ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಅಯೋಧ್ಯಾ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಇಳಕಲ್ಲ ವೆಂಕಟೇಶ ದೇವಸ್ಥಾನದಲ್ಲಿ ಸೋಮವಾರ ಮುಂಜಾನೆಯಿಂದ ಪಾರಾಯಣ, ರಾಮತಾರಕ ಮಂತ್ರಾಂಗ ಹೋಮ, ಅನ್ನಸಂತರ್ಪಣೆ, ದೀಪೋತ್ಸವ, ಸಾಮೂಹಿಕ ಭಜನೆ, ತೊಟ್ಟಿಲೋತ್ಸವ ಇತರ ಕಾರ್ಯಕ್ರಮಗಳು ನಡೆದವು.ಬ್ರಾಹ್ಮಣ ಸಮಾಜದ ಅಧ್ಯಕ್ಷ ಪಾಂಡುರಂಗ ಕುಲಕರ್ಣಿ ನೇತೃತ್ವದಲ್ಲಿ ನಡೆದ ಎಲ್ಲ ಕಾರ್ಯಕ್ರಮಗಳಲ್ಲಿ ಹಿರಿಯರು, ಯುವಕರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.
ರಾಮ ತಾರಕಮಂತ್ರ ಹೋಮದ ನೇತೃತ್ವವನ್ನು ರಾಮಚಂದ್ರ ಹುನಕುಂಟಿ, ಶ್ರೀಹರಿ ಪೂಜಾರ, ಸಂತೋಷ ಸರಾಫ್, ಗಿರೀಶ ಜೋಶಿ, ಸತೀಶ ಹುನಕುಂಟಿ ಇತರರು ವಹಿಸಿದ್ದರು. ಪೂಜಾವಿಧಿಗಳನ್ನು ವೆಂಕಟೇಶಾಚಾರ್ಯ ಪೂಜಾರ, ನಾರಾಯಣಾಚಾರ್ಯ ಪೂಜಾರ ಹಾಗೂ ಗುರುರಾಜ ಪೂಜಾರ ನಿರ್ವಹಿಸಿದರು. ಸಮಾಜದವರು ಒಂದು ತಿಂಗಳಿಂದ ಮಾಡಿದ್ದ ಲಕ್ಷಾಂತರ ಜಪಗಳನ್ನು ಶ್ರೀರಾಮನಿಗೆ ಸಮರ್ಪಿಸಲಾಯಿತು. ಪೂರ್ಣಾಹುತಿ ನಂತರ ರಾಮಾಯಣ ಗ್ರಂಥವನ್ನು ಪಲ್ಲಕ್ಕಿಯಲ್ಲಿಟ್ಟು ನಗರದ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ಮಾಡಲಾಯಿತು.ಅನ್ನಸಂತರ್ಪಣೆ ನೇತೃತ್ವವನ್ನು ಲೆಕ್ಕಪತ್ರ ಪರಿಶೋಧಕ ಶ್ರೀನಿವಾಸ ದೋಟಿಹಾಳ ವಹಿಸಿದ್ದರು. ಬ್ರಾಹ್ಮಣ ಯುವಕ ಸಂಘದ ಸದಸ್ಯರು ಸಾಥ್ ನೀಡಿದರು. ವಾಣಿ ಜೋಶಿ ಪ್ರಸಾದ ವಿತರಣೆ ಜವಾಬ್ದಾರಿ ನಿರ್ವಹಿಸಿದರು. ಸಂಜೆ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಸಂಪದಾ ಕುಲಕರ್ಣಿ, ನಂದಿನಿ ಕುಲಕರ್ಣಿ, ಅರ್ಚನಾ ದೇಸಾಯಿ, ಸಿಂಧು ಪೂಜಾರ, ವೈಷ್ಣವಿ ಕುಲಕರ್ಣಿ ಸೇರಿ ಯುವತಿಯರು ರಂಗೋಲಿ ಬಿಡಿಸಿದರು. ಗಿರಿಧರ ದೇಸಾಯಿ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಲಕ್ಷ್ಮೀ ಮಹಿಳಾ ಮಂಡಳಿ ಅಧ್ಯಕ್ಷೆ ಸಾವಿತ್ರಿ ಕುಲಕರ್ಣಿ ನೇತೃತ್ವದಲ್ಲಿ ರಾತ್ರಿ ನಡೆದ ಸಾಮೂಹಿಕ ಭಜನೆ, ತೊಟ್ಟಿಲೋತ್ಸವ ಹಾಗೂ ರಾಮವೇಷಧಾರಿಗಳ ನೇತೃತ್ವವನ್ನು ಸುರೇಶ ಪೂಜಾರ, ಮಹಿಪತಿ ಕುಲಕರ್ಣಿ, ಗೀತಾ ಪಾಟೀಲ, ಚಂದ್ರಕಲಾ ಪೂಜಾರ, ಶ್ರೀದೇವಿ ಇನಾಮದಾರ, ಲಕ್ಷ್ಮೀ ಹುನಕುಂಟಿ, ಛಾಯಾ ಕುಲಕರ್ಣಿ ನಿರ್ವಹಿಸಿದರೆ, ಮಕ್ಕಳ ಪೌರಾಣಿಕ ವೇಷಧಾರಿಗಳ ಪ್ರದರ್ಶನವನ್ನು ಚಂದ್ರಿಕಾ ಕುಲಕರ್ಣಿ, ಸಂಗೀತಾ ದೇಶಪಾಂಡೆ ಇತರರು ನಿರ್ವಹಿಸಿದರು.ವೇದಿಕೆ ಕಾರ್ಯಕ್ರಮದಲ್ಲಿ ರಾಮನ ದಿವ್ಯ ವ್ಯಕ್ತಿತ್ವದ ಬಗ್ಗೆ ಗುಜರಾತ ಗುರೂಜಿ, ಪ್ರೊ. ರಮೇಶ ಕುಲಕರ್ಣಿ ಮಾತಾಡಿದರು. ಬಂಡು ರಾವ್ ಕಟ್ಟಿ ನಿರೂಪಿಸಿದರು. ಹಿರಿಯರಾದ ಡಾ.ಆರ್.ಎಂ. ಕುಲಕರ್ಣಿ, ಪ್ರೊ.ಎಸ್.ಕೆ. ಕುಲಕರ್ಣಿ, ಪಿ.ಜಿ. ಪಾಟೀಲ, ಗುರುರಾಜ ಕುಲಕರ್ಣಿ, ಕಮಲಾಕರ ದೇಶಪಾಂಡೆ, ಟಿ.ಎಚ್. ಕುಲಕರ್ಣಿ, ಭಾಸ್ಕರ ಪಾಟೀಲ, ಮಹೇಶ ಕುಲಕರ್ಣಿ ಇತರರು ಭಾಗವಹಿಸಿದ್ದರು.