ಸದ್ಗುರು ರಾಮಾನಂದ ಶ್ರೀಗಳ 44ನೇ ವರ್ಷದ ಆರಾಧನಾ ಮಹೋತ್ಸವ

| Published : Sep 04 2024, 01:50 AM IST

ಸಾರಾಂಶ

ರಿಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀ ಸದ್ಗುರು ರಾಮಾನಂದ ಸ್ವಾಮೀಜಿಯವರ ಗದ್ದಿಗೆಯಲ್ಲಿ ಆರಾಧನೆ

ಕನ್ನಡಪ್ರಭ ವಾರ್ತೆ ಬನ್ನೂರುಪಟ್ಟಣದಲ್ಲಿ ಶ್ರೀ ಸದ್ಗುರು ರಾಮಾನಂದ ಸ್ವಾಮೀಜಿಯವರ 44ನೇ ವರ್ಷದ ಆರಾಧನ ಮಹೋತ್ಸವದ ಅಂಗವಾಗಿ ಅಭಿಷೇಕ ಮತ್ತು ವಿಶೇಷ ಪೂಜಾ ಅಲಂಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಪಟ್ಟಣದ ಬಸ್ ನಿಲ್ದಾಣದ ಸಮೀಪವಿರುವ ಶ್ರೀ ಕೈಲಾಸೇಶ್ವರ ಮತ್ತು ಸದ್ಗುರು ಕರಿಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀ ಸದ್ಗುರು ರಾಮಾನಂದ ಸ್ವಾಮೀಜಿಯವರ ಗದ್ದಿಗೆಯಲ್ಲಿ ಆರಾಧನೆಯ ಪ್ರಯುಕ್ತ ಪ್ರಾಥಃ ಕಾಲದಿಂದ ಅಭಿಷೇಕ ಮತ್ತು ವಿಶೇಷ ಪೂಜಾ ಅಲಂಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಮದ್ಯಾಹ್ನ ಭಜನಾ ಮಂಡಳಿಯವರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಮಹಾಮಂಗಳಾರತಿ ನಡೆದು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಮುಖ್ಯಸ್ಥರಾದ ನಂಜುಂಡಪ್ಪ, ರವಿನಾಯ್ದು, ನಂಜುಂಡಪ್ಪ, ರಾಜೇಶ್, ಕಾಲಚರಣ್, ಲಕ್ಷಣ್, ನಾಗೇಶ್, ರಾಧಿಕಾ, ವಾಸು, ಸಿದ್ದೇಗೌಡ, ನಟರಾಜು ಇದ್ದರು.