ಜಗತ್ತು ಕಂಡ ಅತ್ಯದ್ಭುತ ಗಣಿತಶಾಸ್ತ್ರಜ್ಞ ರಾಮಾನುಜನ್

| Published : Dec 29 2024, 01:17 AM IST

ಸಾರಾಂಶ

೨೦ನೇ ಶತಮಾನದಲ್ಲಿ ಆರಂಭದಲ್ಲಿ ಗಣಿತಶಾಸ್ತ್ರಜ್ಞ ರಾಮಾನುಜನ್ ಅವರು ಗಣಿತ ಕ್ಷೇತ್ರಕ್ಕೆ ಗಮನಾರ್ಹ, ಅತ್ಯದ್ಭುತ ಕೊಡುಗೆ ನೀಡಿದ್ದಾರೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.

ಹಾವೇರಿ: ೨೦ನೇ ಶತಮಾನದಲ್ಲಿ ಆರಂಭದಲ್ಲಿ ಗಣಿತಶಾಸ್ತ್ರಜ್ಞ ರಾಮಾನುಜನ್ ಅವರು ಗಣಿತ ಕ್ಷೇತ್ರಕ್ಕೆ ಗಮನಾರ್ಹ, ಅತ್ಯದ್ಭುತ ಕೊಡುಗೆ ನೀಡಿದ್ದಾರೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು. ಇಲ್ಲಿನ ವಿದ್ಯಾಜ್ಯೋತಿ ಶಿಕ್ಷಣ ಸಂಸ್ಥೆಯ ನವ ಚೈತನ್ಯ ವಿದ್ಯಾಲಯದಲ್ಲಿ ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಮಕ್ಕಳ ಗಣಿತ ಮಾದರಿ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ರಾಮಾನುಜನ್ ತಮ್ಮ ೧೩ನೇ ವಯಸ್ಸಿನಲ್ಲಿಯೇ ಕಾಲೇಜು ಗ್ರಂಥಾಲಯದಿಂದ ಲೋನಿಯಾಟ್ರಿಗ್ನೋಮೆಟ್ರಿಯಾ ಕಠಿಣ ಪುಸ್ತಕ ತಂದು ಓದಿದ್ದಲ್ಲದೆ, ಅದರಲ್ಲಿ ಪಾಂಡಿತ್ಯವನ್ನು ಪಡೆದು ಮತ್ತು ಸ್ವತಃ ಸಂಶೋಧನೆಯನ್ನು ಪ್ರಾರಂಭಿಸಿದರು. ಸಂಖ್ಯಾಶಾಸ್ತ್ರಗಳು ಮತ್ತು ಬೀಜ ಗಣಿತದ ಅಸಮಾನತೆಗಳ ಕುರಿತು ಪುಸ್ತಕ ರಚಿಸಿದರು ಎಂದರು.ಗಣಿತ ಎಂದರೆ ಬಹುತೇಕ ಮಕ್ಕಳಿಗೆ ಕಬ್ಬಿಣದ ಕಡಲೆ ಎಂಬಂತಾಗಿದೆ, ಶಿಕ್ಷಕರು ಮಕ್ಕಳಲ್ಲಿ ಗಣಿತವನ್ನು ಪ್ರೀತಿಸುವಂತೆ ಮಾಡಬೇಕು. ಕೇಳಿ ಕಲಿಯುವುದಕ್ಕಿಂತ ಮಕ್ಕಳು ನೋಡಿ ಕಲಿಯಬೇಕು. ಮಕ್ಕಳು ಹೆಚ್ಚು ಮಾತನಾಡಬೇಕು, ಶಿಕ್ಷಕರು ಕಡಿಮೆ ಮಾತನಾಡಬೇಕು ಎಂದು ತಿಳಿಸಿದರು.ಪ್ರಾಚಾರ್ಯೆ ಶಿವಜ್ಯೋತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಪ್ರೊಜೆಕ್ಟ್ ಮಾಡುವಲ್ಲಿ ಪಾಲಕರು ಕೈಜೋಡಿಸಿದ್ದಾರೆ. ಮಕ್ಕಳ ವಿವರಣೆಯನ್ನು ಕೇಳಿ ಪ್ರೋತ್ಸಾಹಿಸಬೇಕು, ನುರಿತ ಶಿಕ್ಷಕರ ಮಾರ್ಗದರ್ಶನ ನಮ್ಮ ಸಂಸ್ಥೆಯಲ್ಲಿದೆ ಎಂದರು. ಪಾಲಕರಾದ ಇಸ್ಮಾಯಿಲ್ ಗುತ್ತಲ, ಗಿರೀಶ್ ಕೊಡೆತ್ಕರ, ಅನುಸೂಯಾ ಸಣ್ಣಪ್ಪನವರ, ಸುರೇಶ ಬಣಕಾರ, ಮಹದೇವ ಬಾರ್ಕಿ, ನಂದಿನಿ ಭರತನೂರಮಠ ಮತ್ತಿತರರು ಮಕ್ಕಳ ಚಟುವಟಿಕೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಾದ ವನಿತಾ, ಪೂರ್ಣಿಮಾ, ಮಿಥುನ್ ಹಾಗೂ ಶ್ರೇಯಾ ಮತ್ತಿತರರು ಮಾತನಾಡಿದರು. ೮೦ಕ್ಕೂ ಅಧಿಕ ಮಕ್ಕಳು ವೈವಿಧ್ಯಮಯ ಪ್ರೊಜೆಕ್ಟಗಳನ್ನು ರಚಿಸಿ ಗಮನ ಸೆಳೆದರು. ಸಂಸ್ಥೆಯ ಅಧ್ಯಕ್ಷ ಶಿವಕುಮಾರ್, ಹಿಮಾಬಿಂದು ಪಿ.ಎನ್., ದಾನಮ್ಮ ಮದಿಹಳ್ಳಿ, ಛಾಯಾ ಮುಳುಗುಂದ, ಹಾಗೂ ರೂಪಾ ಕಡ್ಡಿಪುಡಿ ಇದ್ದರು. ಮುಖ್ಯ ಶಿಕ್ಷಕ ಸಂತೋಷ್ ಎಸ್.ಬಿ. ಸ್ವಾಗತಿಸಿದರು. ಆಡಳಿತಾಧಿಕಾರಿ ಮಾಲತೇಶ ಹಾವೇರಿ ವಂದಿಸಿದರು.