ಮಾ.1ರಂದು ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ವೀರಶೈವ ಮಹಾಮತ ಸಂಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ, ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ರಂಭಾಪುರಿ ಪೀಠದಲ್ಲಿ ಫೆ.27ರಿಂದ ಮಾ.3ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ ತಿಳಿಸಿದ್ದಾರೆ. ಪ್ರತಿ ದಿನದ ಕಾರ್ಯಕ್ರಮ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯಲಿದ್ದು, ಫೆ.27ರಂದು ಧ್ವಜಾರೋಹಣ ಹರಿದ್ರಾ ಲೇಪನದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ. 28ರಂದು ಸಂಜೆ 6.30ಕ್ಕೆ ಧರ್ಮ ಮತ್ತು ಶಿಕ್ಷಣ ಕುರಿತ ಗೋಷ್ಠಿ , ಅರಣ್ಯ ಸಚಿವ ಈಶ್ವರ ಖಂಡ್ರೆಯಿಂದ ಸಮಾರಂಭ ಉದ್ಘಾಟನೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಎಚ್.ಎಂ. ಲೋಕೇಶ್, ಯು.ಎಂ.ಬಸವರಾಜ, ಎಚ್.ಬಿ.ರಾಜಗೋಪಾಲ, ಸುಧೀರ್, ಬಿ.ಜಗದೀಶ್ಚಂದ್ರ, ಕೋಕಿಲ ಲಿಂಗಪ್ಪಗೌಡ, ಮಹೇಶ ಆಚಾರ್ಯ, ಎಲ್.ರವಿ ಭಾಗವಹಿಸಲಿದ್ದಾರೆ. ಮಾ.1ರಂದು ಬೆಳಿಗ್ಗೆ 10.30ಕ್ಕೆ ರಂಭಾಪುರಿ ಪೀಠದಲ್ಲಿ 51 ಅಡಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿ ಪ್ರತಿಷ್ಠಾಪನೆ ಶಿಲಾನ್ಯಾಸಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೂಮಿ ಪೂಜೆ ಮಾಡುವರು. ಬೆಳಿಗ್ಗೆ 11ಕ್ಕೆ ಶಿವಾದ್ವೈತ ಸಮಾವೇಶವನ್ನು ಡಿ.ಕೆ.ಶಿವಕುಮಾರ್ ಉದ್ಘಾಟಿಸುವರು. ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವ ಪ್ರಲ್ಹಾದ ಜೋಷಿ ರಂಭಾಪುರಿ ಬೆಳಗು ಮಾಸಿಕ ಬಿಡುಗಡೆಗೊಳಿಸುವರು.ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಸಂಸದರಾಸ ಬಸವರಾಜ ಬೊಮ್ಮಾಯಿ, ಕೋಟಾ ಶ್ರೀನಿವಾಸ್ ಪೂಜಾರಿ, ಡಾ.ಪ್ರಭಾ ಮಲ್ಲಿಕಾರ್ಜುನ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಶಾಸಕ ಜಿ.ಎಚ್. ಶ್ರೀನಿವಾಸ್, ಮಾಜಿ ಸಚಿವ ಡಿ.ಎನ್. ಜೀವರಾಜ್ ಮತ್ತಿತರರು ಭಾಗವಹಿಸಲಿದ್ದಾರೆ. ಪ್ರತಿಷ್ಠಿತ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ಸಾಹಿತ್ಯ ಸಂಶೋಧಕ ಶಿಕ್ಯಾಗೋ ನಿವಾಸಿ ರವಿ ಹಂಜ ಅವರಿಗೆ ಪ್ರದಾನ ಮಾಡಲಾಗುವುದು. ಅ.ಭಾ.ವೀ.ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಸಿಂದಗಿಯ ಡಾ.ಪ್ರಭು ಸಾರಂಗದೇವ ಶ್ರೀ, ಶಿವಗಂಗಾ ಕ್ಷೇತ್ರದ ಡಾ. ಮಲಯ ಶಾಂತಮುನಿ ಶ್ರೀ , ಸೂಡಿ ಜುಕ್ತಿ ಹಿರೇಮಠದ ಡಾ.ಕೊಟ್ಟೂರು ಬಸವೇಶ್ವರ ಶ್ರೀ ಉಪಸ್ಥಿತರಿರುವರು. ಮಾ.2ರಂದು ಸಂಜೆ ಧರ್ಮ ಮತ್ತು ಮಹಿಳೆ ಕುರಿತ ವಿಚಾರ ಗೋಷ್ಠಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ಬಾಕ್ಸ್)
ರವಿ ಹಂಜಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿನಾಡಿನ ಜನತೆಗೆ ಚಿರಪರಿಚಿತರಾದ ದಾವಣಗೆರೆಯ ರವಿ ಹಂಜ ಅವರಿಗೆ ಈ ಬಾರಿಯ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಘೋಷಣೆಯಾಗಿದ್ದು, ಇವರು ಪ್ರಾಜ್ಞ ಮನಸ್ಸಿನ ಚಿಂತಕರು ಮತ್ತು ವಿವೇಚನಾಶೀಲ ಬರಹಗಾರರಾಗಿದ್ದಾರೆ. ಸದ್ಯ ಅಮೇರಿಕಾದ ಶಿಕಾಗೋ ನಿವಾಸಿ ರವಿ ಹಂಜರವರು ವಿವಿಧ ವಿದ್ಯಾರ್ಹತೆಗಳೊಂದಿಗೆ, ವಿಶ್ವದ ಅನೇಕ ಪ್ರತಿಷ್ಠಿತ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಅತ್ಯತ್ತುಮ ಪ್ರಶಸ್ತಿ-ಪ್ರಶಂಸೆ ಪಡೆದಿರುವ ಇವರು, ವಿದೇಶದಲ್ಲಿ ನೆಲೆಸಿ ದ್ದರೂ ಸಹ ಮಾತೃಭೂಮಿ ಮೇಲೆ ಅಪಾರ ಭಕ್ತಿ, ಗೌರವ, ದೇಶಾಭಿಮಾನ, ಭಾಷಾಭಿಮಾನ ಮೆರೆದವರು. ಕನ್ನಡದ ಕಂಪನ್ನು ಹೊರದೇಶದಲ್ಲೂ ಸೂಸುವಲ್ಲಿ ಯಶಸ್ವಿಯಾದವರು. ಇವರು. ಸಂಶೋಧನಾತ್ಮಕ ಕೃತಿಗಳನ್ನು, ಆತ್ಮಕಥನ, ಅನುವಾದಿತ ಕೃತಿಗಳನ್ನು ರಚಿಸಿರುವ ಇವರ ಹ್ಯೂಯನ್‌ತ್ಸಾಂಗನ ಮಹಾಪಯಣ ಎಂಬ ಕೃತಿಗೆ 2018ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ ಸಂದಿದೆ. ಪ್ರಸ್ತುತ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಮಾ.1ರಂದು ರಂಭಾಪುರಿ ಪೀಠದಲ್ಲಿ ನಡೆಯಲಿರುವ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ. ಪ್ರಶಸ್ತಿ ₹1 ಲಕ್ಷ ನಗದು, ಕಂಚಿನ ಫಲಕ ಹಾಗೂ ಸ್ಮರಣಿಕೆ ಒಳಗೊಂಡಿದೆ. ೨೪ಬಿಹೆಚ್‌ಆರ್ ೨: ರಂಭಾಪುರಿ ಪೀಠ.೨೪ಬಿಹೆಚ್‌ಆರ್ ೩: ರವಿ ಹಂಜ