ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಅಭಿಯಾನದ ವತಿಯಿಂದ ಎಂಆರ್‌ಪಿಎಲ್ ಹಾಗೂ ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗದಲ್ಲಿ ಅಕ್ಟೋಬರ್ ತಿಂಗಳ ಸ್ವಚ್ಛತಾ ಶ್ರಮದಾನವನ್ನು ಮಂಗಳೂರಿನ ರೈಲ್ವೆ ನಿಲ್ದಾಣ ರಸ್ತೆ ಪ್ರದೇಶದಲ್ಲಿ ಆಯೋಜಿಸಲಾಯಿತು.
ಮಂಗಳೂರು: ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಅಭಿಯಾನದ ವತಿಯಿಂದ ಎಂಆರ್‌ಪಿಎಲ್ ಹಾಗೂ ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗದಲ್ಲಿ ಅಕ್ಟೋಬರ್ ತಿಂಗಳ ಸ್ವಚ್ಛತಾ ಶ್ರಮದಾನವನ್ನು ಮಂಗಳೂರಿನ ರೈಲ್ವೆ ನಿಲ್ದಾಣ ರಸ್ತೆ ಪ್ರದೇಶದಲ್ಲಿ ಆಯೋಜಿಸಲಾಯಿತು.
ಎಂಆರ್‌ಪಿಎಲ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಎಂ.ಕೆ.ರಾವ್ ಹಾಗೂ ಸಿಎಸ್‌ಆರ್ ವ್ಯವಸ್ಥಾಪಕ ಕೇಶವ ಪಾಟಾಳಿ ಜಂಟಿಯಾಗಿ ಚಾಲನೆ ನೀಡಿದರು. ಎಂಆರ್‌ಪಿಎಲ್ ಜನರಲ್ ಮ್ಯಾನೇಜರ್ ಮಂದಾರ್ ಕಾಳೆ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪ್ರೊಫೆಸರ್ ಬಬಿತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು, ಸ್ವಯಂಸೇವಕರನ್ನು ಪ್ರೋತ್ಸಾಹಿಸಿದರು.ಮಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ವಿಶ್ವವಿದ್ಯಾಲಯ ಕಾಲೇಜು ಗ್ರಂಥಾಲಯ ಸಮೀಪದ ಪ್ರದೇಶದ ಸ್ಥಳವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಹಿರಿಯ ಸ್ವಯಂಸೇವಕರು ಕೈಗೊಂಡರು. ಈ ರಸ್ತೆಯಲ್ಲಿದ್ದ ಅನಗತ್ಯ ಬ್ಯಾನರ್‌ಗಳು, ತ್ಯಾಜ್ಯ, ಒಣ ಎಲೆಗಳು ಮತ್ತು ಇತರ ಅವಶೇಷಗಳನ್ನು ತೆರವುಗೊಳಿಸಲಾಯಿತು.
ವಿಠಲದಾಸ್ ಪ್ರಭು, ಸತ್ಯನಾರಾಯಣ ಕೆ.ವಿ., ಅನಿರುದ್ಧ ನಾಯಕ್, ಕಮಲಾಕ್ಷ ಪೈ, ಆರ್.ಕೆ.ಭಟ್, ಪ್ರಕಾಶ್, ಅಶೋಕ್, ಉದಯ್ ಕೆ.ಪಿ., ತಾರಾನಾಥ ಆಳ್ವ, ಮೆಹಬೂಬ್, ಗಂಗಾಧರ ಶಾಸ್ತ್ರಿ, ನಾಗೇಶ್ ಸೇರಿದಂತೆ ಹಲವು ಹಿರಿಯ ಸ್ವಯಂಸೇವಕರು ಈ ಕಾರ್ಯದಲ್ಲಿ ಕೈಜೋಡಿಸಿದರು.ನಿಟ್ಟೆ ಫಿಜಿಯೋಥೆರಪಿ ಸಂಸ್ಥೆಯ ಅಧ್ಯಾಪಕರಾದ ರುಚಿತಾ ನರ್ಸಿಯಾ ಮತ್ತು ಅರುಣ್ ವರ್ಗೀಸ್ ನೇತೃತ್ವದಲ್ಲಿ, ವಿದ್ಯಾರ್ಥಿ ಸಂಯೋಜಕರಾದ ಅಶ್ವಿನಿ ಮತ್ತು ಎಡ್ವಿನ್ ವಿಜಯ್ ಸಹಕಾರದೊಂದಿಗೆ ವಿದ್ಯಾರ್ಥಿಗಳ ಮತ್ತೊಂದು ತಂಡ ರೈಲ್ವೆ ನಿಲ್ದಾಣ ರಸ್ತೆಯ ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ರಸ್ತೆಯ ಬದಿಯ ಗೋಡೆಗಳ ಮೇಲಿದ್ದ ಪೋಸ್ಟರ್‌ಗಳು ಮತ್ತು ಅನಗತ್ಯ ಅಂಟುಹಾಳೆಗಳನ್ನು ತೆಗೆದುಹಾಕಿದರು. ಗೋಡೆಗಳ ಮೇಲಿದ್ದ ಕೊಳಕು ಮತ್ತು ಅಂಟಿನ ಗುರುತುಗಳನ್ನು ಬ್ರಷ್‌ಗಳಿಂದ ಉಜ್ಜಿ, ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರು.ಸ್ವಚ್ಛತೆಯಲ್ಲಿ ಯುವಶಕ್ತಿ: ಈ ಶ್ರಮದಾನದ ಪ್ರಮುಖ ಆಕರ್ಷಣೆಯಾಗಿದ್ದುದು ಯುವಜನರ ಉತ್ಸಾಹಭರಿತ ಪಾಲ್ಗೊಳ್ಳುವಿಕೆ. ಕೆನರಾ ಪದವಿ ಕಾಲೇಜು ಹಾಗೂ ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಯ ಜೆನ್‌ಝೀ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.