ಮುದಗಲ್‌ ಐತಿಹಾಸಿಕ ರಾಮಲಿಂಗೇಶ್ವರ ಜಾತ್ರೆ ಸಂಪನ್ನ

| Published : Mar 28 2024, 12:50 AM IST

ಸಾರಾಂಶ

ಪ್ರಮುಖ ಬೀದಿಗಳಲ್ಲಿ ಕಳಶ, 350 ಪೂರ್ಣ ಕುಂಭಗಳ ಅದ್ಧೂರಿ ಮೆರವಣಿಗೆ ನಡೆಯಿತು. ಬೆಳಗ್ಗೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಮೂರ್ತಿಗೆ ರುದ್ರಾಭಿಷೇಕ, ಎಲೆಚೆಟ್ಟು ಸೇವೆ ಸೇರಿದಂತೆ ಅನೇಕ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಮುದಗಲ್

ಸ್ಥಳೀಯ ಕಿಲ್ಲಾದ 11ನೇ ಶತಮಾನದ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವವು ಅಧ್ಧೂರಿಯಾಗಿ ಬುಧವಾರ ಜರುಗಿತು. ದಾಸೋಹ ಜಾತ್ರೆ ನಿಮಿತ್ತ ಕಳೆದ 9 ದಿನಗಳಿಂದಲೂ ದೇವಸ್ಥಾನದ ಪ್ರಾಂಗಣದಲ್ಲಿ ತಿಮ್ಮಾಪೂರ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಸಾಲಿಮಠ ಅವರ ಸಾನ್ನಿಧ್ಯದಲ್ಲಿ ಸಿದ್ದಾರೂಢರ ಚರಿತಾಮೃತ ಪುರಾಣ ಪಠಣ ಮಾಡಲಾಯಿತು. ಬುಧವಾರ ಬೆಳಗ್ಗೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಮೂರ್ತಿಗೆ ರುದ್ರಾಭಿಷೇಕ, ಎಲೆಚೆಟ್ಟು ಸೇವೆ ಸೇರಿದಂತೆ ಅನೇಕ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಯಿತು.

ಮೆರವಣಿಗೆ: ಸ್ಥಳೀಯ ಕುಂಬಾರಪೇಟೆಯ ಬಸವೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ 350 ಪೂರ್ಣ ಕುಂಭ ಹಾಗೂ ಕಲಾ ತಂಡಗಳೊಂದಿಗೆ ಕಳಶಗಳನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಪುರವಂತಿಕೆ ಸೇವೆ ಎಲ್ಲರ ಗಮನ ಸೆಳೆಯಿತು.

ದಾಸೋಹ ಜಾತ್ರೆ: ಕಳೆದ 24 ವರ್ಷಗಳಿಂದಲೂ ನಿರಂತರವಾಗಿ ದೇವಸ್ಥಾನದ ವತಿಯಿಂದ ಶ್ರೀಶೈಲಕ್ಕೆ ಪಾದಯಾತ್ರಿಕರಿಗೆ ಅನ್ನ ದಾಸೋಹ, ಉಚಿತ ಆರೋಗ್ಯ ಸೇವೆ ಸೇರಿದಂತೆ ಮೂಲ ಸೌಕರ್ಯಗಳನ್ನು ನೀಡುತ್ತಾ ಬಂದಿದ್ದು ಈ ವರ್ಷವೂ ಕೂಡ ಶ್ರೀಶೈಲಕ್ಕೆ ತೆರಳುವ ಅಸಂಖ್ಯಾತ ಭಕ್ತರಿಗೆ ಅನ್ನದಾಸೋಹ ಜರುಗಿತು.

ಮೆರವಣಿಗೆಯಲ್ಲಿ ರಾಮಲಿಂಗೇಶ್ವರ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಸುರೇಂದ್ರಗೌಡ ಪಾಟೀಲ್ ಆದಾಪೂರ, ಲಿಂಗಪ್ಪ ಹಣಗಿ, ಶಿವಾನಂದ ಸುಂಕದ, ಚಂದ್ರಶೇಖರ ಗಂಗಾವತಿ, ಮಹೇಶ ವಸ್ತçದ, ಶರಣಪ್ಪ ಸಜ್ಜನ್, ವಿರುಪಾಕ್ಷಪ್ಪ ಸಜ್ಜನ್, ಮಲ್ಲಪ್ಪ ಮಾಟೂರು, ಈರಪ್ಪ ಗುಡೂರು, ರಾಚಪ್ಪ ಹಳೇಪೆಟೆ, ಮಹಾಂತೇಶ ಗದ್ದಿ, ಬಸವರಾಜ ಬಳಿಗಾರ್ ಸೇರಿದಂತೆ ಪಟ್ಟಣದ ಗುರು ಹಿರಿಯರು ಹಾಗೂ ಮಹಿಳೆಯರಿದ್ದರು.