ರಾಮಯ್ಯ ಮೆಮೋರಿಯಲ್‌ ಆಸ್ಪತ್ರೆಗೆ ಜೆಸಿಐ ಮಾನ್ಯತೆ

| N/A | Published : Jul 05 2025, 01:48 AM IST / Updated: Jul 05 2025, 10:10 AM IST

ಸಾರಾಂಶ

ನಗರದ ರಾಮಯ್ಯ ಮೆಮೋರಿಯಲ್ ಆಸ್ಪತ್ರೆಗೆ ಜಾಗತಿಕ ಮಟ್ಟದ ಜಂಟಿ ಕಮಿಷನ್ ಇಂಟರ್‌ನ್ಯಾಷನಲ್(ಜೆಸಿಐ) ಮಾನ್ಯತೆ ದೊರಕಿದ್ದು, ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

  ಬೆಂಗಳೂರು :  ನಗರದ ರಾಮಯ್ಯ ಮೆಮೋರಿಯಲ್ ಆಸ್ಪತ್ರೆಗೆ ಜಾಗತಿಕ ಮಟ್ಟದ ಜಂಟಿ ಕಮಿಷನ್ ಇಂಟರ್‌ನ್ಯಾಷನಲ್(ಜೆಸಿಐ) ಮಾನ್ಯತೆ ದೊರಕಿದ್ದು, ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

ಶುಕ್ರವಾರ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಜೆಸಿಐ ಮಾನ್ಯತೆ ಘೋಷಣೆ ಕುರಿತು ವಿಶೇಷ ಸಮಾರಂಭವನ್ನು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಉದ್ಘಾಟಿಸಿದರು. ತನ್ಮೂಲಕ ಜಾಗತಿಕ ಮಟ್ಟದ ಜೆಸಿಐ ಮಾನ್ಯತೆ ಪಡೆದಿರುವ ಆಸ್ಪತ್ರೆಗಳ ಪಟ್ಟಿಗೆ ರಾಮಯ್ಯ ಮೆಮೋರಿಯಲ್‌ ಆಸ್ಪತ್ರೆ ಸೇರ್ಪಡೆಯಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಗೋಕುಲ ಎಜುಕೇಷನ್ ಫೌಂಡೇಷನ್(ಮೆಡಿಕಲ್) ಅಧ್ಯಕ್ಷ ಡಾ.ಎಂ.ಆರ್.ಜಯರಾಂ ಅವರು, ಜೆಸಿಐ ಮಾನ್ಯತೆಯು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ, ಸುರಕ್ಷಿತ ಮತ್ತು ಪರಿಣಾಮಕಾರಿ ಆರೋಗ್ಯ ಸೇವೆ ಮತ್ತು ಆರೈಕೆಯನ್ನು ಒದಗಿಸುವ ಸಂಸ್ಥೆಯ ಬದ್ಧತೆಯನ್ನು ಪ್ರಮಾಣೀಕರಿಸಿ ನೀಡುವ ‘ಗೋಲ್ಡ್ ಸೀಲ್‌’ ಮಾನ್ಯತೆ ಆಗಿದೆ. 15 ಚಾಪ್ಟರ್, 237 ಮಾನದಂಡಗಳು, 1,094 ಮಾಪನಗಳ ಮೂಲಕ ಆಸ್ಪತ್ರೆಯನ್ನು ಸಂಪೂರ್ಣ ಮೌಲ್ಯಮಾಪನ ಮಾಡಲಾಗಿದ್ದು, ಉತ್ತಮ ಫಲಿತಾಂಶದಿಂದಾಗಿ ಜೆಸಿಐ ತನ್ನ 8ನೇ ಆವೃತ್ತಿಯಲ್ಲಿ ಈ ಮಾನ್ಯತೆಯನ್ನು ನೀಡಿದೆ. ಜೊತೆಗೆ ಪಾರ್ಶ್ವವಾಯು(ಸ್ಟ್ರೋಕ್) ಹಾಗೂ ಈ ಎದೆ ನೋವು ವಿಭಾಗದಲ್ಲಿನ ಚಿಕಿತ್ಸೆ, ಆರೈಕೆಗಾಗಿ ಅಮೆರಿಕ ಸ್ಟ್ರೋಕ್ ಅಸೋಸಿಯೇಷನ್ (ಎಎಸ್ಎ) ಅಮೇರಿಕನ್ ಹಾರ್ಟ್ ಅಸೋಸಿಯೇಷನ್ (ಎಎಚ್ಎ) ಕೂಡ ಪ್ರಮಾಣೀಕರಿಸಿದೆ ಎಂದು ತಿಳಿಸಿದರು.

ಗೋಕುಲ ಎಜುಕೇಷನ್ ಫೌಂಡೇಷನ್‌ನ(ಮೆಡಿಕಲ್) ಹೆಲ್ತ್ ಕೇರ್ ಸರ್ವೀಸ್ ಮುಖ್ಯ ಕಾರ್ಯನಿರ್ವಾಹಕ ಡಾ.ಎಸ್‌.ಸಿ. ನಾಗೇಂದ್ರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯು ಕೇವಲ ಒಂದೇ ಪ್ರಯತ್ನದಲ್ಲಿ ಜೆಸಿಐ ಮಾನ್ಯತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮಾನ್ಯತೆಗಾಗಿ ನಮ್ಮ ಆಸ್ಪತ್ರೆಯ ವೈದ್ಯರ ತಂಡ ಮತ್ತು ಸಿಬ್ಬಂದಿ ವರ್ಗದ ಶ್ರಮವನ್ನು ನಾವು ಮರೆಯುವಂತಿಲ್ಲ. ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆಗಳು.

- ಡಾ.ಎಂ.ಆರ್.ಜಯರಾಂ, ಗೋಕುಲ ಎಜುಕೇಷನ್ ಫೌಂಡೇಷನ್(ಮೆಡಿಕಲ್) ಅಧ್ಯಕ್ಷ

Read more Articles on