ಸಾರಾಂಶ
ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಕೋಟೆ ನಾಡು ಚಿತ್ರದುರ್ಗದಲ್ಲಿ ಯುವಕರು ರಾಮ ಮಂದಿರ ಮಾದರಿಯ ಟ್ಯಾಟ್ಯೂ ಕಡೆ ತಮ್ಮ ಚಿತ್ತ ಹಾಕಿದ್ದಾರೆ.
ಚಿತ್ರದುರ್ಗ: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಕೋಟೆ ನಾಡು ಚಿತ್ರದುರ್ಗದಲ್ಲಿ ಯುವಕರು ರಾಮ ಮಂದಿರ ಮಾದರಿಯ ಟ್ಯಾಟ್ಯೂ ಕಡೆ ತಮ್ಮ ಚಿತ್ತ ಹಾಕಿದ್ದಾರೆ.
ನಗರದ ಕೆಳಗೋಟೆ ನಿವಾಸಿ ಯುವಕ ಹರೀಶ್ ತನ್ನ ಕೈಮೇಲೆ ರಾಮ ಮಂದಿರದ ಟ್ಯಾಟ್ಯೂ ಹಾಕಿಸಿಕೊಂಡು ತನ್ನ ಶ್ರದ್ಧೆಯನ್ನು ಮೆರೆದಿದ್ದಾನೆ.
ಜೊತೆಗೆ ತನ್ನ ಎದೆಯ ಮೇಲೆ ಶ್ರೀರಾಮ ತನ್ನ ನೆಚ್ಚಿನ ಭಂಟ ಆಂಜನೇಯನನ್ನು ತಬ್ಬಿಕೊಂಡಿರುವ ಟ್ಯಾಟ್ಯೂ ಹಾಕಿಸಿಕೊಂಡಿದ್ದಾನೆ.
ಟ್ಯಾಟ್ಯೂ ಕಲಾವಿದ ಮಣಿ ಇಂತಹ ಮಾದರಿಯ ಚಿತ್ರಗಳನ್ನು ಈಗಾಗಲೇ ಮೂವರು ಯುವಕರಿಗೆ ಹಾಕಿರುವುದಾಗಿ ಹೇಳಿದ್ದಾರೆ. ರಾಮಮಂದಿರ ನಿರ್ಮಾಣದ ಹಿಂದೆ ಹಲವರ ಶ್ರಮ ಇದೆ.
ಇದು ಹಿಂದೂಗಳ ಹೆಮ್ಮೆಯ ದಿನ. ರಾಮಮಂದಿರಕ್ಕಾಗಿ ಹೋರಾಟ ಮಾಡಿದವರ ಸೇವೆಯ ಮುಂದೆ ನಮ್ಮದೇನೂ ಇಲ್ಲ. ಆದ್ದರಿಂದ ನನ್ನ ಶ್ರದ್ಧೆಯ ಅಂಗವಾಗಿ ಟ್ಯಾಟ್ಯೂ ಹಾಕಿಸಿಕೊಂಡಿದ್ದೇನೆ ಎನ್ನುತ್ತಾರೆ ಹರೀಶ್.