ಕುಶಾಲನಗರದಲ್ಲಿ ರಂಜಾನ್ ಹಬ್ಬ ಆಚರಣೆ

| Published : Apr 01 2025, 12:48 AM IST

ಸಾರಾಂಶ

ರಂಜಾನ್‌ ಹಬ್ಬದ ಅಂಗವಾಗಿ ಕುಶಾಲನಗರದಲ್ಲಿ ಸಮುದಾಯ ಬಾಂಧವರು ಸಮೀಪದ ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ರಂಜಾನ್ ಹಬ್ಬದ ಅಂಗವಾಗಿ ಕುಶಾಲನಗರದಲ್ಲಿ ಸಮುದಾಯ ಬಾಂಧವರು ಸಮೀಪದ ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕುಶಾಲನಗರ ಜಾಮಿಯಾ ಮಸೀದಿ ಜನತಾ ಕಾಲೋನಿ ದಂಡಿನಪೇಟೆ ಮತ್ತು ರಸುಲ್ ಬಡಾವಣೆಗಳ ಮುಸ್ಲಿಂ ನಾಗರಿಕರು, ಮಡಿಕೇರಿ ರಸ್ತೆಯ ಗಂಧದ ಕೋಟೆ ಬಳಿ ಇರುವ ಈದ್ಗಾದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಜಾಮಿಯಾ ಮಸೀದಿ ಧರ್ಮ ಗುರುಗಳಾದ ಇಮಾಮ್ ರಶೀದ್ ಅಹಮದ್ ಅವರು ಪ್ರವಚನ ನೀಡಿದರು.

ಈ ಸಂದರ್ಭ ವಕ್ಫ್ ಬೋರ್ಡ್ ಸಂಬಂಧ ಕೇಂದ್ರ ಸರ್ಕಾರ ತಂದಿರುವ ಮಸೂದೆ ವಿರೋಧಿಸಿ ಬಹುತೇಕರು ಕಪ್ಪುಪಟ್ಟಿ ಧರಿಸಿ ವಿರೋಧ ವ್ಯಕ್ತಪಡಿಸುವುದರ ಜೊತೆಗೆ ಪ್ರಾರ್ಥನೆ ಸಲ್ಲಿಸಿದರು.