ಸಾರಾಂಶ
ಆಹಾರ ಅರಸಿ ನಾಡಿಗೆ ಬಂದ ಚಿರತೆ ಮತ್ತು ಅದರ ಮರಿ ಇಲವಾಲ ಸಮೀಪದ ರಾಮನಹಳ್ಳಿಯ ನಾಲೆಗೆ ಅಳವಡಿಸಿದ್ದ ಸುಮಾರು 300 ಮೀ. ಪೈಪ್ನಲ್ಲಿ ಸಿಲುಕಿದ್ದವು.
ಕನ್ನಡಪ್ರಭ ವಾರ್ತೆ ಮೈಸೂರು
ನಾಲೆಯ ಪೈಪ್ನಲ್ಲಿ ಸಿಲಿ ಸಿಲುಕಿದ್ದ ಚಿರತೆ ಮತ್ತು ಅದರ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಆಹಾರ ಅರಸಿ ನಾಡಿಗೆ ಬಂದ ಚಿರತೆ ಮತ್ತು ಅದರ ಮರಿ ಇಲವಾಲ ಸಮೀಪದ ರಾಮನಹಳ್ಳಿಯ ನಾಲೆಗೆ ಅಳವಡಿಸಿದ್ದ ಸುಮಾರು 300 ಮೀ. ಪೈಪ್ನಲ್ಲಿ ಸಿಲುಕಿದ್ದವು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿ ಚಿರತೆ ಸೆರೆ ಕಾರ್ಯಾಚರಣೆ ನಡೆಸಿದರು. ಬೋನಿನ ನೆರವಿನಿಂದ ಚಿರತೆಯನ್ನು ಸೆರೆ ಹಿಡಿದರು. ಬಳಿಕ ಅವುಗಳ ಆರೋಗ್ಯ ತಪಾಸಣೆ ನಡೆಸಿದ ನಂತರ ಕಾಡಿಗೆ ಬಿಟ್ಟರು.ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಜನ, ಜಾನುವಾರುಗಳಿಗೆ ತೊಂದರೆ ಉಂಟಾಗುತ್ತಿತ್ತು. ಕಳೆದ ಎರಡು ದಿನಗಳ ಹಿಂದೆ ಚಿರತೆಯೊಂದು ಇದೇ ಪ್ರದೇಶದಲ್ಲಿ ಎರಡು ಮೇಕೆಗಳ ಮೇಲೆ ದಾಳಿ ನಡೆಸಿತ್ತು. ಎಸಿಎಫ್ ಲಕ್ಷ್ಮೀಕಾಂತ್, ಪಶುವೈದ್ಯ ಡಾ. ಮದನ್ ಕಾರ್ಯಾಚಾರಣೆಯಲ್ಲಿ ಪಾಲ್ಗೊಂಡಿದ್ದರು.