ಸಾರಾಂಶ
ಹೊನ್ನಾಳಿ ತಾಲೂಕಿನ ಹಳೇ ದೇವರ ಹೊನ್ನಾಳಿಯಲ್ಲಿ ಶ್ರೀ ರಾಮಾನುಜಾಚಾರ್ಯರ ಮಠದ ಸಮಿತಿ ಹಾಗೂ ಜಿಲ್ಲಾ ಶ್ರೀ ವೈಷ್ಣವ ಮಹಾ ಪರಿಷತ್ತು ಆಶ್ರಯದಲ್ಲಿ ಭಾನುವಾರ ಶ್ರೀ ಭಗವದ್ ರಾಮಾನುಜಾಚಾರ್ಯರ 1007ನೇ ಜಯಂತ್ಯುತ್ಸವ, ಶ್ರೀ ಮಠದಿಂದ 8ನೇ ವರ್ಷದ ಆಚರಣೆ ಹಾಗೂ ಆಚಾರ್ಯರ ರಥೋತ್ಸವ ನಡೆಯಿತು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಹಳೇ ದೇವರ ಹೊನ್ನಾಳಿಯಲ್ಲಿ ಶ್ರೀ ರಾಮಾನುಜಾಚಾರ್ಯರ ಮಠದ ಸಮಿತಿ ಹಾಗೂ ಜಿಲ್ಲಾ ಶ್ರೀ ವೈಷ್ಣವ ಮಹಾ ಪರಿಷತ್ತು ಆಶ್ರಯದಲ್ಲಿ ಭಾನುವಾರ ಶ್ರೀ ಭಗವದ್ ರಾಮಾನುಜಾಚಾರ್ಯರ 1007ನೇ ಜಯಂತ್ಯುತ್ಸವ, ಶ್ರೀ ಮಠದಿಂದ 8ನೇ ವರ್ಷದ ಆಚರಣೆ ಹಾಗೂ ಆಚಾರ್ಯರ ರಥೋತ್ಸವ ನಡೆಯಿತು.ಬೆಳಗ್ಗೆ ಸುಪ್ರಭಾತ ಸೇವೆ, ಪುಣ್ಯಾಹ ಧ್ವಜಾರೋಹಣ, ಪಂಚಾಮೃತ ಅಭಿಷೇಕ, ಅಲಂಕಾರ, ಅಷ್ಟೋತ್ತರ ದೂಪ ದೀಪ, ನೈವೇದ್ಯ, ಅಷ್ಟಾವದಾನ ಸೇವೆ, ಶಾತ್ತುಮೊರೈ ಮಹಾಮಂಗಳಾರತಿ ನಡೆಯಿತು. ಅನಂತರ ಆಚಾರ್ಯರ ಉತ್ಸವಗಳು ನಡೆದವು. ಮಧ್ಯಾಹ್ನ 12 ಗಂಟೆಗೆ ರಥೋತ್ಸವ ಹಾಗೂ ಗುರುಗಳಿಗೆ ತೂಗುಯ್ಯಾಲೆ ಸೇವೆ ನಡೆಯಿತು. ಭಕ್ತಾಧಿಗಳಿಗೆ ಹಾಗೂ ಗ್ರಾಮಸ್ಥರಿಗೆ ಪ್ರಸಾದ ಸೇವೆ ನಡೆಯಿತು. ಮಠದ ಅಧ್ಯಕ್ಷ ಎಸ್.ಕೆ. ಗೋಪಾಲಯ್ಯ, ಪದಾಧಿಕಾರಿಗಳು, ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.
- - - -12ಎಚ್.ಎಲ್.ಐ3: