ನೆಲಮಂಗಲದಲ್ಲಿಯೂ ರಾಮನ ದಿವ್ಯ ಸ್ಮರಣೆ

| Published : Jan 23 2024, 01:48 AM IST

ನೆಲಮಂಗಲದಲ್ಲಿಯೂ ರಾಮನ ದಿವ್ಯ ಸ್ಮರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯ ರಾಮ ಮಂದಿರ ನಿರ್ಮಾಣವಾಗಿ ಪ್ರತಿಷ್ಠಾಪನೆಯಾಗುತ್ತಿರುವ ಪ್ರಯುಕ್ತ ನಗರ ಹಾಗೂ ತಾಲೂಕಿನಾದ್ಯಂತ ರಾಮ ಹಾಗೂ ಹನುಮ ದೇವಾಲಯಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಆಂಜನೇಯ ಸ್ವಾಮಿಯ ದೇವಾಲಯಗಳಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ಶ್ರೀರಾಮ ಹಾಗೂ ಹನುಮನ ಜಪತಪಗಳಲ್ಲಿ ಮಿಂದೆದ್ದರು.

ತಾಲೂಕಿನ ರಾಮ, ಆಂಜನೇಯ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯ

ಕನ್ನಡಪ್ರಭ ವಾರ್ತೆ ನೆಲಮಂಗಲ

ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ನಗರ ಸೇರಿ ತಾಲೂಕಿನ ಶ್ರೀರಾಮನ ಹಾಗೂ ರಾಮ ಬಂಟ ಹನುಮನ ದೇವಾಲಯಗಳಲ್ಲಿ ವಿಶೇಷ ಪೂಜೆ ಕಾರ್ಯ ನೆರವೇರಿಸಲಾಯಿತು.

ಅಯೋಧ್ಯೆಯ ರಾಮ ಮಂದಿರ ನಿರ್ಮಾಣವಾಗಿ ಪ್ರತಿಷ್ಠಾಪನೆಯಾಗುತ್ತಿರುವ ಪ್ರಯುಕ್ತ ನಗರ ಹಾಗೂ ತಾಲೂಕಿನಾದ್ಯಂತ ರಾಮ ಹಾಗೂ ಹನುಮ ದೇವಾಲಯಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಆಂಜನೇಯ ಸ್ವಾಮಿಯ ದೇವಾಲಯಗಳಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ಶ್ರೀರಾಮ ಹಾಗೂ ಹನುಮನ ಜಪತಪಗಳಲ್ಲಿ ಮಿಂದೆದ್ದರು, ಸರತಿ ಸಾಲಿನಲ್ಲಿ ನಿಂತು ಶ್ರೀ ರಾಮ ಮತ್ತು ಆಂಜನೇಯಸ್ವಾಮಿ ದೇವರ ದರ್ಶನ ಪಡೆದರು.

ನೇರ ಪ್ರಸಾರದ ವ್ಯವಸ್ಥೆ:

ನಗರದ ಪೇಟೆಬೀದಿಯ ಶ್ರೀ ವೀರಶೈವ ಸಮಾಜದಿಂದ ಶ್ರೀರುದ್ರೇಶ್ವರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಆಯೋಧ್ಯೆ ರಾಮನ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರ ಪ್ರಸಾರ ನೋಡುವ ವ್ಯವಸ್ಥೆಯನ್ನು ಒದಗಿಸಲಾಗಿತ್ತು. ರುದ್ರೇಶ್ವರ ಸೊಸೈಟಿ ಅಧ್ಯಕ್ಷ ಎನ್. ಬಿ. ದಯಾಶಂಕರ್, ಕವಾಡಿಮಠ ದೇವಾಲಯದ ಎನ್. ಆರ್. ಜಗದೀಶ್, ರುದ್ರೇಶ್ವರ ದೇವಾಲಯದ ಕಾರ್ಯದರ್ಶಿ ಎನ್. ಜಿ. ರುದ್ರಮೂರ್ತಿ, ವಕೀಲ ರಾಜು, ಬಸವೇಶ್ವರ ಸಂಘದ ಅಧ್ಯಕ್ಷ ಗಣೇಶ್, ಟೌನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಚನ್ನಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

ಹಲವು ದೇಗುಲಗಳಲ್ಲಿ ವಿಶೇಷ ಪೂಜೆ:

ಪೇಟೆಬೀದಿಯ ವೀರಶೈವ ಸಮಾಜದಿಂದ ಶ್ರೀರುದ್ರೇಶ್ವರ ಸ್ವಾಮಿ ದೇಗುಲದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಿದರು. ತಾಲೂಕಿನ ಪುರಾಣ ಪ್ರಸಿದ್ಧ ಬೈರಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ದೇವಾಲಯ, ಅರಿಶಿನಕುಂಟೆ ಶ್ರೀ ರಾಮಾಂಜನೇಯ, ನಗರದ ಉತ್ತರ ಘಟ್ಟದ ಆಂಜನೇಯ ಸ್ವಾಮಿ, ಪರಮಣ್ಣ ಬಡಾವಣೆಯ ಶ್ರೀ ಆಂಜನೇಯ ಸ್ವಾಮಿ ಸೇರಿ ಹಲವು ದೇಗುಲಗಳಿಗೆ ಅಲಂಕೃತಗೊಳಿಸಿ ಪೂಜೆ ಸಲ್ಲಿಸಿ,ಪ್ರಸಾದ ವಿತರಿಸಲಾಯಿತು.

----

ರುದ್ರೇಶ್ವರ ದೇವಾಲಯದಲ್ಲಿ ಆಯೋಧ್ಯೆ ರಾಮ ಪ್ರತಿಷ್ಠಾಪನೆಯ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ರುದ್ರೇಶ್ವರ ಸೊಸೈಟಿ ಅಧ್ಯಕ್ಷ ಎನ್. ಬಿ. ದಯಾಶಂಕರ್, ಎನ್. ಆರ್. ಜಗದೀಶ್, ಎನ್. ಜಿ. ರುದ್ರಮೂರ್ತಿ, ವಕೀಲ ರಾಜು, ಗಣೇಶ್, ಚನ್ನಬಸವರಾಜು ಮತ್ತಿತರರಿದ್ದರು.