ಬಾಳೆಹೊನ್ನೂರುಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ 35ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ ಹಾಗೂ ಧರ್ಮ ಸಮಾರಂಭ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮೇಹಕರ ಹಿರೇಮಠದಲ್ಲಿ ಜ.21 ರಂದು ನಡೆಯಲಿದೆ ಎಂದು ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ ತಿಳಿಸಿದ್ದಾರೆ.

ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟನೆ: ಸಿ.ಎಚ್. ಬಾಳನಗೌಡ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ 35ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ ಹಾಗೂ ಧರ್ಮ ಸಮಾರಂಭ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮೇಹಕರ ಹಿರೇಮಠದಲ್ಲಿ ಜ.21 ರಂದು ನಡೆಯಲಿದೆ ಎಂದು ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ ತಿಳಿಸಿದ್ದಾರೆ.

ಜ.21ರಂದು ನಡೆಯುವ ಧರ್ಮ ಸಮಾರಂಭವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದು, ಬೀದರ್ ಸಂಸದ ಸಾಗರ ಖಂಡ್ರೆ, ಮಾಜಿ ಸಚಿವ ರಾಜಶೇಖರ ಪಾಟೀಲ, ಶಾಸಕರಾದ ಶರಣು ಸಲಗರ, ಡಾ.ಶೈಲೇಂದ್ರ ಬೆಲ್ದಾಳೆ ಭಾಗವಹಿಸುವರು.

ಮೇಹಕರ ಹಿರೇಮಠದ ರಾಜೇಶ್ವರ ಸ್ವಾಮಿ ನೇತೃತ್ವ ವಹಿಸಲಿದ್ದು, ಬಿಚಗುಂದ ಸೋಮಲಿಂಗ ಶ್ರೀ, ಹುಡುಗಿ ವಿರೂಪಾಕ್ಷಲಿಂಗ ಶ್ರೀ , ಶ್ರೀನಿವಾಸ ಸರಡಗಿಯ ಡಾ.ರೇವಣಸಿದ್ಧೇಶ್ವರ ಶ್ರೀ, ಸ್ಟೇಷನ್ ಬಬಲಾದ ಶಿವಮೂರ್ತಿ ಶ್ರೀ, ಹಲಬುರ್ಗಾದ ಹಾವಗಿ ಲಿಂಗೇಶ್ವರ ಶ್ರೀ, ಮಾದನ ಹಿಪ್ಪರಗಿ ಶಾಂತವೀರ ಶ್ರೀ, ಸಿದ್ಧರಬೆಟ್ಟದ ವೀರಭದ್ರ ಶ್ರೀ, ಆಲಮೇಲ ಚಂದ್ರಶೇಖರ ಶ್ರೀ, ಮಳಲಿಮಠದ ಡಾ.ನಾಗಭೂಷಣ ಶ್ರೀ, ಕನ್ನೂರು-ಸಿಂಧನೂರು ಸೋಮನಾಥ ಶ್ರೀ, ತ್ರಿಪುರಾಂತಕ ಗವಿಮಠದ ಡಾ.ಅಭಿನವ ಘನಲಿಂಗ ರುದ್ರಮುನಿ ಶ್ರೀ ಸಮ್ಮುಖ ವಹಿಸುವರು. ಸಮಾರಂಭದಲ್ಲಿ ನಾಡಿನ ಮಠಾಧೀಶರು ಪಾಲ್ಗೊಳ್ಳಲಿದ್ದು, ಪ್ರಮುಖರಾದ ಬಿ.ಎಸ್.ಕುದುರೆ, ಗಣಪತರಾವ್ ಖೂಬಾ, ಶಿವಶರಣಪ್ಪ ವಾಲಿ, ಅಲ್ಲಾಡಿ ವೀರೇಶಂ, ಶಿವಶರಣಪ್ಪ ಸಿರಿ ಉಪಸ್ಥಿತರಿರುವರು.

ಜ.೨೧ರ ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ಬಿರುದಾವಳಿಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯುವುದು. ಸಮಾರಂಭದ ಅಂಗವಾಗಿ ಜ.19ರಿಂದ 21ರವರೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜಾ ಮೇಹಕರ ಹಿರೇಮಠದ ರಾಜೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಪ್ರತಿ ದಿನ ಬೆಳಿಗ್ಗೆ 8.30ಕ್ಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.೧೮ಬಿಹೆಚ್‌ಆರ್ ೧: ರಂಭಾಪುರಿ ಶ್ರೀ