ಬೈಚಾಪುರ ಗ್ರಾಪಂಗೆ ರಾಮಲಕ್ಷಮ್ಮ ಅಧ್ಯಕ್ಷೆ

| Published : Jun 13 2025, 02:02 AM IST / Updated: Jun 13 2025, 02:03 AM IST

ಸಾರಾಂಶ

ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಗ್ರಾಪಂ ಅಧ್ಯಕ್ಷೆಯಾಗಿ ರಾಮಲಕ್ಷಮ್ಮ ಗುರುವಾರ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಇಒ ಅಪೂರ್ವ ಅನಂತರಾಮು ಅವರು ಘೋಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಗ್ರಾಪಂ ಅಧ್ಯಕ್ಷೆಯಾಗಿ ರಾಮಲಕ್ಷಮ್ಮ ಗುರುವಾರ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಇಒ ಅಪೂರ್ವ ಅನಂತರಾಮು ಅವರು ಘೋಷಣೆ ಮಾಡಿದರು. ಗ್ರಾಪಂಯಲ್ಲಿ ಒಟ್ಟು ೧೯ಮಂದಿ ಸದಸ್ಯರಲ್ಲಿ ಹೊಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಸವನಹಳ್ಳಿ ಗ್ರಾಮದ ರಾಮಲಕ್ಷಮ್ಮ ವೆಂಕಟಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಎಲ್ಲರ ಒಮ್ಮತದಂತೆ ರಾಮಲಕ್ಷ್ಮಮ್ಮ ವೆಂಕಟಪ್ಪ ಅವರು ಅವಿರೋಧ ಆಯ್ಕೆ ಮಾಡಲಾಗಿದೆ.ನೂತನ ಗ್ರಾ.ಪಂ ಅಧ್ಯಕ್ಷೆ ರಾಮಲಕ್ಷಮ್ಮವೆಂಕಟಪ್ಪ ಮಾತನಾಡಿ, ಗೃಹ ಸಚಿವರಾದ ಡಾ.ಜಿ ಪರಮೇಶ್ವರ್‌ರವರ ಆಶಯ ಹಾಗೂ ಆಶೀರ್ವಾದದಿಂದ ಮತ್ತು ಗ್ರಾಪಂ ಸದಸ್ಯರ ಬೆಂಬಲದಿಂದ ಅಧ್ಯಕ್ಷ ಸ್ಥಾನಕ್ಕೆ ನನ್ನ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳನ್ನು ಗ್ರಾ.ಪಂ ಎಲ್ಲಾ ಗ್ರಾಮಗಳಿಗೆ ಅನುಷ್ಠಾನಗೊಳಿಸಿ ಅಭಿವೃದ್ಧಿ ಪಡಿಸುವ ಉದ್ಧೇಶ ಹೊಂದಿದ್ದೇನೆ. ಆಯ್ಕೆ ಮಾಡಿದ ಸದಸ್ಯರಿಗೆ ಹಾಗೂ ಮುಖಂಡರಿಗೆ ಧನ್ಯವಾದ ಎಂದು ತಿಳಿಸಿದರು. ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ವೆಂಕಟೇಶ್‌ಬಾಬು, ಬೈಚಾಪುರ ಗ್ರಾ.ಪಂ ಪಿಡಿಓ ಉಮೇಶ್ ಗ್ರಾಪಂ ಸದಸ್ಯರಾದ ಸಮೀಉಲ್ಲಾ, ಲಕ್ಷ್ಮೀಪತಿ, ತಿಪ್ಪೇಶ್, ಗೋವಿಂದರಾಜು, ಮಂಜುನಾಥ್ ಅರ್‌ಸಿ, ಕಾಂಚನ, ವೆಂಕಟಾಚಲಯ್ಯ, ಮೀನಾಕ್ಷಿ, ಅರಸಮ್ಮ, ಶೋಭಾ, ಕರಿಯಪ್ಪ, ಕೆಂಪಲಕ್ಷಮ್ಮ, ಬಸಮ್ಮ, ನಾಗರಾಜು, ಗ್ರಾ.ಪಂ ಪಿಡಿಓ ಉಮೇಶ್, ತಾ.ಪಂ ಮಾಜಿ ಉಪಾಧ್ಯಕ್ಷ ವೆಂಕಟಪ್ಪ, ಮಾಜಿ ಗ್ರಾ.ಪಂ ಅಧ್ಯಕ್ಷ ನಾಗರಾಜು, ವೆಂಕಟೇಶ್, ತಾ.ಪಂ ಮಾಜಿ ಸದಸ್ಯ ರಾಜಣ್ಣ, ಮುಖಂಡರಾದ ನವೀನ್, ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.