ರಾಮಮಂದಿರ ಸಂಭ್ರಾಮಚರಣೆ, ವಿಶೇಷ ಪೂಜೆ: ನಾಗರಾಜ ಅಕ್ಕರಕಿ

| Published : Jan 20 2024, 02:02 AM IST

ರಾಮಮಂದಿರ ಸಂಭ್ರಾಮಚರಣೆ, ವಿಶೇಷ ಪೂಜೆ: ನಾಗರಾಜ ಅಕ್ಕರಕಿ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಿನ್ನಲೆಯಲ್ಲಿ ದೇವದುರ್ಗ ಪಟ್ಟಣದಲ್ಲಿ ಕೆಇಬಿ ಹತ್ತಿರುವ ಇರುವ ಹನುಮಾನ ದೇವಸ್ಥಾನ ಅವರಣದಲ್ಲಿ ಅದ್ಧೂರಿಯಾಗಿ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ದೇವದುರ್ಗ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಿನ್ನಲೆಯಲ್ಲಿ ದೇವದುರ್ಗ ಪಟ್ಟಣದಲ್ಲಿ ಕೆಇಬಿ ಹತ್ತಿರುವ ಇರುವ ಹನುಮಾನ ದೇವಸ್ಥಾನ ಅವರಣದಲ್ಲಿ ಅದ್ಧೂರಿಯಾಗಿ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕ ನಾಗರಾಜ ಅಕ್ಕರಕಿ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೊಂದು ದೇಶದ ಹಿಂದೂಗಳ ಹಬ್ಬವಾಗಿ ರೂಪುಗೊಂಡಿದ್ದು, ಅನೇಕ ವರ್ಷಗಳ ಕನಸು ನನಸಾಗಿ ಸಾಕಾರಗೊಳ್ಳಲು ಕ್ಷಣಗಣನೆ ಪ್ರಾರಂಭಗೊಂಡಿದೆ.

ಪಟ್ಟಣದ ಗೌರಂಪೇಟದಲ್ಲಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ವಿಶೇಷ ಪೂಜೆ ಮಾಡುವ ಮೂಲಕ ಸಂಭ್ರಮಾಚರಣೆಗೆ ಚಾಲನೆ ನೀಡಲಾಗುವದು. ಬಳಿಕ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಬಸವೇಶ್ವರ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡೊಲಾಗುವದು.

ಬಳಿಕ ಕೆಇಬಿ ರಸ್ತೆಯಲ್ಲಿರುವ ಹನುಮಾನ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು, ಅರ್ಚಕರು ಗಣಹೋಮ, ಶ್ರೀರಾಮತಾರಕ ಹೋಮ ನೆರವೇರಿಸಲಿದ್ದಾರೆ.

ಅಯೋಧ್ಯೆಯಲ್ಲಿ ನಡೆಯುತ್ತಿರುವ ಪೂಜಾ ವಿಧಾನಗಳು, ಅಲ್ಲಿಯ ಧಾರ್ಮಿಕ ಆಚರಣೆಗಳ ಸಂಭ್ರಮ ವೀಕ್ಷಿಸಲು ಎಲ್ಇಡಿ ಟಿವಿ ಏರ್ಪಡಿಸಲಾಗುವದು. ಮಹಿಳೆಯರಿಗೆ ರಂಗೋಲಿ ಸ್ಫರ್ಧೆ, ಮಕ್ಕಳಿಗಾಗಿ ಶ್ರೀರಾಮನ ಛದ್ಮವೇಶ ಸ್ಪರ್ದೆಯನ್ನು ಏರ್ಪಡಿಸಲಾಗಿದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಲಂಕಾರ, ಎಲ್ಲರ ಮನೆಗಳಲ್ಲಿ ಶ್ರೀರಾಮ ಸ್ಮರಣೆ ಹಾಗೂ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಾಲೂಕಿನ ಎಲ್ಲಾ ಭಕ್ತರು, ಹಿಂದೂ ಅಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರ ಯಶಸ್ವಿಗೊಳಿಸಬೇಕೆಂದು ಆಯೋಜಕ ನಾಗರಾಜ ಅಕ್ಕರಕಿ ತಿಳಿಸಿದರು.

ಈ ಸಂದರ್ಭದಲ್ಲಿ ಆಯೋಜಕ ಬಳಗದ ನಿಖಿಲ್ ಖೆಣೇದ್, ನಿರಂಜನ ಮೂರ್ತಿ, ತಿರುಮಲಾಚಾರ್ ಜೋಶಿ, ಸಚಿನ ದೋಟಿಹಾಳ, ವಾಸುದೇವ ನಾಯಕ ಗೌರಂಪೇಟ, ಮೌನೇಶ ಪತ್ತಾರ, ವೆಂಕಟೇಶನಾಯಕ ಚಿಂತಲಕುಂಟಿ ಇದ್ದರು.