ವಕೀಲರ ಸಂಘದ ವತಿಯಿಂದ ರಾಮನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಉಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದ್ದು ಸಾರ್ವಜನಿಕರಿಗೆ ಮಜ್ಜಿಗೆ, ಪಾನಕವನ್ನು ವಿತರಣೆ ಮಾಡುವ ಮೂಲಕ ಆದರ್ಶ ಪುರುಶ ಶ್ರೀರಾಮನ ಸ್ಮರಣೆಯನ್ನು ಮಾಡಲಾಗಿದ್ದು ದೇಶವು ಸುಭದ್ರವಾಗಿ ಇರಲು ದೇವರ ದಯೇ ಕೂಡ ಬೇಕಾಗುತ್ತದೆ. ಆದ್ದರಿಂದ ಯುದ್ಧಗಳಿಂದ ದೂರ ಸರಿದು ದೇಶಕ್ಕೆ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥನೆ ಮಾಡಲಾಗಿದೆ ಎಂದರು.

ಚನ್ನರಾಯಪಟ್ಟಣ: ಪಟ್ಟಣದ ವಕೀಲರ ಸಂಘದ ವತಿಯಿಂದ ಶ್ರೀರಾಮ ನವಮಿ ಹಬ್ಬದ ಅಂಗವಾಗಿ ಪಾನಕ, ಮಜ್ಜಿಗೆಯನ್ನು ಶುಕ್ರವಾರ ವಿತರಣೆ ಮಾಡಿದರು.

ವಕೀಲರ ಸಂಘದ ಅಧ್ಯಕ್ಷ ಡಿ. ಕೆ. ಹರೀಶ್ ಮಾತನಾಡಿ, ಪ್ರಭು ಶ್ರೀರಾಮ ಚಂದ್ರರು ಹುಟ್ಟಿದ ದಿನವಾದ ಇಂದು ನಮ್ಮ ವಕೀಲರ ಸಂಘದ ವತಿಯಿಂದ ರಾಮನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಉಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದ್ದು ಸಾರ್ವಜನಿಕರಿಗೆ ಮಜ್ಜಿಗೆ, ಪಾನಕವನ್ನು ವಿತರಣೆ ಮಾಡುವ ಮೂಲಕ ಆದರ್ಶ ಪುರುಶ ಶ್ರೀರಾಮನ ಸ್ಮರಣೆಯನ್ನು ಮಾಡಲಾಗಿದ್ದು ದೇಶವು ಸುಭದ್ರವಾಗಿ ಇರಲು ದೇವರ ದಯೇ ಕೂಡ ಬೇಕಾಗುತ್ತದೆ. ಆದ್ದರಿಂದ ಯುದ್ಧಗಳಿಂದ ದೂರ ಸರಿದು ದೇಶಕ್ಕೆ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥನೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಹೇಮಂತ್‌ ಕುಮಾರ್‌, ಹಿರಿಯ ವಕೀಲರಾದ ಬೋರೇಗೌಡ, ಎಲ್. ಪಿ. ಪ್ರಕಾಶ್‌ಗೌಡ, ಪ್ರಭಾಕರ್‌, ಡಿ. ಎ. ವಾಸು, ಕಾಂತರಾಜ್, ಬಸವರಾಜ್, ಅನಿಲ್‌ ಕುಮಾರ್‌, ಎ. ಡಿ. ಕುಮಾರ್, ಜಗದೀಶ್, ರಾಘವೇಂದ್ರ ಮತ್ತಿತರಿದ್ದರು.