ರಾಮ ರಾಜ್ಯ ನಿರ್ಮಾಣ ಪ್ರಧಾನಿ ಮೋದಿ ಕನಸು: ಉಮೇಶ ಜಾಧವ್

| Published : Apr 18 2024, 02:17 AM IST

ರಾಮ ರಾಜ್ಯ ನಿರ್ಮಾಣ ಪ್ರಧಾನಿ ಮೋದಿ ಕನಸು: ಉಮೇಶ ಜಾಧವ್
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ಭಾರತದಲ್ಲಿ ಈ ಬಾರಿಯ ರಾಮನವಮಿಯನ್ನು ಈ ಹಿಂದಿಗಿಂತಲೂ ಹೆಚ್ಚು ಸಂಭ್ರಮಲ್ಲಾಸದಿಂದ ಭಕ್ತರ ಆಚರಿಸುತ್ತಿದ್ದು ಭಾರತವನ್ನು ರಾಮರಾಜ್ಯವನ್ನಾಗಿಸಲು ಭಾರತೀಯರು ಬೆಂಬಲಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಡೀ ಭಾರತದಲ್ಲಿ ಈ ಬಾರಿಯ ರಾಮನವಮಿಯನ್ನು ಈ ಹಿಂದಿಗಿಂತಲೂ ಹೆಚ್ಚು ಸಂಭ್ರಮಲ್ಲಾಸದಿಂದ ಭಕ್ತರ ಆಚರಿಸುತ್ತಿದ್ದು ಭಾರತವನ್ನು ರಾಮರಾಜ್ಯವನ್ನಾಗಿಸಲು ಭಾರತೀಯರು ಬೆಂಬಲಿಸುತ್ತಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಮರಾಜ್ಯದ ಗುರಿಯತ್ತ ಆಡಳಿತ ನಡೆಸುತ್ತಿದ್ದಾರೆ ಎಂದು ಲೋಕಸಭಾ ಬಿಜೆಪಿ ಹುರಿಯಾಳು ಡಾ. ಉಮೇಶ್ ಜಾಧವ್ ಹೇಳಿದರು.

ಜೇವರ್ಗಿ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ದರ್ಶನ ಮಾಡಿ ಪೂಜೆ ನೆರವೇರಿಸಿ ನಂತರ ಮಾತನಾಡುತ್ತಾ ರಾಮನ ಆದರ್ಶವೂ ಸರ್ವರಲ್ಲೂ ಪರಿಪಾಲಿಸುವಂತಾದರೆ ಆದರ್ಶ ಸಮಾಜ ಸೃಷ್ಟಿಸಲು ಸಾಧ್ಯ ರಾಮಚಂದ್ರನ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾನ ಮಂದಿರ ನಿರ್ಮಾಣವಾಗಿರುವುದರಿಂದ ಈ ಬಾರಿಯ ರಾಮನವಮಿ ಈ ಹಿಂದಿಗಿಂತಲೂ ಹೆಚ್ಚಿನ ಮಹತ್ವ ಪಡೆದಿದೆ ಶ್ರೀರಾಮ ದೇವರು ಭಾರತೀಯರಿಗೆ ಶಾಂತಿ ನೆಮ್ಮದಿ ಸಮೃದ್ಧಿಯನ್ನು ಕರುಣಿಸಲಿ. 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ಭವ್ಯ ದೇಗುಲ ನಿರ್ಮಾಣಗೊಂಡಿರುವುದು ಇದು ಸನಾತನ ಹಿಂದೂ ಧರ್ಮದ ಮಾನಬಿಂದುವಾಗಿದೆ ಎಂದು ಹೇಳಿದರು.ರಾಮನ ಆದರ್ಶ ಇಡೀ ವಿಶ್ವಕ್ಕೆ ಅನುಕರಣೀಯವಾದುದು ಎಂದರು.

ಶ್ರೀರಾಮಚಂದ್ರನ ಮಹಾನ್ ಆಡಳಿತಗಾರ. ಸಾರ್ವಜನಿಕ ಸೇವೆಯಲ್ಲಿರುವವರಿಗೆ ರಾಮನ ರಾಜ್ಯಭಾರ ಆದರ್ಶವಾಗಿದೆ. ಮತ್ತು ಅದನ್ನು ಅನುಸರಿಸಿದಲ್ಲಿ ಮಹಾತ್ಮ ಗಾಂಧೀಜಿಯವರು ಕಂಡ ರಾಮ ರಾಜ್ಯದ ಕನಸು ಸಾಕಾರವಾಗುವುದು. ರಾಮನ ಆದರ್ಶದಲ್ಲಿ ವಸುದೈವ ಕುಟುಂಬಕಂ ಪಾಲನೆಯಾಗುತ್ತಿದ್ದು ಅದಕ್ಕಾಗಿ ಈ ದೇಶ ಸುಭದ್ರವಾಗಿದೆ. ಐಕ್ಯತೆಯಿಂದ ಕೂಡಿದೆ. ರಾಮ ಭಾರತೀಯರ ಸಂಸ್ಕೃತಿಯ ಪ್ರತೀಕ. ರಾಮನ ಆದರ್ಶ ನಮ್ಮ ಮಕ್ಕಳಿಗೆ ತಿಳಿಸಬೇಕಾದುದು ಬಹಳ ಮುಖ್ಯವಾಗಿದೆ ಎಂದರು.

ಕವಿಯೊಬ್ಬರು ಹಾಡಿದ ಹಾಗೆ ‘ಚಂದನ್ ಹೈ ಇಸ್ ದೇಶ್ ಕಿ ಮಾಟಿ, ತಪೋ ಭೂಮಿ ಹರ ಗ್ರಾಮ್ ಹೈ, ಹರ್ ಬಾಲಾ ದೇವಿ ಕೀ ಪ್ರತಿಮಾ, ಬಚ್ಚಾ ಬಚ್ಚಾ ರಾಮ್ ಹೈ’. ಈ ರೀತಿಯಾಗಿ ಸಂಸ್ಕಾರ ಕೊಟ್ಟು ನಮ್ಮ ಮಕ್ಕಳನ್ನು ಶ್ರದ್ಧೆಯ ತಾಯಂದಿರು ಮತ್ತು ಪೋಷಕರು ಆದರ್ಶಯುತವಾಗಿ ಬೆಳೆಸಬೇಕಾಗಿದೆಶ್ರೀರಾಮ ನಮ್ಮ ಬಾಳಿನ ಆದರ್ಶ ಪುರುಷ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಬಾಲರಾಜ ಗುತ್ತೇದಾರ್ ಜೊತೆಗಿದ್ದರು. ಶ್ರೀ ರಾಮ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷರಾದ ವಿದ್ಯಾಧರ ಭಟ್ ಡಾ. ಉಮೇಶ್ ಜಾಧವ್ ಹಾಗೂ ಬಾಲರಾಜ್ ಗುತ್ತೇದಾರ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಕಲ್ಬುರ್ಗಿ ವಿಮಾನ ನಿಲ್ದಾಣ ಪ್ರಾಧಿಕಾರದ ಸದಸ್ಯರಾದ ನರಸಿಂಹ ವೆಂಡರ್ ಮುರಳಿದರು ಗಿರಿಧರ ಭಟ್ ನಾಗರಾಜ ಆಚಾರ್ಯ ನಿರಂಜನ ರಾವ್ ಮತ್ತಿತರರು ಉಪಸ್ಥಿತರಿದ್ದರು.