ಸಾರಾಂಶ
ಸತ್ಯನಾರಾಯಣ ಮಾಸ್ತಿ ಮಾತನಾಡಿ, ಕನ್ನಡದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ರಾಜ್ಯದಲ್ಲಿ ಅನ್ಯಭಾಷಿಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಿ, ಅವರಿಗೂ ಕನ್ನಡವನ್ನು ಕಲಿಸುವ ಕಾರ್ಯವನ್ನು ಮಾಡಬೇಕಿದೆ ಎಂದರು.
ಕನ್ನಡಪ್ರಭ ವಾರ್ತೆ ಸಂಡೂರು
ಕರ್ನಾಟಕ ರಾಜ್ಯೋತ್ಸವದ ೫೦ರ ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡಿರುವ ಜ್ಯೋತಿ ರಥಯಾತ್ರೆಗೆ ತಾಲೂಕಿನಲ್ಲಿ ಮಂಗಳವಾರ ಭವ್ಯವಾಗಿ ಸ್ವಾಗತವನ್ನು ನೀಡಲಾಯಿತು.ಕೂಡ್ಲಿಗಿ ಮೂಲಕ ತಾಲೂಕಿನ ಬಂಡ್ರಿ, ಯಶವಂತನಗರದ ಮೂಲಕ ಸಂಡೂರಿಗ ಆಗಮಿಸಿದ ರಥಯಾತ್ರೆಗೆ ಶಾಸಕ ಈ. ತುಕಾರಾಂ, ತಹಸೀಲ್ದಾರ್ ಜಿ. ಅನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಹೊನ್ನೂರಪ್ಪ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಭವ್ಯವಾಗಿ ಸ್ವಾಗತಿಸಿದರು.
ಶಾಸಕರು ಮಾತನಾಡಿ, ರಾಜ್ಯಕ್ಕೆ ಕರ್ನಾಟದ ಎಂದು ಪುನರ್ ನಾಮಕರಣಕವಾಗಿ ೫೦ ವರ್ಷಗಳಾಗಿರುವ ಹಿನ್ನೆಲೆ ಈ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ನಾಡು, ನುಡಿ, ಕಲೆ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯವಾಗಿದೆ ಎಂದರು.ಸತ್ಯನಾರಾಯಣ ಮಾಸ್ತಿ ಮಾತನಾಡಿ, ಕನ್ನಡದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ರಾಜ್ಯದಲ್ಲಿ ಅನ್ಯಭಾಷಿಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಿ, ಅವರಿಗೂ ಕನ್ನಡವನ್ನು ಕಲಿಸುವ ಕಾರ್ಯವನ್ನು ಮಾಡಬೇಕಿದೆ ಎಂದರು.
ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕ್ಷೇತ್ರ ಸಮನ್ವಯಾಧಿಕಾರಿ ಕೆ. ಶರಣಬಸಪ್ಪ, ಪುರಸಭೆ ಮುಖ್ಯಾಧಿಕಾರಿ ಕೆ. ಜಯಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರಾದ ಎಚ್. ಕುಮಾರಸ್ವಾಮಿ, ದಾದಾ ಖಲಂದರ್, ಪಿ. ರಾಜು, ಜಿ.ಎಸ್. ಸೋಮಪ್ಪ, ಎಂ.ಎಲ್.ಕೆ. ನಾಯ್ಡು, ಎಲ್. ಶಿವಕುಮಾರ್, ಸುರೇಶ್, ರವಿ, ಪರಶುರಾಮ್, ಗಡಂಬ್ಲಿ ಚೆನ್ನಪ್ಪ, ಗಡಾದ್ ರಮೇಶ್, ಹನುಮೇಶ್, ಜಯರಾಮ್ ಮುಂತಾದವರು ಉಪಸ್ಥಿತರಿದ್ದರು.ಚಿತ್ರ: ೧೫ಎಸ್.ಎನ್.ಡಿ.೦೧ಸಂಡೂರಿಗೆ ಮಂಗಳವಾರ ಆಗಮಿಸಿದ ಕರ್ನಾಟಕ ರಾಜ್ಯೋತ್ಸವ ೫೦ರ ಸಂಭ್ರಮದ ಜ್ಯೋತಿ ರಥ ಯಾತ್ರೆಗೆ ಶಾಸಕ ಈ. ತುಕಾರಾಂ ಮುಂತಾದವರು ಭವ್ಯವಾಗಿ ಸ್ವಾಗತಿಸಿದರು.