ಸಾರಾಂಶ
ಶ್ರೀರಾಮನವಮಿ ಅಂಗವಾಗಿ ನಗರದ ಶ್ರೀ ಸೀತರಾಮಾಂಜನೇಯ ದೇವಸ್ಥಾನದಲ್ಲಿ ಭಾನುವಾರ ಬೆಳಗಿನಿಂದ ವಿವಿಧ ಪೂಜೆ ಹಾಗೂ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಬೆಳಗಿನಿಂದಲೇ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನೀತರಾದರು. ಸೀತರಾಮಾಂಜನೇಯ ಸೇವಾ ಸಮಿತಿ ಉಪಾಧ್ಯಕ್ಷ ಎಂ.ಎನ್. ಪಾಂಡುರಂಗ ಮಾಧ್ಯಮದೊಂದಿಗೆ ಮಾತನಾಡಿ, ಈ ದೇವಸ್ಥಾನದಲ್ಲಿ ಕಳೆದ ೪೫ ವರ್ಷಗಳಿಂದಲೂ ವಿಶೇಷವಾದಂತಹ ರಾಮೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ಶ್ರೀರಾಮನವಮಿ ಅಂಗವಾಗಿ ನಗರದ ಶ್ರೀ ಸೀತರಾಮಾಂಜನೇಯ ದೇವಸ್ಥಾನದಲ್ಲಿ ಭಾನುವಾರ ಬೆಳಗಿನಿಂದ ವಿವಿಧ ಪೂಜೆ ಹಾಗೂ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಬೆಳಗಿನಿಂದಲೇ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನೀತರಾದರು.ಇದೇ ವೇಳೆ ಶ್ರೀ ಸೀತರಾಮಾಂಜನೇಯ ಸೇವಾ ಸಮಿತಿ ಉಪಾಧ್ಯಕ್ಷ ಎಂ.ಎನ್. ಪಾಂಡುರಂಗ ಮಾಧ್ಯಮದೊಂದಿಗೆ ಮಾತನಾಡಿ, ಈ ದೇವಸ್ಥಾನದಲ್ಲಿ ಕಳೆದ ೪೫ ವರ್ಷಗಳಿಂದಲೂ ವಿಶೇಷವಾದಂತಹ ರಾಮೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ. ಈ ವರ್ಷವು ಕೂಡ ಯುಗಾದಿಯ ಪಾಡ್ಯದಿಂದ ಪ್ರಾರಂಭವಾಗಿ ೧೫ ದಿನಗಳ ಕಾಲ ಸತತವಾಗಿ ಪ್ರತಿನಿತ್ಯ ವಿವಿಧ ಹೋಮ ಇತರೆ ಪೂಜೆಗಳು ನಡೆದು, ೮ ದಿವಸಗಳ ಕಾಲ ಸಾಯಂಕಾಲ ರಾಮಾಯಣ ಪಾರಾಯಾಣ ಇದರ ಜೊತೆಗೆ ಶ್ರೇಷ್ಠ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಸೀತಾಲಕ್ಷ್ಮಿ ಹನುಮ ಸಹಿತ ರಾಮಚಂದ್ರ ಸ್ವಾಮಿಗೆ ಪ್ರತಿನಿತ್ಯ ಅಭಿಷೇಕ ನೆರವೇರಿಸಲಾಗುತ್ತಿದೆ. ಇಲ್ಲಿಗೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಅವರಿಗೆಲ್ಲಾ ಮದ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ನಮ್ಮ ಕಾರ್ಯಕಾರಿ ಮಂಡಳಿ ಅಧ್ಯಕ್ಷರು, ಸದಸ್ಯರೆಲ್ಲ ಸೇರಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಭಕ್ತಾದಿಗಳು ಕೂಡ ಎಲ್ಲಾ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.ಇದೇ ವೇಳೆ ಶ್ರೀ ಸೀತರಾಮಾಂಜನೇಯ ಸೇವಾ ಸಮಿತಿ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ಖಜಾಂಚಿ ಅನಂತರಾಮು, ನಿರ್ದೇಶಕ ವೆಂಕಟಸುಬ್ಬಯ್ಯ, ನಿಡಿಗೆರೆ ಚಂದ್ರು, ನಾಗರಾಜು, ಸುಜಾತ ಸೇರಿದಂತೆ ಇತರರು ಉಪಸ್ಥಿತರಿದ್ದರು.