ರಾಮಾಯಣ ಮಹಾಕಾವ್ಯದಲ್ಲಿ ಶೂರ್ಪನಖಿಯ ಮೂಗು ಕತ್ತರಿಸಿದ ಲಕ್ಷ್ಮಣ, ಸೀತೆ ಮೇಲೆ ಸಂಶಯಪಟ್ಟು ಕಾಡಿಗಟ್ಟಿದ ರಾಮ, ಸೀತೆಯನ್ನು ಅಪಹರಿಸಿ ಜೀವನವನ್ನೇ ಹಾಳು ಮಾಡಿದ ರಾವಣ ಇವರೆಲ್ಲರೂ ಆದರ್ಶರಲ್ಲ, ಕ್ರೂರಿಗಳು ಎಂದು ಬಂಡಾಯ ಸಾಹಿತಿ, ಮಾಜಿ ಸಚಿವ ಬಿ.ಟಿ.ಲಲಿತಾ ನಾಯಕ್ ಹೇಳಿದ್ದಾರೆ.

 ದಾವಣಗೆರೆ : ರಾಮಾಯಣ ಮಹಾಕಾವ್ಯದಲ್ಲಿ ಶೂರ್ಪನಖಿಯ ಮೂಗು ಕತ್ತರಿಸಿದ ಲಕ್ಷ್ಮಣ, ಸೀತೆ ಮೇಲೆ ಸಂಶಯಪಟ್ಟು ಕಾಡಿಗಟ್ಟಿದ ರಾಮ, ಸೀತೆಯನ್ನು ಅಪಹರಿಸಿ ಜೀವನವನ್ನೇ ಹಾಳು ಮಾಡಿದ ರಾವಣ ಇವರೆಲ್ಲರೂ ಆದರ್ಶರಲ್ಲ, ಕ್ರೂರಿಗಳು ಎಂದು ಬಂಡಾಯ ಸಾಹಿತಿ, ಮಾಜಿ ಸಚಿವ ಬಿ.ಟಿ.ಲಲಿತಾ ನಾಯಕ್ ಹೇಳಿದರು.

ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಭಾನುವಾರ ಬೇರು-ಚಿಗುರು ಕನ್ನಡ ಸಾಹಿತ್ಯ ಸಂಶೋಧನೆ ವಿಚಾರ ವೇದಿಕೆಯಿಂದ ಕನ್ನಡ ಸಾಹಿತ್ಯ ಮಹಿಳಾ ಸಂವೇದನೆಗಳು ವಿಷಯವಾಗಿ ಏರ್ಪಡಿಸಿದ್ದ ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು. ದೇಗುಲಗಳು ಜನರನ್ನು ಮೌಢ್ಯತೆಗೆ ತಳ್ಳುತ್ತಿವೆ. ಮೌಢ್ಯಗಳಿಂದ ಹೊರ ಬರಲು ಶಿಕ್ಷಣವೇ ಪರಿಹಾರ ಎಂದು ಅವರು ಅಭಿಪ್ರಾಯಪಟ್ಟರು.

ದೋಷಗಳನ್ನು ಒಪ್ಪಿಕೊಳ್ಳುವುದಲ್ಲ

ದ್ರೋಣಾಚಾರ್ಯ ಪಾಂಡವರಿಗೆ ಬಿಲ್ವಿದ್ಯೆ ಕಲಿಸುತ್ತಾನೆ. ಆದರೆ, ಏಕಲವ್ಯನಿಗೆ ಕಲಿಸಲಿಲ್ಲ. ಹೀಗಿದ್ದರೂ ಅಮಾಯಕ ಏಕಲವ್ಯನಿಗೆ ಹೆಬ್ಬೆಟ್ಟನ್ನೇ ಗುರುದಕ್ಷಿಣೆಯಾಗಿ ನೀಡುವಂತೆ ಕೇಳಿ ಪಡೆದು, ಆತನ ಜೀವನವನ್ನೇ ಹಾಳು ಮಾಡಿದರು. ಇವೆಲ್ಲಾ ದೋಷಗಳನ್ನು ಒಪ್ಪಿಕೊಳ್ಳುವುದಲ್ಲ ಎಂದರು. 

ಎಲ್ಲರೂ ಪೂಜಿಸುವ ಶ್ರೀರಾಮ ತನ್ನ ಪತ್ನಿ ಮೇಲೆ ಅನುಮಾನಪಟ್ಟ

ಎಲ್ಲರೂ ಪೂಜಿಸುವ ಶ್ರೀರಾಮ ತನ್ನ ಪತ್ನಿ ಮೇಲೆ ಅನುಮಾನಪಟ್ಟು, ಆಕೆಯನ್ನು ಕಾಡಿಗೆ ಬಿಟ್ಟು ಬರುವಂತೆ ಸಹೋದರ ಲಕ್ಷ್ಮಣನಿಗೆ ಹೇಳಿದ. ಕ್ರೂರ ಪ್ರಾಣಿಗಳಿಗೆ ಆಕೆ ಆಹಾರವಾಗಲಿ ಎನ್ನುವುದೇ ರಾಮನಿಗೆ ಬೇಕಿತ್ತು. ಆದರೆ, ಲಕ್ಷ್ಮಣನಾದರೂ ಅದು ತಪ್ಪು ಎನ್ನಬಹುದಿತ್ತು. ಆದರೆ, ಆತ ಹಾಗೆ ಹೇಳಲಿಲ್ಲ. ಲಕ್ಷ್ಮಣನಿಗೆ ಮೂಗು ಕೊಯ್ಯುವ ಚಪಲವಿತ್ತು. ಹಾಗಾಗಿಯೇ ಶೂರ್ಪನಖಿಯ ಮೂಗು ಕೊಯ್ದ. ಮಹಾನ್ ಪರಾಕ್ರಮ ಎನ್ನಿಸಿಕೊಂಡಿದ್ದ ರಾವಣ ಕಳ್ಳತನದಿಂದ ಪರರ ಪತ್ನಿಯನ್ನು ಹೊತ್ತೊಯ್ದ ಎಂದು ಚಿಂತಕಿ ಲಲಿತಾ ನಾಯಕ್ ರಾಮಾಯಣ ಮಹಾಕಾವ್ಯದ ಪಾತ್ರಗಳನ್ನು ಟೀಕಿಸಿದರು.