಆರ್‌. ಮಂಜುನಾಥ್, ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಕೆ.ಜಿ ಸುರೇಶ್, ಚಲಂ, ಧರ್ಮರಾಜು ಕಡಗ ಸೇರಿದಂತೆ ಇತರರು ಮಾತನಾಡಿ ಪ್ರಶಸ್ತಿ ಪಡೆದವರ ಬಗ್ಗೆ ಕೆಲ ಸಮಯ ಮಾತನಾಡಿದರು. ಇನ್ನು ಹೊಳೆನರಸೀಪುರ ತಾಲೂಕಿನ ಪತ್ರಕರ್ತರು ಕೂಡ ಆಗಮಿಸಿ ಪ್ರಶಸ್ತಿ ಬಾಜನರನ್ನು ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಟಿ. ಮೋಹನ್, ಖಜಾಂಚಿ ಕುಮಾರ್‌, ಕಾರ್ಯದರ್ಶಿ ನಟರಾಜ್, ಸಿ.ಬಿ. ಸಂತೋಷ್, ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಹರೀಶ್ ಸ್ವಾಗತಿಸಿ ವಂದಿಸಿದರು.