ಶ್ರೀ ರಾಮನವಮಿ ಮಹೋತ್ಸವದ ನಿಮಿತ್ತ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದಂತೆ ಲೋಕಕಲ್ಯಾಣಕ್ಕಾಗಿ ಅಮೆರಿಕಾದ ಹೂಸ್ಟನ್ ಮಹಾನಗರದ ಶ್ರೀ ಪುತ್ತಿಗೆ ಮಠದಲ್ಲಿ ಸೀತಾರಾಮಕಲ್ಯಾಣೋತ್ಸವವು ವೈಭವದಿಂದ ಸಂಪನ್ನಗೊಂಡಿತು.

ಉಡುಪಿ: ಶ್ರೀ ರಾಮನವಮಿ ಮಹೋತ್ಸವದ ನಿಮಿತ್ತ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದಂತೆ ಲೋಕಕಲ್ಯಾಣಕ್ಕಾಗಿ ಅಮೆರಿಕಾದ ಹೂಸ್ಟನ್ ಮಹಾನಗರದ ಶ್ರೀ ಪುತ್ತಿಗೆ ಮಠದಲ್ಲಿ ಸೀತಾರಾಮಕಲ್ಯಾಣೋತ್ಸವವು ವೈಭವದಿಂದ ಸಂಪನ್ನಗೊಂಡಿತು.

ಇದೇ ಸಂದರ್ಭ ಅಖಂಡ ಏಕಾಹ ಭಜನೋತ್ಸವವೂ ಸಮಾಪನಗೊಂಡಿತು. ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಉದಯಾಸ್ತಮಾನವಾಗಿ ನಡೆಯುವ ಈ ಭಜನೋತ್ಸವದಲ್ಲಿ ತಂಡೋಪತಂಡವಾಗಿ ನೂರಾರು ಭಜನಾ ತಂಡಗಳು ಭಾಗವಹಿಸಿದ್ದು ಸಂಜೆ ಭಕ್ತಜನರ ಸಮ್ಮುಖದಲ್ಲಿ ಪ್ರಧಾನ ಅರ್ಚಕ ರಘುರಾಮ್ ಭಟ್ ನೇತೃತ್ವದಲ್ಲಿ ವೈಭವದ ಸೀತಾರಾಮ ಕಲ್ಯಾಣೋತ್ಸವ ಜರಗಿತು.